Headlines

ಚಲಿಸುತ್ತಿದ್ದ ಪ್ಯಾಸೇಂಜರ್ ಆಟೋದಿಂದ ಬಿದ್ದು ಬಾಲಕ ಸಾವು :

 ಸೊರಬ : ತಾಲೂಕಿನ ಶಿಡ್ಡಿಹಳ್ಳಿ ಗ್ರಾಮದಿಂದ ಹಸ್ವೀ ಗ್ರಾಮಕ್ಕೆ ಪ್ಯಾಸೆಂಜರ್ ಆಟೋದಲ್ಲಿ ತೆರಳುವಾಗ 9 ವರ್ಷದ ಬಾಲಕ ಆಟೋದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಆನವಟ್ಟಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ. ಮಾಲತೇಶ್ ಎಂಬ 9 ವರ್ಷದ ಬಾಲಕ ಪ್ಯಾಸೆಂಜರ್ ಆಟೋದ ಹಿಂಬದಿಯ ಫುಟ್ ಬೋರ್ಡ್ ನಲ್ಲಿ ನಿಂತಿದ್ದು, ಆಟೋವನ್ನು ಅರುಣ್ ಎಂಬ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷದಿಂದ ಚಲಾಯಿಸಿದ ಪರಿಣಾಮ ಮಾಲತೇಶ್ ಶಿಡ್ಡಿಹಳ್ಳಿ ಗ್ರಾಮದ ಈಶ್ವರ ದೇವಸ್ಥಾನದ ತಿರುವಿನ ಬಳಿ ಬಿದ್ದಿದ್ದಾನೆ. ಎದೆ ಹಾಗೂ ಎಡಕಣ್ಣಿಗೆ ತೀವ್ರವಾಗಿ ಹೊಡೆತ…

Read More

ಒಂದು ಬೈಕ್ ಕಳ್ಳತನದ ತನಿಖೆ ಕೈಗೊಂಡ ಪೊಲೀಸರಿಗೆ ಕಳ್ಳರು ಕೊಟ್ಟರು ಬಿಗ್ ಶಾಕ್.!!!!!! : 16 ಬೈಕ್ ಸೇರಿ 1 ಕಾರು ವಶ

ಒಂದು ಬೈಕ್ ಬೆನ್ನತ್ತಿದ್ದ ಪೊಲೀಸರಿಗೆ ದೊರೆತಿದ್ದು ಬರೋಬ್ಬರಿ 16 ಬೈಕ್,ಒಂದು ಕಾರು ಜೊತೆಗೆ ಶ್ರೀಗಂಧವೂ ಪತ್ತೆಯಾಗಿದೆ. ಬೈಕ್ ವೊಂದರ ಕಳ್ಳತನ ಪ್ರಕರಣದ ಬೆನ್ನತ್ತಿದ ಶಿರಾಳಕೊಪ್ಪ ಪೊಲೀಸರಿಗೆ ಕಳ್ಳರು ಕೊಟ್ಟರು ಬಿಗ್ ಶಾಕ್. ಶಿರಾಳಕೊಪ್ಪ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ನಿಲ್ಲಿಸಿದ್ದ ಕೆ.ಎ-17 ಇ.ಎ-4008 ನೋಂದಣಿ ಸಂಖ್ಯೆಯ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳುವು ಆಗಿರುವ ಬಗ್ಗೆ ಠಾಣೆಯಲ್ಲಿ ದೂರು‌ ದಾಖಲಾಗಿತ್ತು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಪ್ರಾರಂಭಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಈ ಸಂಬಂಧ ಪಿಎಸ್ಐ…

Read More

ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ನಾನು ಪ್ರಬಲ ಟಿಕೆಟ್ ಆಕಾಂಕ್ಷಿ – ಬೇಳೂರು ಗೋಪಾಲಕೃಷ್ಣ|gkb

