Headlines

ಕುಮಾರಸ್ವಾಮಿ ನಾಲ್ಕು ದಿನ ಆರ್​​ಎಸ್​​​ಎಸ್​​ ಶಾಖೆಗೆ ಬಂದು ಆಮೇಲೆ ಟೀಕಿಸಲಿ: ನಳಿನ್ ಕುಮಾರ್ ಕಟೀಲ್

ಶಿವಮೊಗ್ಗ: ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗೆ ಒಂದು ವಾರ ಬರುವಂತೆ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್ ಆಹ್ವಾನಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವುದೇ ಸಂಘ- ಸಂಸ್ಥೆಯನ್ನು ಟೀಕೆ ಮಾಡುವ ಮುನ್ನ ಮೊದಲು ಅದರ ಬಗ್ಗೆ ತಿಳಿದುಕೊಳ್ಳಬೇಕು ಎಂದರು. ಕುಮಾರಸ್ವಾಮಿ ನಾಲ್ಕು ದಿನ ಶಾಖೆಗೆ ಬರಲಿ, ಆಮೇಲೆ ಸಂಘದ ಬಗ್ಗೆ ಟೀಕೆ ಮಾಡಲಿ. ಅವರು ಅಧಿಕಾರದಲ್ಲಿದ್ದಾಗ ಅವರ ಕುಟುಂಬದವರಿಗೆ ಸಹಾಯ ಮಾಡಿಕೊಂಡು ಬಂದವರು. ಅವರಿಗೆ ರಾಷ್ಟ್ರಭಕ್ತಿ, ದೇಶದ ಪರಿಕಲ್ಪನೆ, ಚಿಂತನೆಗಳಿಲ್ಲ. ಪಾರ್ಟಿಯನ್ನೇ…

Read More

ತೀರ್ಥಹಳ್ಳಿ : ಅಕ್ರಮ ಮಧ್ಯ ಮಾರಾಟ ಪ್ರಶ್ನಿಸಿದ್ದ ಗ್ರಾಪಂ ಪಿಡಿಓ ಮೇಲೆ ಹಲ್ಲೆ : ಆರೋಪಿ ವಶಕ್ಕೆ

ತೀರ್ಥಹಳ್ಳಿ: ತಾಲೂಕಿನ ಮೇಳಿಗೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಕೆಳಕೆರೆ ನಾಗೇಶ್ ಎನ್ನುವ ವ್ಯಕ್ತಿಗೆ ಮದ್ಯ ಮಾರಾಟ ಮಾಡಬೇಡಿ ಎಂದಿದ್ದಕ್ಕೆ ಅಲ್ಲಿನ ಪಿಡಿಓ ಮೇಲೆ ಹಲ್ಲೆ ನೆಡೆಸಿದ್ದ ಕೆಳಕೆರೆ ನಾಗೇಶ್ ನನ್ನು ತೀರ್ಥಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೇಳಿಗೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೆಳಕೆರೆ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ನಾಗೇಶ್ ಗೆ ಮಹಿಳಾ ಪಿಡಿಓ ಅದರ ಬಗ್ಗೆ ಪ್ರಶ್ನಿಸಿದ್ದಾರೆ.  ಇದಕ್ಕೆ ನಾಗೇಶ್ ಪಿಡಿಓ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೇಲೆ ಹಲ್ಲೆ…

Read More

ಅಂತೂ ಪತ್ತೆಯಾಯ್ತು ಕೂಡ್ಲಿಗಿಯಲ್ಲಿ ನೀರುಪಾಲಾಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯ ಮೃತದೇಹ :

