Headlines

ರಿಪ್ಪನ್ ಪೇಟೆ : ಕಳಪೆ ಚರಂಡಿ ಕಾಮಗಾರಿ,ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಬರುವೆ ಶಾಲೆಯ ಮುಂಭಾಗದ ರಸ್ತೆ

ರಿಪ್ಪನ್ ಪೇಟೆ: ಇಲ್ಲಿನ ಚೌಡೇಶ್ವರಿ ಬೀದಿಯ ಬರುವೆ ಶಾಲೆಯ ಮುಂಭಾಗ 2018 ರಲ್ಲಿ ಲಕ್ಷಾಂತರ ರೂ ಖರ್ಚು ಮಾಡಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ನಿರ್ಮಿಸಿದ್ದ ಪ್ರವಾಹ ನಿಯಂತ್ರಣ ಕಾಲುವೆಯ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು ನಿರ್ಮಿಸಿದ್ದ ಅಷ್ಟು ಚರಂಡಿಯು ಕುಸಿದು ಮುಚ್ಚಿ ಹೋಗಿದ್ದು ಈ ರಸ್ತೆಯು ಅಪಾಯಕ್ಕೆ ಆಹ್ವಾನ ಕೊಡುತ್ತಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಅನುದಾನದದಡಿ  ಲಕ್ಷಾಂತರ ವೆಚ್ಚದಲ್ಲಿ ಕೈಗೊಂಡ ಪ್ರವಾಹ ನಿಯಂತ್ರಣ ಚರಂಡಿ ನಿರ್ಮಾಣ ಕಾಮಗಾರಿ ಕಳಪೆಯಾಗಿ ಮುಚ್ಚಿ ಹೋಗಿದೆ.ಈ…

Read More

ಶಿವಮೊಗ್ಗ ಜಿಲ್ಲೆಯಲ್ಲಿ ಲಾಕ್​ಡೌನ್​ ಬಳಿಕ ಹೆಚ್ಚಿದ ಪೋಕ್ಸೋ ಪ್ರಕರಣಗಳು :

ಶಿವಮೊಗ್ಗ: ಜಿಲ್ಲೆಯಲ್ಲಿ ಪೋಕ್ಸೋ ಕಾಯಿದೆ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು‌ ಹೆಚ್ಚಳವಾಗುತ್ತಿದೆ ಎಂದು ಶಿವಮೊಗ್ಗ ಎಸ್​ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಕೊರೊನಾ ಬಳಿಕ ಪೋಕ್ಸೋ ಕಾಯಿದೆ  ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುತ್ತಿದೆ. ಕಳೆದ 4 ವರ್ಷದಿಂದ ಪ್ರತಿವರ್ಷ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. 2017ರಲ್ಲಿ 87 ಪ್ರಕರಣಗಳು, 2018ರಲ್ಲಿ 99 ಪ್ರಕರಣಗಳು, 2019ರಲ್ಲಿ 117 ಪ್ರಕರಣಗಳು ಪೋಕ್ಸೋ ಕಾಯಿದೆ ಅಡಿ ಪ್ರಕರಣ ದಾಖಲಾಗಿತ್ತು. ಆದರೆ ಕಳೆದ ವರ್ಷ 2020ರಲ್ಲಿ ಜಿಲ್ಲೆಯಲ್ಲಿ…

Read More

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಇಬ್ಬರು ಮೆಡಿಕಲ್‌ ವಿದ್ಯಾರ್ಥಿಗಳ ದುರ್ಮರಣ

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಇಬ್ಬರು ಮೆಡಿಕಲ್‌ ವಿದ್ಯಾರ್ಥಿಗಳ ದುರ್ಮರಣ ಶಿವಮೊಗ್ಗ: ನಗರದ ಸರ್ಕ್ಯೂಟ್‌ ಹೌಸ್‌ ಸರ್ಕಲ್‌ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಎಂಬಿಬಿಎಸ್‌ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ ಹಾಗೂ ನಂದಿನಿ ಹಾಲಿನ ವಾಹನ ಪರಸ್ಪರ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ನಡೆದಿದೆ. ಮೃತರನ್ನು ಮೂರನೇ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳಾದ ಆದಿತ್ಯ ಮತ್ತು ಸಂದೀಪ್ ಎಂದು ಗುರುತಿಸಲಾಗಿದೆ. ಅಪಘಾತದ ವೇಳೆ ಇಬ್ಬರೂ ತೀವ್ರವಾಗಿ ರಸ್ತೆ ಮೇಲೆ ಬಿದ್ದು…

