ಹೊಸನಗರದಲ್ಲಿ ಪ್ರಸನ್ನ ಭಟ್ ಪಾರ್ಥಿವ ಶರೀರದ ಮೆರವಣಿಗೆಗೆ ಸಕಲ ಸಿದ್ದತೆ|Prasanna bhat
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಾವತ್ತೂರು ಕೆರೆಯಲ್ಲಿ ಭಾನುವಾರ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಸಂಸದ ಬಿ.ವೈ ರಾಘವೇಂದ್ರರವರ ಫೋಟೋಗ್ರಾಫರ್ ಪ್ರಸನ್ನ ಭಟ್ (26) ಪಾರ್ಥಿವ ಶರೀರ ಇಂದು ಸಂಜೆ 5 ಗಂಟೆಗೆ ಹೊಸನಗರ ಪಟ್ಟಣದಲ್ಲಿರುವ ಮೃತನ ಸ್ವಗೃಹ ತಲುಪಲಿದ್ದು ಇದಕ್ಕೂ ಮೊದಲು ಅಂತಿಮ ದರ್ಶನಕ್ಕೆ ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ದಯಾನಂದ ಸಾಗರ ಆಸ್ಪತ್ರೆಯಿಂದ ಮರಣೋತ್ತರ ಪರೀಕ್ಷೆ ನಡೆದು ಈಗ ಶಿವಮೊಗ್ಗಕ್ಕೆ ಆ್ಯಂಬುಲೆನ್ಸ್ ಮೂಲಕ ಪ್ರಸನ್ನರ ಮೃತದೇಹ ಬರುತ್ತಿದ್ದು ಸುಮಾರು 4-15 ರಿಂದ…