ಶಿವಮೊಗ್ಗ ಲೋಕಸಭಾ ಚುನಾಣೆಯಲ್ಲಿ ಕಾಂಗ್ರೆಸ್ ನಿಂದ ನಾನು ಪ್ರಬಲ ಟಿಕೆಟ್ ಆಕಾಂಕ್ಷಿ – ಬೇಳೂರು ಗೋಪಾಲಕೃಷ್ಣ ಬೆಂಗಳೂರು : ಈ ಬಾರಿಯ ಲೋಕಸಭೆ ಚುನಾವಣೆ ಹಿನ್ನೆಲೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಆಗಲು ನಿರ್ಧರಿಸಿದ್ದೇನೆ ಎಂದು ಸಾಗರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದ ಬಿಜೆಪಿಯವರ ದುರಾಡಳಿತ ಕೊನೆ ಮಾಡಲು ನಾನೇ ಸಮರ್ಥ ಅಭ್ಯರ್ಥಿ.ಹಾಗಾಗಿ, ಕ್ಷೇತ್ರಕ್ಕೆ ನಾನು ಕಾಂಗ್ರೆಸ್‍ನಿಂದ ಪ್ರಬಲ ಅಭ್ಯರ್ಥಿ ಆಗಬಲ್ಲೆ.ನನಗೆ ಟಿಕೆಟ್ ಕೊಟ್ಟರೆ ಗೆಲುವು ಸಾಧಿಸಲಿದ್ದೇನೆ ಎಂದು…

Read More

ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆಸ್ಪತ್ರೆ ಎದುರಲ್ಲಿ ಬಿಸಾಡಿ ಹೋದ ಪತಿರಾಯ|Assault

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಸಮೀಪದ  ಕೈನಲ್ಲಿ ಎಂಬ ಗ್ರಾಮದ ಮುರುಳಿ ಎಂಬಾತ ತನ್ನ ಪತ್ನಿ ಮೇಲೆ ಹಲ್ಲೆ ನೆಡೆಸಿ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಯ ಬಳಿ ಬಿಸಾಕಿ ಹೋದ ಅಮಾನವೀಯ ಘಟನೆ ಇಂದು ಸಂಜೆ ವೇಳೆ ನೆಡೆದಿದೆ. ಬೆಂಗಳೂರು ಮೂಲದ ಮುರುಳಿ ಕೈನಲ್ಲಿಯ ಮಹಿಳೆಯೊಬ್ಬರನ್ನು ಮದುವೆಯಾಗಿದ್ದನು. ನಂತರ ಇಲ್ಲೇ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಆತ ತನ್ನ ಪತ್ನಿಯ ಮೇಲೆ ಭೀಕರ ರೀತಿಯಲ್ಲಿ ಹಲ್ಲೆ ನೆಡೆಸಿ ಆಸ್ಪತ್ರೆ ಬಳಿ ಬಿಸಾಕಿ ಹೋಗಿದ್ದಾನೆ. ಮಹಿಳೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ…

Read More

ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ಎಚ್ಚರಿಕೆ: ಹರತಾಳು ಹಾಲಪ್ಪ

Former minister Haratallu Halappa issues a legal notice to Sagar MLA Belluru Gopalakrishna over alleged false statements on Siganduru Temple, warning of a ₹5 crore defamation lawsuit. ಬೆಂಗಳೂರು: ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿರುವುದಾಗಿ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ತಿಳಿಸಿದ್ದಾರೆ. ಸಮರ್ಪಕ ಉತ್ತರ ನೀಡದಿದ್ದಲ್ಲಿ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ಎಚ್ಚರಿಸಿದರು….