Read More

Ex Mla |ರಿಪ್ಪನ್‌ಪೇಟೆ : ಮಾಜಿ ಶಾಸಕ ಡಾ. ಉಮಾಕಾಂತ್ ಬಿ ಬೋರ್ಕರ್ ನಿಧನ

ರಿಪ್ಪನ್‌ಪೇಟೆ : ಶಿರಸಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬೋರ್ಕರ್ ಉಮಾಕಾಂತ್(84) ರವರು ಇಂದು ಮುಂಜಾನೆ ವಯೋಸಹಜ ನಿಧನರಾಗಿದ್ದಾರೆ. ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ 1978ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಬೋರ್ಕರ್ ಉಮಾಕಾಂತ್ ಗೆಲುವು ಸಾಧಿಸಿದ್ದರು. ಹಲವಾರು ವರ್ಷಗಳಿಂದ ಅವರು ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಅರಸಾಳು ಗ್ರಾಮದಲ್ಲಿ ವಾಸಿಸುತಿದ್ದು ಅವರ ಪತ್ನಿ ಮಂಜುಳಾ ಬೋರ್ಕರ್ ಪ್ರಮುಖ ರಾಜಕೀಯ ಪಕ್ಷವಾದ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದಾರೆ. 1978 ರಲ್ಲಿ ತುರ್ತು ಪರಿಸ್ಥಿತಿಯ ಪ್ರಭಾವದಿಂದ ಬೋರ್ಕರ್ ಉಮಾಕಾಂತ್ ಕಾಂಗ್ರೆಸ್‌ನ ರೇವಣಕರ್‌ ಶಂಕರ್‌ ಪುರುಷೋತ್ತಮ್‌…

Read More

ಹೊಸನಗರ ಮತ್ತು ಜಯನಗರದಲ್ಲಿ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ | Eid milad

ಹೊಸನಗರ ಪಟ್ಟಣ ಹಾಗೂ ಜಯನಗರದಲ್ಲಿ ಇಂದು ಮುಸ್ಲಿಂ ಬಾಂಧವರು ಸಂಭ್ರಮ ಸಡಗರದಿಂದ ಈದ್ ಮಿಲಾದ್ ಮೆರವಣಿ ಗೆಯಲ್ಲಿ ಪಾಲ್ಗೊಂಡು ಪ್ರವಾದಿ ಮಹಮದ್ ರವರ ಜನ್ಮದಿನವನ್ನು ಶ್ರದ್ದಾಪೂರ್ವಕವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಮಸೀದಿಯ ಧರ್ಮ ಗುರುಗಳು ಸಂದೇಶ ನೀಡಿ ಪ್ರವಾದಿ ಅವರ ಆಲೋಚನೆಗಳು ಅತ್ಯಂತ ಪ್ರಸ್ತುತವಾಗಿದೆ ಉತ್ತಮ ಸಮಾಜ ನಿರ್ಮಾಣಕ್ಕೆ ಅವರ ಗುರಿ ಸಂದೇಶಗಳು ಪೂರಕವಾಗಿದೆ ಮಾನವ ಜೀವನದ ಸಮಗ್ರ ಸುಧಾರಣೆ ಪ್ರವಾದಿ ಅವರ ಗುರಿಯಾಗಿತ್ತು.ಪ್ರವಾದಿಯವರ ಆಶೋತ್ತರಗಳು ಕೇವಲ ಇಸ್ಲಾಂ ಸಮುದಾಯಕ್ಕೆ ಮಾತ್ರವಲ್ಲದೆ ಜಗತ್ತಿನ ಮಾನವ ಕುಲದ ಪ್ರತಿಯೊಬ್ಬರಿಗೂ…

