ಅಡುಗೆ ಮನೆ ಸೇರಿಕೊಂಡಿದ್ದ ಕಾಳಿಂಗ ಸರ್ಪ ವನ್ನು ರಕ್ಷಿಸಿದ ಮಳೆ ಕಾಡಿನ ಉರಗ ತಜ್ಞ ಅಜಯಗಿರಿ :
ಮುಂಜಾನೆ ಎದ್ದು ಅಡಿಗೆ ಮನೆಗೆ ಹೋದಾಗ ಬೃಹತ್ ಕಾಳಿಂಗ ಸರ್ಪವು ಮೂಲೆಯಲ್ಲಿ ಮಲಗಿರುವುದನ್ನು ಕಂಡು ಮನೆಯವರು ಹೌಹಾರಿದ್ದಾರೆ. ಹೊಸನಗರ ತಾಲೂಕಿನ ನಗರ ಹೋಬಳಿ ಕೆಸರೆ ಸಮೀಪದ ಕೂಡ್ಲುಕೊಪ್ಪ ಮಂಜಪ್ಪ ಎಂಬುವವರ ಮನೆಯ ಅಡುಗೆ ಮನೆಯಲ್ಲಿ ಸೇರಿಕೊಂಡಿದ್ದ ಬೃಹತ್ ಕಾಳಿಂಗ ಸರ್ಪ. ಈ ಬಗ್ಗೆ ಮನೆಯವರು ಆಗುಂಬೆ ಮಳೆಕಾಡಿನ ಉರಗ ತಜ್ಞ ಅಜಯಗಿರಿ ಯವರಿಗೆ ವಿಷಯ ಮುಟ್ಟಿಸಿದ್ದಾರೆ.ಕೂಡಲೇ ಸ್ಥಳಕ್ಕಾಗಮಿಸಿದ ಉರಗ ತಜ್ಞ ಅಜಯಗಿರಿ ಮಂಜಪ್ಪ ರವರ ಅಡುಗೆ ಮನೆ ಸೇರಿದ್ದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯ ಇಲಾಖೆಯ ಸಹಕಾರದೊಂದಿಗೆ…