  ಶಿವಮೊಗ್ಗ : ಕೂಡ್ಲಿಯಲ್ಲಿ ನೀರುಪಾಲಾಗಿದ್ದ ಹರೀಶ್ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ನೀರುಪಾಲಾದ ಹರೀಶ್ ಮೃತದೇಹ ಮೂರು ದಿನಗಳವರೆಗೆ ಪತ್ತೆಯಾಗಿರಲಿಲ್ಲ.ಸತತ ಶೋಧಕಾರ್ಯದ ಪರಿಣಾಮ ಇಂದು ಸಂಜೆ ಆತನ ಮೃತದೇಹ ಪತ್ತೆಯಾಗಿದೆ. ಮಡಿಕೆ ಚೀಲೂರಿನ ಬಳಿ ಹರೀಶ್ ಮೃತದೇಹ ಪತ್ತೆಯಾಗಿದೆ. ಭಾನುವಾರ ಪಿತೃಪಕ್ಷದ ಸ್ನಾನಕ್ಕೆ ಕೂಡಲಿಯ ಸಂಗಮಕ್ಕೆ ಬಂದಿದ್ದ ಬೀರೂರಿನ ಪಿನಿಯಾಚಾರ್ ಕುಟುಂಬದ ಹರೀಶ್ (24) ನೀರಿಗೆ ಇಳಿದಾಗ ಕೊಚ್ಚಿಹೋಗಿದ್ದನು. ಮೃತದೇಹವನ್ನು ಅಗ್ನಿಶಾಮಕ ದಳದವರು ಶಿವಮೊಗ್ಗ ಗ್ರಾಮಾಂತರ ಠಾಣೆಗೆ ಹಸ್ತಾಂತರಿಸಿದ್ದಾರೆ.

Read More

ಸಾಗರ : ಗಾಂಜಾ ಸೇವನೆ ಮಾಡಿದ್ದ ಮೂವರ ಬಂಧನ : ವಿಶೇಷ ಟೆಸ್ಟಿಂಗ್ ಕಿಟ್ ಮೂಲಕ ಪತ್ತೆ :

ಸಾಗರ: ಗಾಂಜಾ ಸೇವಿಸಿದ ಮೂವರನ್ನು ತಪಾಸಣೆಗೆ ಒಳಪಡಿಸಿದ್ದು, ಅವರು ಮಾದಕ ವಸ್ತು ಸೇವಿಸಿದ ವಿಚಾರ ದೃಢಪಟ್ಟಿದ್ದು, ಅವರನ್ನು ಎನ್.ಡಿ.ಪಿ.ಎಸ್.ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ತಾಲೂಕಿನ ಆವಿನಹಳ್ಳಿ ಸಮೀಪ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರು ಯುವಕರನ್ನು ಸಾಗರ ಗ್ರಾಮಾಂತರ ಪೊಲೀಸರು ಸೋಮವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.  ಆಗ ಗಾಂಜಾ ಸೇವಿಸಿರಬಹುದು ಎಂಬ ಅನುಮಾನ ಮೂಡಿದೆ.  ನಂತರ ಅವರನ್ನು ಗಾಂಜಾ ಟೆಸ್ಟಿಂಗ್ ಕಿಟ್ ಮೂಲಕ ಪರೀಕ್ಷಿಸಲಾಗಿ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಸೊರಬ ಮೂಲದ ಶಶಾಂಕ್, ಸುಮಂತ್, ಶಿಕಾರಿಪುರದ ಮಹೇಶ್ ಎಂಬುವವರನ್ನು…

Read More

ರಿಪ್ಪನ್ ಪೇಟೆ : ಅತ್ಯಂತ ಯಶಸ್ವಿಯಾಗಿ ನಡೆದ ಹೃದಯ ತಪಾಸಣಾ ಶಿಬಿರ

ರಿಪ್ಪನ್ ಪೇಟೆ : ಭಾರತದ ಪ್ರಧಾನಿ ನರೇಂದ್ರ ಮೋದಿಯವರ 71 ನೇ ವರ್ಷದ ಜನ್ಮದಿನದ ಅಂಗವಾಗಿ ಸೇವಾ ಮತ್ತು ಸಮರ್ಪಣ ಅಭಿಯಾನ ಅಡಿಯಲ್ಲಿ ಸಾರ್ವಜನಿಕರಿಗೆ ಉಚಿತ ಹೃದಯ ರೋಗ ತಪಾಸಣಾ ಶಿಬಿರವನ್ನು ಭಾರತೀಯ ಜನತಾ ಪಕ್ಷದ ರಿಪ್ಪನ್ ಪೇಟೆ ಮಹಾಶಕ್ತಿ ಕೇಂದ್ರದ ವ್ಯೆದ್ಯಕೀಯ ಪ್ರಕೋಷ್ಟದ ವತಿಯಿದ ಆಯೋಜಿಸಲಾಗಿತ್ತು.           ಪಟ್ಟಣದ ಗೌಡ ಸಾರಸ್ವತ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗ ಮ್ಯಾಕ್ಸ್ ಆಸ್ಪತ್ರೆಯ ಹೃದಯ ರೋಗ ತಜ್ಞರಾದ ಡಾ. ರಾಕೇಶ್ ಈ…

