Headlines

ಅವ್ಯವಸ್ಥೆಯ ಆಗರ,ನಿರ್ವಹಣೆ ಇಲ್ಲದೆ ಹಾಳು ಕೊಂಪೆಯಾದ ರಿಪ್ಪನ್ ಪೇಟೆ ಬಸ್ ಪ್ರಯಾಣಿಕರ ತಂಗುದಾಣ !!

  ರಿಪ್ಪನ್ ಪೇಟೆ : ತಾಲೂಕಿನಲ್ಲೇ ಅತೀ ದೊಡ್ಡ ಗ್ರಾಮ ಪಂಚಾಯತ್, ಸ್ವಚ್ಚ ಭಾರತ್ ಅಭಿಯಾನದಲ್ಲಿ ಪ್ರಶಸ್ತಿ ಪಡೆದ ಪಂಚಾಯತಿ,ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣ ರಿಪ್ಪನ್ ಪೇಟೆ ಯಲ್ಲಿರುವ ಒಂದೇ ಒಂದು ಪ್ರಯಾಣಿಕರ ತಂಗುದಾಣ ಸರಿಯಾದ ನಿರ್ವಹಣೆ ಇಲ್ಲದೆ ಗಬ್ಬುನಾರುತ್ತಿದೆ. ರಿಪ್ಪನ್ ಪೇಟೆ ಜನತೆಯ ದಶಕದ ಬೇಡಿಕೆ ಬಸ್ ನಿಲ್ದಾಣ ರಾಜಕಾರಣಿ ಗಳ ಇಚ್ಚ ಶಕ್ತಿ ಕೊರತೆಯಿಂದ ಆಗದೆ ರಾಜಕಾರಣಿ ಗಳಿಗೆ ತಮ್ಮ ಎಲೆಕ್ಷನ್ ಸಮಯದ ಪ್ರಚಾರದ ಅಸ್ತ್ರಕ್ಕೆ ಸೀಮಿತ ವಾಗಿದೆ. ಸುಮಾರು ನಲವತ್ತು ಸಾವಿರಕ್ಕೂ ಹೆಚ್ಚು…

Read More

ಗಾಂಜಾ ಸಾಗಿಸುತಿದ್ದ ಮಹಿಳೆಯ ಬಂಧನ – 4.5 ಲಕ್ಷ ಮೌಲ್ಯದ 7 ಕೆ ಜಿ ಗಾಂಜಾ ವಶಕ್ಕೆ.‌!!

ಗಾಂಜಾ ಸಾಗಿಸುತಿದ್ದ ಮಹಿಳೆಯ ಬಂಧನ – 4.5 ಲಕ್ಷ ಮೌಲ್ಯದ 7 ಕೆ ಜಿ ಗಾಂಜಾ ವಶಕ್ಕೆ.‌!! ಗಾಂಜಾ ಸಾಗಾಟ ಮಾಡುವಾಗ ಪೊಲೀಸರು ದಾಳಿ ನಡೆಸಿ 4.5 ಲಕ್ಷ ರೂ. ಮೌಲ್ಯದ 7 ಕೆಜಿ ಗಾಂಜಾ ಹಾಗೂ ಗಾಂಜಾ ಸಾಗಾಟ ಮಾಡುತ್ತಿದ್ದ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಸೋಮವಾರ ಭದ್ರಾವತಿ ನಗರದ ಹೊಸಮನೆ ಪೊಲೀಸ್‌ ಠಾಣಾ ವ್ಯಾಪ್ತಿಯ ಸತ್ಯ ಸಾಯಿ ನಗರದಲ್ಲಿ ಮಾಧಕ ವಸ್ತು ಗಾಂಜಾವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಂಡವನ್ನ ರಚಿಸಿ…

