Headlines

ಪೆಟ್ರೋಲ್ ಟ್ಯಾಂಕರ್ ಪಲ್ಟಿ : ಜೀವ ಭಯ ಬಿಟ್ಟು ಪೆಟ್ರೋಲ್ ತುಂಬಿಸಿಕೊಳ್ಳಲು ಜನರಿಂದ ನೂಕು‌ನುಗ್ಗಲು

ಶಿವಮೊಗ್ಗ: ಜಾವಳ್ಳಿ ಸಮೀಪದಲ್ಲಿ ಇಂದು ಮದ್ಯಾಹ್ನ ಪೆಟ್ರೋಲ್ ತುಂಬಿದ ಟ್ಯಾಂಕರ್‌ವೊಂದು ಪಲ್ಟಿಯಾಗಿರುವ ಘಟನೆ ವರದಿಯಾಗಿದೆ. ಜಾವಳ್ಳಿ ಅರಬಿಂದೂ ಶಾಲೆಯ ಸಮೀಪ ಸೊಲ್ಲಾಪುರ ಮತ್ತು ಮಂಗಳೂರು ಹೈವೆ ರಸ್ತೆಯಲ್ಲಿ ಸಾಗುತ್ತಿದ್ದ ಪೆಟ್ರೋಲ್ ತುಂಬಿದ ಲಾರಿಯೊದು ಪಕ್ಕಕ್ಕೆ ಉರುಳಿ ಬಿದ್ದಿದೆ. ಮಂಗಳೂರಿನಿಂದ 12½ ಸಾವಿರ ಲೀಟರ್ ಪೆಟ್ರೋಲ್ ನ್ನ ಹೊತ್ತು ಹೋಗುತ್ತಿದ್ದ ಲಾರಿ ರಸ್ತೆಗೆ ಉರುಳಿದೆ. ಅಕ್ಕಪಕ್ಕದ ಜನ ಕೊಡಪಾನ ಬಕೆಟ್ ನಲ್ಲಿ ತುಂಬಿಸಿಕೊಂಡು ಹೋಗಿರುವ‌ಮಾಹಿತಿ ಲಭ್ಯವಾಗಿದ್ದು ಸ್ಥಳಕ್ಕೆ ಪೊಲೀಸರು ಬಂದು ಸಾರ್ವಜನಿಕರನ್ನ ಚದುರಿಸಿದ್ದಾರೆ. ಟ್ಯಾಂಕರ್ ಪಲ್ಟಿಯಾದ ಸಮಯದಲ್ಲಿ ಜನರು…

Read More

ಎಚ್ಚರ , ನಿಮ್ಮ ಮೊಬೈಲ್ ನಲ್ಲಿ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಇಟ್ಟುಕೊಳ್ಳುವುದು ಅಪರಾಧ – ಕ್ರಮಕ್ಕೆ ಮುಂದಾದ ಎಸ್ ಐಟಿ | SIT

ಎಚ್ಚರ , ನಿಮ್ಮ ಮೊಬೈಲ್ ನಲ್ಲಿ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಇಟ್ಟುಕೊಳ್ಳುವುದು ಅಪರಾಧ – ಕ್ರಮಕ್ಕೆ ಮುಂದಾದ ಎಸ್ ಐಟಿ | SIT ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡದಂತೆ ಎಸ್‌ಐಟಿ ಖಡಕ್ ಸೂಚನೆ ನೀಡಿತ್ತು. ಈಗ ಅಶ್ಲೀಲ ವೀಡಿಯೋಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದ ಅಪರಾಧ ಎಂಬುದಾಗಿ ಮನವರಿಕೆ ಮಾಡಿಕೊಟ್ಟಿದೆ. ಈ ಕುರಿತು ಸಿಐಟಿಯ ವಿಶೇಷ ತನಿಖಾ ತಂಡದ ಮುಖ್ಯಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದರಲ್ಲಿ…