Read More

ಶಿವಮೊಗ್ಗ : ಹರಿಗೆ ಹಿಂಭಾಗದ ರೈಲ್ವೆ ಹಳಿ ಮೇಲೆ ಅನಾಮಧೇಯ ಶವ ಪತ್ತೆ :

ಶಿವಮೊಗ್ಗ : ನಗರದ ಹರಿಗೆ ಹಿಂಬಾಗದಲ್ಲಿ  ರೈಲ್ವೆ ಹಳಿಯ ಮೇಲೆ ಅನಾಮಧೇಯ ಶವ ದೊರೆತಿದೆ.ಸುಮಾರು 35 ವಯಸ್ಸಿನ ಅನಾಮಧೇಯ ಗಂಡಸಿನ ಶವ ರೈಲ್ವೆ ಹಳಿಯ ಪಕ್ಕದಲ್ಲಿ ದೊರೆತಿದ್ದು. ಚಹರೆ ಹೀಗಿದೆ ದುಂಡು ಮುಖ ದೃಢಕಾಯ ಮೈಕಟ್ಟು  ಬಿಳಿಯ ಬಣ್ಣ ಹೊಂದಿದ್ದು  ಸಿಮೆಂಟ್ ಬಣ್ಣದ ಟೀಶರ್ಟ್ ಮತ್ತು ನೀಲಿ ಜೀನ್ಸ್ ಪ್ಯಾಂಟ್ ಹಾಕಿಕೊಂಡಿದ್ದಾನೆ. ಒಂದು ಅಂದಾಜಿನ ಪ್ರಕಾರ ಶಿವಮೊಗ್ಗದ ಕಡೆಯಿಂದ ಭದ್ರಾವತಿಯ ಕಡೆ ಮುಖ ಮಾಡಿ ರೈಲ್ವೆ ಹಳಿಯ ಪಕ್ಕದಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ರೈಲು ಡಿಕ್ಕಿ ಹೊಡೆದು…

Read More

ರಿಪ್ಪನ್ ಪೇಟೆಯಲ್ಲಿ ನಡೆದಿದ್ದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಟಿಪ್ಪರ್ ಚಾಲಕ ಸಾವು

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಅರಸಾಳು ಬಳಿ ಮರಳು ತುಂಬಿದ್ದ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಚಾಲಕ ಸಾವನ್ನಪ್ಪಿದ್ದಾನೆ. ಹೊಸನಗರದ ಚರ್ಚ್ ರಸ್ತೆಯ ನಿವಾಸಿಯಾದ ಫ಼ೈಜಲ್(27) ಅಪಘಾತದಲ್ಲಿ ಮೃತಪಟ್ಟ ದುರ್ಧೈವಿಯಾಗಿದ್ದಾನೆ.ಈತನು ಕಳೆದ ಮಾರ್ಚ್ ತಿಂಗಳಲ್ಲಿ ವಿವಾಹವಾಗಿದ್ದನು. ಹೊಸನಗರದಿಂದ ಶಿವಮೊಗ್ಗಕ್ಕೆ ಮರಳು ತುಂಬಿಕೊಂಡು ಹೋಗುವಾಗ ಅರಸಾಳು ಸಮೀಪದ 9ನೇ ಮೈಲಿಕಲ್ ನಲ್ಲಿ ಬೆಳಗಿನಜಾವ ಈ ಘಟನೆ ಸಂಭವಿಸಿದೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ರಿಪ್ಪನ್ ಪೇಟೆ :ಭೀಕರ ಅಪಘಾತ , ಮರಕ್ಕೆ ಗುದ್ದಿದ ಮರಳು ತುಂಬಿದ್ದ ಟಿಪ್ಪರ್