Read More

ಸಾಗರ : ಪೊಲೀಸರ ಮಿಂಚಿನ ಕಾರ್ಯಾಚರಣೆ : ಅಕ್ರಮ ಗೋ ಕಳ್ಳರ ಬಂಧನ

ಸಾಗರ: ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಅಕ್ರಮವಾಗಿ ಗೋವು ಕಳ್ಳತನ ಮಾಡುತ್ತಿದ್ದ ಗೋ ಕಳ್ಳರನ್ನು ಸಾಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಐದು ಆರೋಪಿ ಗಳನ್ನು ಹಾಗೂ ದನಕಳ್ಳತನಕ್ಕೆ ಬಳಸುತ್ತಿದ್ದ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರನ್ನು ವಶಕ್ಕೆ ಪಡೆದಿದ್ದಾರೆ. ರಾತ್ರಿ ವೇಳೆ ಗೋವುಗಳನ್ನು ವಾಹನದಲ್ಲಿ ತುಂಬಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋ ಕಳ್ಳತನ ಮಾಡುವ  ಐದು ಜನರ ಗುಂಪನ್ನು ವಾಹನ ಸಮೇತ ಶನಿವಾರ  ಸಾಗರ  ಪೇಟೆ ಮತ್ತು ಗ್ರಾಮಾಂತರ ಠಾಣೆಯ ಪೊಲೀಸರು ಜಂಟಿಯಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ…

Read More

ಬಿಜೆಪಿ ಪಕ್ಷದ ಕೆಲ ಕಾರ್ಯಕರ್ತರಿಗೆ ಪ್ರಭುದ್ಧತೆ ಇಲ್ಲ : ಕೆ ಎಸ್ ಈಶ್ವರಪ್ಪ

ಶಿವಮೊಗ್ಗ: ಬಿಜೆಪಿ ಮುಖಂಡ ಪ್ರವೀಣ್​ ನೆಟ್ಟಾರು ಹತ್ಯೆ ಬಳಿಕ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಆರಂಭವಾಗಿದ್ದು, ಈಗಾಗಲೇ ನೂರಾರು ಕಾರ್ಯಕರ್ತರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಪ್ರತಿಕ್ರಿಯಿಸಿದ್ದು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರ ಎಂಬ ಪ್ರೆಶ್ನೆ ಉದ್ಭವವಾಗಿದೆ  ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಕೆ.ಎಸ್ ಬಿಜೆಪಿ ಕಾರ್ಯಕರ್ತರಿಗೆ ಪ್ರಭುದ್ಧತೆ ಇಲ್ಲ ಎನ್ನುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶ್ಯಾಮಪ್ರಸಾದ್ ಮುಖರ್ಜಿಗೆ ಸಾಯುತ್ತೇನೆ ಎಂದು ಗೊತ್ತಿದ್ದರೂ…

Read More

ನ್ಯಾಷನಲ್ ಪ್ಲಸ್ ಸೈಜ಼್ ಬ್ಯೂಟಿ ಸ್ಪರ್ಧೆಗೆ ಆಯ್ಕೆಯಾದ ಹೊಸನಗರದ ಸೀಮಾ ಕಿರಣ್ :

ಬೆಂಗಳೂರಿನಲ್ಲಿ ಜುಲೈ30 ರಂದು ನಡೆದ ಮಾವಿನ್ ಪ್ಲಸ್ ಇಂಡಿಯಾ ಬ್ಯೂಟಿ ಪೆಜೆನ್ಟ್ ಅಡಿಷನ್ ನಲ್ಲಿ ಹೊಸನಗರದ ಜೆಸಿಐ ಕೊಡಚಾದ್ರಿ ಅಧ್ಯಕ್ಷೆ ಸೀಮಾ ಶೆರಾವೊ ನ್ಯಾಷನಲ್ ಬ್ಯೂಟಿ ಪೆಜೆನ್ಟ್ ಗೆ ಆಯ್ಕೆಯಾಗಿದ್ದು, ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಲಿದ್ದಾರೆ. ನ್ಯಾಶನಲ್ ಬ್ಯೂಟಿ ಪೆಜೆನ್ಟ್ ಸೆ.22 ರಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದ್ದು ಸೀಮಾ ಶೆರಾವೊ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಲಿದ್ದಾರೆ. ಹೊಸನಗರದ ಸೀಮಾ 11 ವರ್ಷದಿಂದ ಹೊಸನಗರದ ಸಿಯಂಟೋ ಬ್ಯೂಟಿ ಸಲೂನ್ ನಡೆಸುತ್ತಿದ್ದು, 20 -22ರ ಜೆಸಿಐ ಹೊಸನಗರ ಕೊಡಚಾದ್ರಿಯ…