Read More

RIPPONPETE | ಜಯಘೋಷಗಳೊಂದಿಗೆ ಐತಿಹಾಸಿಕ ಹಿಂದೂ ರಾಷ್ಟ್ರ ಸೇನಾ ಗಣಪತಿ ಪ್ರತಿಷ್ಠಾಪನೆ

RIPPONPETE | ಜಯಘೋಷಗಳೊಂದಿಗೆ ಐತಿಹಾಸಿಕ ಹಿಂದೂ ರಾಷ್ಟ್ರ ಸೇನಾ ಗಣಪತಿ ಪ್ರತಿಷ್ಠಾಪನೆ ರಿಪ್ಪನ್‌ಪೇಟೆ : ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ ಸೇನಾ ಸಮಿತಿಯ 57 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಗಣೇಶ ಮೂರ್ತಿಯನ್ನು ಸಮಿತಿಯವರು ಶಿವಮೊಗ್ಗ ರಸ್ತೆಯ ವಿದ್ಯಾ ನಗರದಿಂದ ಮೆರವಣಿಗೆ ಮೂಲಕ ಕರೆತಂದು ತಿಲಕ್ ಮಂಟಪದಲ್ಲಿ ಪ್ರತಿಷ್ಠಾಪಿಸಿ ಮಹಾ ಮಂಗಳಾರತಿ ತೀರ್ಥಪ್ರಸಾದ ನೆರವೇರಿತು. ವಿದ್ಯಾ ನಗರದಿಂದ ವಿನಾಯಕ ವೃತ್ತದವರೆಗೂ ಮೆರವಣಿಗೆ ಮೂಲಕ ಗಣೇಶ ಮೂರ್ತಿಯನ್ನು ಕರೆತಂದು ವಿನಾಯಕ ವೃತ್ತದಲ್ಲಿ ಹಿಂದೂ  ಭಗವಧ್ವಜಾರೋಹಣ ನೆರವೇರಿಸಿ ಗಣಪತಿ…

Read More

ಸಕಾಲದಲ್ಲಿ ಚಿಕಿತ್ಸೆ ಲಭಿಸದೇ ವ್ಯಕ್ತಿ ಸಾವು ಆರೋಪ – ಆಲುವಳ್ಳಿ ವೀರೇಶ್ ನೇತೃತ್ವದಲ್ಲಿ ಬಿಜೆಪಿ ಪಕ್ಷದ ವತಿಯಿಂದ ದಿಡೀರ್ ಪ್ರತಿಭಟನೆ

ಸಕಾಲದಲ್ಲಿ ಚಿಕಿತ್ಸೆ ಲಭಿಸದೇ ವ್ಯಕ್ತಿ ಸಾವು ಆರೋಪ – ಆಲುವಳ್ಳಿ ವೀರೇಶ್ ನೇತೃತ್ವದಲ್ಲಿ ಬಿಜೆಪಿ ಪಕ್ಷದ ವತಿಯಿಂದ ದಿಡೀರ್ ಪ್ರತಿಭಟನೆ ರಿಪ್ಪನ್‌ಪೇಟೆ;- ಪಟ್ಟಣದ ಪ್ರಾಥಮಿಕಆರೋಗ್ಯಕೇಂದ್ರದಲ್ಲಿ  ಖಾಯಂ ವೈದ್ಯಾಧಿಕಾರಿಗಳು ಇಲ್ಲದೆ ಶುಕ್ರವಾರ ಬೆಳಗ್ಗೆ  ಕಲ್ಲೂರು ಗ್ರಾಮದ ರಾಮಪ್ಪ ಎಂಬುವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಲಭಿಸದೇ ಸಾವನ್ನಪ್ಪಿದ್ದಾರೆಂದು ಆರೋಪಿಸಿ  ಬಿಜೆಪಿ ಪಕ್ಷದವರು  ದಿಡೀರ್ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ತಾಲ್ಲೂಕ್ ಪಂಚಾಯ್ತಿ ಮಾಜಿ ಅಧ್ಯಕ್ಷ ವಿರೇಶ್ ಆಲುವಳ್ಳಿ  ನೇತೃತ್ವದಲ್ಲಿ ಆಸ್ಪತ್ರೆಗೆ ಬೇಟಿ ನೀಡಿ  ಇರುವ ವೈದ್ಯರ ಬಳಿ ಚರ್ಚೆ ನಡೆಸಿ…

