ಸೈಕಲ್‌ಗೆ ಡಿಕ್ಕಿ ಹೊಡೆದ ಟಿಪ್ಪರ್ ಲಾರಿ :ಬಾಲಕ ಸ್ಥಳದಲ್ಲಿಯೇ ಸಾವು
ಸೊರಬ : ಸೈಕಲ್ ಗೆ ಯಮಸ್ವರೂಪಿ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬಾಲಕನೊಬ್ಬ ಸ್ಥಳದಲ್ಲಿ ಮೃತಪಟ್ಟ ಘಟನೆ ತಾಲೂಕಿನ ಚಂದ್ರಗುತ್ತಿ ಸಮೀಪದ ತೋರಗೊಂಡನಕೊಪ್ಪ ಗ್ರಾಮದಲ್ಲಿ ಶನಿವಾರ ನಡೆದಿದೆ. ಕಾನುಗೋಡು ಗ್ರಾಮದ ಜೀವ (13) ಮೃತ ದುರ್ದೈವಿ. ಸಿದ್ದಾಪುರದಿಂದ ಚಂದ್ರಗುತ್ತಿಯಡೆಗೆ ತೆರಳುತ್ತಿದ್ದ ಯಮ ಸ್ವರೂಪಿ ಟಿಪ್ಪರ್ ಸೈಕಲ್ ಗೆ ಡಿಕ್ಕಿ ಹೊಡೆದಿದ್ದು ಅಪಘಾತದ ರಭಸಕ್ಕೆ ಸೈಕಲ್ ನಲ್ಲಿದ್ದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸೈಕಲ್ ಸವಾರ ಕಾನುಗೋಡು ಗ್ರಾಮದ ಸಂದೀಪ (32) ಎಂಬ ವ್ಯಕ್ತಿಯು ತೀವ್ರವಾಗಿ ಗಾಯಗೊಂಡಿದ್ದು, ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ….