Read More

ಅವೈಜ್ಞಾನಿಕ ಚರಂಡಿ ಕಾಮಗಾರಿ: ನಾಲ್ಕು ರಸ್ತೆಯ ನೀರು,ಹೊಟೇಲ್ ತ್ಯಾಜ್ಯ ರೈತರ ಜಮೀನಿಗೆ::

ರಿಪ್ಪನ್ ಪೇಟೆ :ಅವೈಜ್ಞಾನಿಕ ಚರಂಡಿಯಿಂದ ಪಟ್ಟಣ ದ ನಾಲ್ಕು ರಸ್ತೆಯ ನೀರು,ಹೋಟೆಲ್ ನ ತ್ಯಾಜ್ಯಗಳು ಹೊಸನಗರ ರಸ್ತೆಯಲ್ಲಿರುವ ಚಿಪ್ಪಿಗರ ಕೆರೆಯ ಎದುರಿನ ರೈತರ ಜಮೀನಿಗೆ ಹೋಗುತ್ತಿದೆ.ಸ್ಥಳೀಯ ನಿವಾಸಿಗಳು ಹಾಗೂ ರೈತರು ಹಲವಾರು ಬಾರಿ ದೂರು ಸಲ್ಲಿಸಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಪರದಾಡುವಂತಾಗಿದೆ. ಚರಂಡಿಯಿಂದ ಹರಿಯುತ್ತಿರುವ, ಮಳೆ ನೀರು,ಹೋಟೆಲ್ ಗಳ ತ್ಯಾಜ್ಯ, ಮಧ್ಯದ ಬಾಟಲಿಗಳು ಸಂಪೂರ್ಣವಾಗಿ ಕೃಷಿ ಭೂಮಿ ಸೇರುತ್ತಿವೆ.ರಿಪ್ಪನ್ ಪೇಟೆ ಹೊಸನಗರ ರಸ್ತೆಯ ಕೂಗಳತೆ ದೂರದಲ್ಲಿ ಇರುವ ಚಿಪ್ಪಿಗರ ಕೆರೆಯ ಸಮೀಪ ಈ ಚರಂಡಿಯ…

Read More

Ripponpete | ಜಾನಪದ ಹಾಡಿನ ಮೂಲಕ ಕಲಾವಿದರಿಂದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪಪರ ಮತಯಾಚನೆ

ಜಾನಪದ ಹಾಡಿನ ಮೂಲಕ ಕಲಾವಿದರಿಂದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪಪರ ಮತಯಾಚನೆ ರಿಪ್ಪನ್‌ಪೇಟೆ;-ಮೇ.7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪನವರ ಪರ ಜಾನಪದ ಹಾಡಿನ ಮೂಲಕ ಕಲಾವಿದರ ತಂಡ ಮತಯಾಚನೆಯನ್ನು ನಡೆಸುತ್ತಾ ಮತದಾರರ ಮನವೊಲಿಸುತ್ತಿರುವುದು ವಿಶೇಷವಾಗಿದೆ. ಇಲ್ಲಿನ ವಿನಾಯಕ ವೃತ್ತದಲ್ಲಿ ಶಿವಮೊಗ್ಗದ ಕಲಾವಿದರ ತಂಡ ಇಂದು ಬಿಸಿಲಿನಲ್ಲಿಯೇ ಪಿಕ್‌ಆಪ್ ವಾಹನದ ಮೇಲೆ ನಿಂತು ಪಕ್ಷೇತರ ಆಭ್ಯರ್ಥಿ ಕೆ.ಎಸ್.ಈಶ್ವರಪ್ಪನವರ ಪರವಾದ ಜಾನಪದ ಹಾಡು ಹಾಡುವುದರೊಂದಿಗೆ ಕ್ರಮಸಂಖ್ಯೆ 8 ಕ್ಕೆ ಮತಹಾಕುವಂತೆ ಹಾಡು ಹಾಡಿ ಮತದಾರರನ್ನು ಸೆಳೆಯುತ್ತಿದ್ದು…