Read More

ಕಾಂಗ್ರೆಸ್ಸಿಗರು ಹತಾಶರಾಗಿ‌ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ : ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ : ರಾಜ್ಯದ ಎರಡೂ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ. ಇದನ್ನು ಅರಿತಿರುವ ಕಾಂಗ್ರೆಸ್ಸಿಗರು ಹತಾಶರಾಗಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲಿನ ಭೀತಿಯಿಂದಾಗಿ ಕಾಂಗ್ರೆಸ್ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್​ ನಾಯಕರ ಅಪ ಪ್ರಚಾರ ಇಲ್ಲದಿದ್ದರೆ ಕೋವಿಡ್ 2ನೇ ಡೋಸ್​ ನೀಡಿಕೆಯಲ್ಲಿ ಇನ್ನಷ್ಟು ಪ್ರಗತಿ ಆಗುತ್ತಿತ್ತು. ಆದಾಗ್ಯೂ, ಇಡೀ ವಿಶ್ವವೇ ಮೆಚ್ಚುವಂತಹ ರೀತಿ ಕೊರೊನಾ ಲಸಿಕೆ…

Read More

ಕರ್ನಾಟಕದ ನೂತನ ಉಪ ಮುಖ್ಯಮಂತ್ರಿಗಳಾಗಿ ಆರ್ ಅಶೋಕ್,ಗೋವಿಂದ ಕಾರಜೋಳ, ಶ್ರೀರಾಮುಲು ಆಯ್ಕೆ:

ಬೆಂಗಳೂರು: ಮುಖ್ಯಮಂತ್ರಿ ಘೋಷಣೆ ಬಳಿಕ ಮೂವರು ಉಪಮುಖ್ಯಮಂತ್ರಿಗಳ ಹೆಸರು ಘೋಷಣೆ ಮಾಡಲಾಗಿದೆ. ಈ ಮೊದಲು ಕಂದಾಯ ಸಚಿವರಾಗಿದ್ದ ಹಾಗೂ ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಆರ್. ಅಶೋಕ್, ಗೋವಿಂದ ಕಾರಜೋಳ ಮತ್ತು ಬಿ. ಶ್ರೀರಾಮುಲು ಉಪಮುಖ್ಯಮಂತ್ರಿಗಳಾಗಿ ನೇಮಕಗೊಂಡಿದ್ದಾರೆ. ಒಕ್ಕಲಿಗ, ದಲಿತ ಮತ್ತು ವಾಲ್ಮೀಕಿ ಸಮುದಾಯಕ್ಕೆ ಸೇರಿದ ನಾಯಕರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ. ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿಕೃತ ಘೋಷಣೆ ಮಾಡಲಾಗಿದೆ. ಹೆಸರು ಘೋಷಣೆ ಬಳಿಕ ಬಸವರಾಜ ಬೊಮ್ಮಾಯಿ…

Read More

ಅಂತರ್ ಜಿಲ್ಲಾ ಬೈಕ್ ಕಳ್ಳರ ಹೆಡೆಮುರಿ ಕಟ್ಟಿದ ಸಾಗರದ ಪೊಲೀಸರು : ಮೂವತ್ತು ಲಕ್ಷಕ್ಕೂ ಅಧಿಕ ಮೌಲ್ಯದ ಬೈಕ್ ಗಳು ವಶ

ಶಿವಮೊಗ್ಗ ಜಿಲ್ಲೆ ಸಾಗರ ಪೋಲಿಸರ ಚಾಣಾಕ್ಷತನದಿಂದ ಅಂತರ್ ಜಿಲ್ಲೆಗಳಲ್ಲಿ ಬೈಕ್  ಕಳ್ಳತನ ಮಾಡುತ್ತಿದ್ದ 3 ಜನ ಆರೋಪಿಗಳನ್ನು ಬಂಧಿಸಿ ಮೂವತ್ತು ಲಕ್ಷಕ್ಕೂ ಅಧಿಕ ಮೌಲ್ಯದ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ ಬೈಕ್ ಗಳನ್ನು ಸಾಗರದ ಚಾಣಾಕ್ಷ  ಪೊಲೀಸರು ವಶಪಡಿಸಿಕೊಂಡು ಕಳ್ಳರನ್ನು ಬಂಧಿಸಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಬೈಕ್ ಕಳ್ಳತನ ಆಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಯವರ ಸೂಚನೆ ಮೇರೆಗೆ ಸಾಗರ ಎಎಸ್ಪಿ ರೋಹನ್ ಜಗದೀಶ್ ರವರ ಮಾರ್ಗದರ್ಶನದಲ್ಲಿ ಸಾಗರ ಪೊಲೀಸರು  ಕಾರ್ಯಾಚರಣೆ…