Read More

ಕೆಲಸಕ್ಕೆ ಹೋಗು ಎಂದು ಬುದ್ದಿವಾದ ಹೇಳಿದ್ದಕ್ಕೆ ವಿಷ ಸೇವಿಸಿ ಯುವಕ ಆತ್ಮಹತ್ಯೆ | Crime News

ಕೆಲಸಕ್ಕೆ ಹೋಗು ಎಂದು ಬುದ್ದಿವಾದ ಹೇಳಿದ್ದಕ್ಕೆ ವಿಷ ಸೇವಿಸಿ ಯುವಕ ಆತ್ಮಹತ್ಯೆ ಮನೆಯಲ್ಲಿ ಪೋಷಕರು ಕೆಲಸಕ್ಕೆ ಹೋಗು ಎಂದು ಬುದ್ದಿವಾದ ಹೇಳಿದ್ದಕ್ಕೆ ವಿಷ ಸೇವಿಸಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹಳೇ ಕೋಡಿಹಳ್ಳಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಸಾಗರ್ (29) ಎಂದು ಗುರುತಿಸಲಾಗಿದೆ. ಕೆಲಸಕ್ಕೆ ಹೋಗು ಎಂದು ಮನೆಯವರು ಹೇಳಿದ್ದಕ್ಕೆ ಈತ ಫೆ.19 ರಂದು ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು, ಕೂಡಲೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ…

Read More

SHIVAMOGGA | ವೈಭವದ ದಸರಾ ಮೆರವಣಿಗೆ

SHIVAMOGGA | ವೈಭವದ ದಸರಾ ಮೆರವಣಿಗೆ ಶಿವಮೊಗ್ಗ ದಸರಾ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ದೊರೆತಿದೆ. ಸಕ್ರೆಬೈಲು ಬಿಡಾರದ ಆನೆ ಸಾಗರ ನೇತೃತ್ವದಲ್ಲಿ ಜಂಬೂಸವಾರಿಗೆ ಚಾಲನೆ ನೀಡಲಾಗಿದೆ. ಶಿವಪ್ಪ ನಾಯಕ ಅರಮನೆ ಸಮೀಪ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಜಂಬೂಸವಾರಿಗೆ ಚಾಲನೆ ನೀಡಲಾಗಿದೆ. ಸುಮಾರು 450 ಕೆಜಿ ತೂಕದ ಬೆಳ್ಳಿಯ ಅಂಬಾರಿ ಹೊತ್ತು ಸಾಗರ ಆನೆ ಸಾಗಿದೆ. ಸಚಿವ ಮಧು ಬಂಗಾರಪ್ಪ ದಂಪತಿ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಬಲ್ಕಿಶ್ ಬಾನು, ಡಾ. ಧನಂಜಯ ಸರ್ಜಿ…

Read More

ಅಂತರರಾಜ್ಯ ಕಳ್ಳನ ಕಾಲಿಗೆ ಪೊಲೀಸರ ಗುಂಡೇಟು

ಅಂತರರಾಜ್ಯ ಕಳ್ಳನ ಕಾಲಿಗೆ ಪೊಲೀಸರ ಗುಂಡೇಟು ಶಿವಮೊಗ್ಗದಲ್ಲಿ ಕುಖ್ಯಾತ ಅಂತರರಾಜ್ಯ ಕಳ್ಳ ಮಂಜುನಾಥ್ ಅಲಿಯಾಸ್ ಕಲ್ಕೆರೆ ಮಂಜನನ್ನು ಬಂಧಿಸುವ ಕಾರ್ಯಾಚರಣೆ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಜಯನಗರ ಠಾಣೆ ಪೊಲೀಸರು ಇಂದು (ಗುರುವಾರ, ಜೂನ್ 5, 2025) ಬೆಳಗ್ಗೆ ಈ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು ಕಲ್ಕೆರೆ ಮೂಲದ 47 ವರ್ಷ ಮಂಜ, ಕುಖ್ಯಾತ ಕಳ್ಳನಾಗಿದ್ದು, ಆತನ ವಿರುದ್ಧ ಹಲವು ಪ್ರಕರಣಗಳಿವೆ. ಈತ ಕಳೆದ ಕೆಲವು ದಿನಗಳಿಂದ ಕಲ್ಕೆರೆ ಮಂಜ ಶಿವಮೊಗ್ಗದಲ್ಲಿ ಓಡಾಡುತ್ತಿದ್ದ. ಈ ಸಂಬಂಧ …

Read More

ಗಣೇಶೋತ್ಸವ , ಈದ್ ಮಿಲಾದ್ ಶಾಂತಿ ಸಭೆ | ಶಾಂತಿ ಕದಡುವವರ ವಿರುದ್ದ ಕಠಿಣ ಕ್ರಮ – ಅಡಿಷನಲ್ ಎಸ್ ಪಿ ಕಾರ್ಯಪ್ಪ ಎ ಜಿ