Read More

ಚಲಿಸುತಿದ್ದ KSRTC ಬಸ್ ನಿಂದ ಹಾರಿ ವ್ಯಕ್ತಿ ಆತ್ಮಹತ್ಯೆ|

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ‍ಚಲಿಸುತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಭದ್ರಾವತಿಯ ವೀರಾಪುರ ಕ್ರಾಸ್ ಬಳಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಮಿಳ್ಳೆನಹಳ್ಳಿ ನಿವಾಸಿ ನಂದೀಶ್ (35) ಎಂಬುವವರು ಮೃತ ದುರ್ದೈವಿ. ನಂದೀಶ್‌ ಕಳೆದ ಹಲವು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೆಗ್ಗಾನ್ ಆಸ್ಪೆತ್ರೆಗೆ ಚಿಕಿತ್ಸೆಗಾಗಿ ಸ್ನೇಹಿತನ ಜತೆ ಬಂದಿದ್ದ ನಂದೀಶ್, ಚಿಕಿತ್ಸೆ ಪಡೆಯುವುದಿಲ್ಲ ಎಂದು ಹಠ ಮಾಡಿದ್ದಾರೆ. ಆಸ್ಪತ್ರೆಯಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ವಾಪಸ್ ಬರುತ್ತಿದ್ದಾಗ, ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ…

Read More

Sagara | ಮನೆ ಮುಂದೆ ಕಸ ಗುಡಿಸುತಿದ್ದ ಮಹಿಳೆಯ ಕೊರಳಿಗೆ ಕೈ ಹಾಕಿ ಲಕ್ಷಾಂತರ ರೂ ಸರ ಎಗರಿಸಿ ಪರಾರಿಯಾದ ಕಳ್ಳ

Sagara | ಮನೆ ಮುಂದೆ ಕಸ ಗುಡಿಸುತಿದ್ದ ಮಹಿಳೆಯ ಕೊರಳಿಗೆ ಕೈ ಹಾಕಿ ಲಕ್ಷಾಂತರ ರೂ ಸರ ಎಗರಿಸಿ ಪರಾರಿಯಾದ ಕಳ್ಳ  ಸಾಗರ : ಮನೆ ಮುಂದೆ ಕಸ ಗುಡಿಸುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಬಂದು ಮಹಿಳೆಯರೋರ್ವರ ಬಂಗಾರದ ತಾಳಿ ಸರವನ್ನು ಕಿತ್ತು ಪರಾರಿಯಾದ ಘಟನೆ ಗುರುವಾರ ನಗರ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಅಗ್ರಹಾರ ಮೊದಲನೇ ತಿರುವಿನಲ್ಲಿರುವ ಗಣೇಶ ವೈದ್ಯರವರ ಹೆಂಡತಿ ಲೀಲಾ ರವರು ಬೆಳಿಗ್ಗೆ ಮನೆ ಮುಂದೆ ಕಸ ಗುಡಿಸುವಾಗ ಹಿಂಬದಿಯಿಂದ ಬಂದ ಆಗಂತುಕ ಈ ಕೃತ್ಯ…

Read More

50 ಲಕ್ಷ ಮೌಲ್ಯದ ತಿಮಿಂಗಿಲ ವಾಂತಿ ಸಾಗಿಸುತ್ತಿದ್ದ ಮೂವರ ಬಂಧನ :

 ಲಕ್ಷಾಂತರ ರೂ. ಬೆಲೆಬಾಳುವ ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಸಾಗರ ಪೊಲೀಸರು ಬಂಧಿಸಿದ್ದಾರೆ. ಕಳೆದ ಭಾನುವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮಾಲು ಸಹಿತ ಆರೋಪಿಗಳನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಾಗರ ತಾಲ್ಲೂಕಿನ ಕೆಳದಿ ರಸ್ತೆಯ ರಾಮಪ್ಪ (40), ಕಾರ್ಗಲ್‌ನ ಸಂದೀಪ್ ಜಾನ್ (49), ಸಾಗರ ನೆಹರೂ ನಗರದ ರೋಹಿತ್ (42) ಬಂಧಿತರು. ಸಾಗರ ರೈಲ್ವೆ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿ ತಿಮಿಂಗಿಲ ವಾಂತಿ (ಅಂಬರ್ಗ್ರೀಸ್) ವಶಕ್ಕೆ ಪಡೆಯಲಾಗಿದೆ. ಅರ್ಧ ಕೆ.ಜಿ…

Read More
Exit mobile version