Read More

RIPPONPETE | ಗೋಮಾಂಸ ಸಾಗಾಟ – ವಾಹನ ಸಹಿತ ಮೂವರ ಬಂಧನ

RIPPONPETE | ಗೋಮಾಂಸ ಸಾಗಾಟ – ವಾಹನ ಸಹಿತ ಮೂವರ ಬಂಧನ ರಿಪ್ಪನ್‌ಪೇಟೆ : ಅಕ್ರಮವಾಗಿ ಗೋಮಾಂಸ ಸಾಗಿಸುತಿದ್ದ ಮೂವರು ಆರೋಪಿಗಳನ್ನು ಮಾಲು ಸಮೇತ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಇಂದು ಬೆಳಿಗ್ಗೆ ತೀರ್ಥಹಳ್ಳಿ ರಸ್ತೆಯ ಕಣಬಂದೂರು ರಸ್ತೆಯ ಬಳಿ ಪೊಲೀಸ್ ಸಿಬ್ಬಂದಿಗಳು ಗಸ್ತು ತಿರುಗುತಿದ್ದಾಗ ಪ್ಯಾಸೆಂಜರ್ ಆಟೋವೊಂದನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಸುಮಾರು 19ಸಾವಿರ ರೂ ಮೌಲ್ಯದ 80 ಕೆ ಜಿ ದನದ ಮಾಂಸವಿರುವುದ ಕಂಡು ಬಂದಿದೆ. ಮಾಂಸವನ್ನು ಎಲ್ಲಿಂದ ತಂದಿರುವುದಾಗಿ ಆರೋಪಿಗಳನ್ನು  ವಿಚಾರಿಸಿದಾಗ ಗರ್ತಿಕೆರೆ…

Read More

ಹೊಸನಗರ ಎಪಿಎಂಸಿ ವಿಲೀನ ಪ್ರಕ್ರಿಯೆ ಕೈ ಬಿಡಲಾಗಿದೆ : ಶಾಸಕ ಹರತಾಳು ಹಾಲಪ್ಪ ಸ್ಪಷ್ಟನೆ

ಹೊಸನಗರ ಎಪಿಎಂಸಿ ಮಾರುಕಟ್ಟೆಯನ್ನು ಸಾಗರ ಎಪಿಎಂಸಿಯೊಂದಿಗೆ ಸಂಯೋಜಿಸಿರುವ ಪ್ರಕ್ರೀಯೆಯನ್ನು ಕೈ ಬಿಡಲಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ಸ್ಪಷ್ಟನೆ ನೀಡಿದ್ದಾರೆ. ಸಾಗರ – ಹೊಸನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಒಟ್ಟುಗೂಡಿಸುವ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳು ಬಂದ ಕಾರಣ  ಸರ್ಕಾರದೊಂದಿಗೆ ಚರ್ಚಿಸಿ ಪ್ರಸ್ತಾವನೆಯನ್ನು ಕೈಬಿಡುವಂತೆ ಕೋರಲಾಗಿತ್ತು ಈ ಹಿನ್ನಲೆಯಲ್ಲಿ ಸದರಿ ಪ್ರಸ್ತಾವನೆಯನ್ನು ಕೈಬಿಡಲು ಸರ್ಕಾರದಿಂದ ಸಮ್ಮತಿ ದೊರೆತಿದ್ದು, ಈ ಹಿಂದಿನಂತೆಯೆ ಸಾಗರ ಮತ್ತು ಹೊಸನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಕರ್ತವ್ಯ ನಿರ್ವಹಿಸುತ್ತವೆ ಹಾಗು ಕೃಷಿ ಉತ್ಪನ್ನ…

Read More
Exit mobile version