ಗಣೇಶೋತ್ಸವ , ಈದ್ ಮಿಲಾದ್ ಶಾಂತಿ ಸಭೆ | ಶಾಂತಿ ಕದಡುವವರ ವಿರುದ್ದ ಕಠಿಣ ಕ್ರಮ – ಅಡಿಷನಲ್ ಎಸ್ ಪಿ ಕಾರ್ಯಪ್ಪ ಎ ಜಿ ರಿಪ್ಪನ್ ಪೇಟೆ : ಗಣೇಶೋತ್ಸವ ಈದ್‌ಮಿಲಾದ್ ಹಬ್ಬಕ್ಕೆ ಡಿಜೆ ಸಂಪೂರ್ಣ ನಿಷೇಧಿಸಲಾಗಿದ್ದು, ಹಬ್ಬದ ಸಂದರ್ಭದಲ್ಲಿ ಶಾಂತಿ ಕದಡುವವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದೆಂದು  ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎ ಜಿ ಕಾರ್ಯಪ್ಪ ತಿಳಿಸಿದರು. ರಿಪ್ಪನ್‌ಪೇಟೆ ಪೊಲೀಸ್ ಇಲಾಖೆಯವರು ಶಿವಮಂದಿರದಲ್ಲಿ ಆಯೋಜಿಸಲಾದ ಶಾಂತಿಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಣೇಶೋತ್ಸವ ಮತ್ತು ಈದ್‌ಮಿಲಾದ್ ಹಬ್ಬಗಳು ಶಾಂತಿ…

Read More

ಕುಡುಕರ ನೆಚ್ಚಿನ ತಾಣವಾದ ಬಸ್‌ ನಿಲ್ದಾಣ! – ಪ್ರಯಾಣಿಕರ ಗೋಳು ಕೇಳುವವರ್ಯಾರು.!?

ಕುಡುಕರ ನೆಚ್ಚಿನ ತಾಣವಾದ ಬಸ್‌ ನಿಲ್ದಾಣ! – ಪ್ರಯಾಣಿಕರ ಗೋಳು ಕೇಳುವವರ್ಯಾರು.!? ರಿಪ್ಪನ್‌ಪೇಟೆ : ಇಲ್ಲಿನ ವಿನಾಯಕ ವೃತ್ತದಲ್ಲಿರುವ ಬಸ್ ನಿಲ್ದಾಣ ಪ್ರಯಾಣಿಕರ ಅನುಕೂಲಕ್ಕೆ ಬಾರದೇ ಪುಂಡ ಕುಡುಕರ ತಾಣವಾಗಿ ಮಾರ್ಪಟ್ಟು ಮಹಿಳೆಯರು , ವೃದ್ದರು ಹಾಗೂ ಶಾಲಾ ಕಾಲೇಜು ಮಕ್ಕಳು ಪರದಾಡುವಂತಾಗಿದೆ. ಹೌದು ಮಲೆನಾಡಿನ ಅನೇಕ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣಗಳಿಗೆ ಸಂಪರ್ಕ ಕೊಂಡಿಯಾಗಿರುವ ರಿಪ್ಪನ್‌ಪೇಟೆ ಪಟ್ಟಣದಲ್ಲಿ ಬಸ್ ನಿಲ್ದಾಣವಿಲ್ಲದೇ ಪ್ರಯಾಣಿಕರು ಪರದಾಡುತ್ತಿರುವು ಹಲವು ದಶಕಗಳ ಗೋಳಾಗಿದೆ.ಇನ್ನೂ ತೀರ್ಥಹಳ್ಳಿ ರಸ್ತೆ ಹಾಗೂ ಹೊಸನಗರ ರಸ್ತೆಯ…

Read More

ಮಿದುಳು ನಿಷ್ಕ್ರಿಯಗೊಂಡು ಏಳು ವರ್ಷದ ಬಾಲಕ ಸಾವು : ನೇತ್ರದಾನ ಮಾಡಿ ಉದಾರತೆ ಮೆರೆದ ಪೋಷಕರು|Eyedonate