Read More

ದೇಶಾದ್ಯಂತ ಯುಪಿಐ ಸರ್ವರ್ ಡೌನ್ – ಪೋನ್ ಪೇ ,ಗೂಗಲ್‌ಪೇ ,ಪೇಟಿಎಂ ಸರ್ವರ್ ಡೌನ್|phonepay

ದೇಶಾದ್ಯಂತ ಒಂದು ಗಂಟೆಯಿಂದ ಯುಪಿಐ ವಹಿವಾಟು ಸ್ಥಗಿತಗೊಂಡು ಬಳಕೆದಾರರಿಗೆ ತೊಂದರೆಯಾಗಿದೆ. ಹೊಸ ವರ್ಷ ಸ್ವಾಗತಿಸುವ ಉತ್ಸಾಹದಲ್ಲಿದ್ದವರಿಗೆ ಯುಪಿಐ ಸರ್ವರ್ ಡೌನ್ ನಿಂದ ತುಂಬಾ ತೊಂದರೆಯಾಗಿದೆ.ಈಗ ಹಣದ ವಹಿವಾಟಿಗಿಂತ ಸ್ಕ್ಯಾನರ್ ಪಡೆದು ಸ್ಕ್ಯಾನ್ ಮಾಡಿ ಹಣ ಪಾವತಿಸುವ ಕಾಲ ಇಂತಹ ಸಂಭ್ರಮದ ಸಮಯದಲ್ಲಿ ಸರ್ವರ್ ಡೌನ್ ಆಗಿರುವುದರಿಂದ ಗ್ರಾಹಕರು ತಮ್ಮ ಆಕ್ರೋಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತಿದ್ದಾರೆ. ಸಾವಿರಾರು ಬಳಕೆದಾರರು ತಮಗೆ ಆದ ತೊಂದರೆಯ ಬಗ್ಗೆ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತಿದ್ದಾರೆ. ಯುಪಿಐ ಏಕೆ ಕೆಲಸ ಮಾಡುತ್ತಿಲ್ಲ, ಅದು ಸ್ಥಗಿತಗೊಂಡು…

Read More

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ, ಹೊಸನಗರ ತಾಲೂಕಿನಲ್ಲಿದೆ 144 ಹುದ್ದೆ ! ಈ ಸುದ್ದಿ ನೋಡಿ

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ, ಹೊಸನಗರ ತಾಲೂಕಿನಲ್ಲಿದೆ 144 ಹುದ್ದೆ ! ಈ ಸುದ್ದಿ ನೋಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲೆಯ 7 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳನ್ನು ಗೌರವಧನ ಸೇವೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಮಹಿಳಾ ಮತ್ತು ಮಹಿಳಾ ಲಿಂಗತ್ವ ಅಲ್ಪಸಂಖ್ಯಾತ ಸ್ಥಳೀಯ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಭದ್ರಾವತಿಯಲ್ಲಿ 19 ಅಂಗನವಾಡಿ ಕಾರ್ಯಕರ್ತೆಯರು ಮತ್ತು…

Read More

ಎಂಗೇಜ್‌ಮೆಂಟ್‌ಗೆ ತೆರಳಿದ್ದ ತಾಯಿ–ಮಗಳು ನಾಪತ್ತೆ | ಮಾಹಿತಿ ನೀಡುವಂತೆ ಪೊಲೀಸರ ಮನವಿ

ಎಂಗೇಜ್‌ಮೆಂಟ್‌ಗೆ ತೆರಳಿದ್ದ ತಾಯಿ–ಮಗಳು ನಾಪತ್ತೆ | ಮಾಹಿತಿ ನೀಡುವಂತೆ ಪೊಲೀಸರ ಮನವಿ If you have any information about this mother-daughter duo, please contact the Shivamogga Rural Police Station in person or by calling 08182-261400 / 261418 / 9480803332 / 9480803350. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್‌ 03 ರಂದು ಎಂಗೇಜ್‌ಮೆಂಟ್‌ಗೆಂದು ಮನೆಯಿಂದ ಹೊರಟಿದ್ದ ತಾಯಿ ಮತ್ತು ಮಗಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಈ…

Read More
Exit mobile version