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಅರಸಾಳು ಬಳಿ ಮರಳು ತುಂಬಿದ್ದ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಪರಿಣಾಮ ಚಾಲಕನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಹೊಸನಗರದಿಂದ ಶಿವಮೊಗ್ಗಕ್ಕೆ ಮರಳು ತುಂಬಿಕೊಂಡು ಹೋಗುವಾಗ ಅರಸಾಳು ಸಮೀಪದ 9ನೇ ಮೈಲಿಕಲ್ ನಲ್ಲಿ ಬೆಳಗಿನಜಾವ ಈ ಘಟನೆ ಸಂಭವಿಸಿದೆ. ಅಪಘಾತದ ರಭಸಕ್ಕೆ ಟಿಪ್ಪರ್ ಸಂಪೂರ್ಣ ನಜ್ಜುಗುಜ್ಜಾಗಿದ್ದು ಟಿಪ್ಪರ್ ಒಳಗೆ ಸಿಲುಕಿಕೊಂಡಿದ್ದ ಚಾಲಕನನ್ನು ಜೆಸಿಬಿ ಯಂತ್ರದ ಮೂಲಕ ಹೊರತೆಗೆಲಾಯಿತು. ಚಾಲಕನನ್ನು ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ.ಚಾಲಕ ಹೊಸನಗರ…

Read More

ರಿಪ್ಪನ್ ಪೇಟೆ : ಗುಂಡಿ ಬಿದ್ದ ರಸ್ತೆಯಲ್ಲೆ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ ಕಲ್ಮಕ್ಕಿ ಗ್ರಾಮಸ್ಥರು : ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ರಿಪ್ಪನ್ ಪೇಟೆ: ಸ್ವಾತಂತ್ರ್ಯ ಬಂದು ಅದೆಷ್ಟೋ ವರ್ಷಗಳು ಕಳೆದಿವೆ ಮೂಲಭೂತ ಸೌಕರ್ಯಕ್ಕೆ ಜನ ಪರದಾಡುವ ಸ್ಥಿತಿ ಇರುವದು  ನಮ್ಮ ದೇಶದಲ್ಲಿ ಹೊಸದೇನಲ್ಲ  ಇದೇ ರೀತಿ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಸಮೀಪದ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಮಕ್ಕಿ ಗ್ರಾಮದ ಜನರು ಇದೀಗ ಮೂಲಭೂತ ಸೌಕರ್ಯವಾದ ರಸ್ತೆ ಹಾಗು ಕುಡಿಯುವ ನೀರಿನ ಸೌಕರ್ಯವಿಲ್ಲದೇ ದಿನಾಲು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಗರ ಹೊಸನಗರ ಕ್ಷೇತ್ರದ ಶಾಸಕರಾದ ಹೆಚ್ ಹರತಾಳು ಹಾಲಪ್ಪನವರ ಸ್ವಕ್ಷೇತ್ರವಾದ ಹರತಾಳು ನಿಂದ…

Read More

ಮಂಜುನಾಥ ಗೌಡರನ್ನು ನಂಬಿ ನಾನು ಹಾಳಾದೆ – ಮಂಜುನಾಥ್ ಪೂಜಾರಿಯಿಂದ ಹೇಳಿಕೆ

ಶಿವಮೊಗ್ಗ : ಮಂಜುನಾಥ್ ಗೌಡ ಮತ್ತು ಕಿಮ್ಮನೆ ರತ್ನಾಕರ್ ಅವರ ನಡುವಿನ ಒಳಜಗಳ ಈಗ  ಮತ್ತೊಂದು ಹೊಸ ರೂಪ ಪಡೆದಿದೆ. ಹೆಗಲತ್ತಿಯ ತೋಟದ ಕೊಪ್ಪದ ಮಂಜುನಾಥ್ ಪೂಜಾರಿ ಮಾತನಾಡುತ್ತಾ ನಾನು ಮಂಜುನಾಥ್ ಗೌಡರ ಕೈಗೊಂಬೆಯಾಗಿದ್ದೇನೆ,ಅವರ ಶಿಷ್ಯ ದಿನೇಶ್ ನನ್ನನು ಕಿಡ್ನಾಪ್ ಮಾಡಿ ಜೀವಬೆದರಿಕೆ ಹಾಕಿದ್ದಾರೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಕಣ್ಣೀರು ಹಾಕಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್ ಪೂಜಾರಿ ಆರ್.ಎಂ.ಮಂಜುನಾಥ್ ಗೌಡರು ನನ್ನನ್ನ ಬಳಸಿಕೊಂಡು ಕಿಮ್ಮನೆ ರತ್ನಾಕರ್ ಅವರ ಬಗರ್ ಹುಕುಂ ಹೋರಾಟವನ್ನ ಮೊಟಕುಗೊಳಿಸುವ ಪ್ರಯತ್ನ…

Read More
Exit mobile version