ರಿಪ್ಪನ್ ಪೇಟೆ : ಏಳು ವರ್ಷದ ಮಗುವಿನ ಮೆದುಳಿನಲ್ಲಿ ರಕ್ತಸ್ತ್ರಾವ ಉಂಟಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿತ್ತು. ಮಗನನ್ನು ಬದುಕಿಸುವುದಕ್ಕೆ ಪೋಷಕರು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಮೆದುಳು ನಿಷ್ಕ್ರೀಯಗೊಂಡ ಬಳಿಕ ಬಾಲಕ ಸಾವಿನ ಮನೆಯ ಅಂಚು ತಲುಪಿಯಾಗಿತ್ತು. ಎತ್ತಿ ಮುದ್ದಾಡಿ ಸಾಕಿ ಸಲುಹಿದ ಪುಟ್ಟ ಮಗನ ಸಾವಿನ ನೋವಿನ ನಡುವೆಯೂ ಪೋಷಕರು ಆತನ ಅಂಗಾಂಗ ದಾನ ಮಾಡುವ ನಿರ್ಧಾರ ಮಾಡಿದ್ದಾರೆ. ಈ ಮೂಲಕ ಮಗನ ಸಾವಿನ ನೋವಿನಲ್ಲಿಯೂ ಸಾರ್ಥಕತೆಯನ್ನು ಮೆರೆದಿದ್ದಾರೆ. ಹೌದು…

Read More

RIPPONPETE | ಪತ್ರಕರ್ತ ಚಿದಾನಂದ ಸ್ವಾಮಿರವರಿಗೆ ಮಾತೃ ವಿಯೋಗ

ಪತ್ರಕರ್ತ ಚಿದಾನಂದ ಸ್ವಾಮಿರವರಿಗೆ ಮಾತೃ ವಿಯೋಗ ರಿಪ್ಪನ್‌ಪೇಟೆ: ಪಟ್ಟಣದಲ್ಲಿ ವಿಜಯವಾಣಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಚಿದಾನಂದ ಸ್ವಾಮಿ ಅವರ ತಾಯಿ ಮುರಿಗೆಮ್ಮ (85) ಅವರು ನಿಧನರಾಗಿದ್ದಾರೆ. ಶಿವಮೊಗ್ಗ ರಸ್ತೆಯ ನಿವಾಸಿಗಿದ್ದ ದಿ. ಗುರುಪಾದಯ್ಯರವರ ಧರ್ಮಪತ್ನಿ ಹಾಗೂ ಪತ್ರಕರ್ತ ಚಿದಾನಂದ ಸ್ವಾಮಿಯವರ ತಾಯಿ ಮುರಿಗೆಮ್ಮ (85) ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಅವರು ಭಾನುವಾರ ಸಂಜೆ ತಮ್ಮ ಸ್ವಗೃಹದಲ್ಲಿ ಲಿಂಗೈಕ್ಯರಾದರು. ಮೃತರು ಪುತ್ರರು, ಸೊಸೆ, ಮಕ್ಕಳು , ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಸಂತಾಪ :ಅಲ್ಪಕಾಲದ ಅನಾರೋಗ್ಯದಿಂದ ಲಿಂಗೈಕ್ಯರಾದ…

Read More

ರಿಪ್ಪನ್‌ಪೇಟೆ : ಅಕ್ರಮವಾಗಿ ಜಂಬಿಟ್ಟಿಗೆ ಸಾಗಿಸುತಿದ್ದ ಲಾರಿ ವಶಕ್ಕೆ|Illegal quarrying

ಅಕ್ರಮವಾಗಿ ಜಂಬಿಟ್ಟಿಗೆ ಸಾಗಿಸುತಿದ್ದ ಲಾರಿ ವಶಕ್ಕೆ ರಿಪ್ಪನ್‌ಪೇಟೆ : ಅಕ್ರಮವಾಗಿ ಜಂಬಿಟ್ಟಿಗೆ ಸಾಗಿಸುತ್ತಿದ್ದ ಲಾರಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದ್ದಾರೆ. ಹೊಸನಗರ ಮತ್ತು ರಿಪ್ಪನ್‌ಪೇಟೆ ರಾಜ್ಯ ಹೆದ್ದಾರಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಗಸ್ತು ತಿರುಗುತಿದ್ದಾಗ ಚಿಕ್ಕಜೇನಿ ಸಮೀಪದಲ್ಲಿ ಅಕ್ರಮವಾಗಿ ಜಂಬಿಟ್ಟಿಗೆ ಸಾಗಿಸುತಿದ್ದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಲಾರಿಯನ್ನು ಹೆಚ್ಚಿನ ತನಿಖೆಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

Read More
Exit mobile version