ಕಿಮ್ಮನೆ ರತ್ನಾಕರ್ ಗೆ ಕಾಂಗ್ರೆಸ್ ಸಮಾವೇಶದಲ್ಲಿ ಅವಮಾನ…?!!!!! ಜಿಲ್ಲಾ ಕಾಂಗ್ರೆಸ್ ನ ಗುಂಪುಗಾರಿಕೆಗೆ ಕಿಮ್ಮನೆ ಬೆಂಬಲಿಗರ ಆಕ್ರೋಶ
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನ ಇದೀಗ ರಾಜ್ಯ ನಾಯಕರ ಅಂಗಳಕ್ಕೆ ತಲುಪಿದೆ.ತೀರ್ಥಹಳ್ಳಿ ಕ್ಷೇತ್ರದಲ್ಲಿದ್ದ ಅಸಮಾಧಾನ, ಭಿನ್ನಮತ ಇದೀಗ ಜಿಲ್ಲಾ ನಾಯಕತ್ವದಲ್ಲೂ ಹೊರ ಬಿದ್ದಿದೆ. ನಡೆದಿದ್ದೇನು?? ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ತೀರ್ಥಹಳ್ಳಿಯ ಗುಡ್ಡೆಕೊಪ್ಪದಿಂದ ಶಿವಮೊಗ್ಗಕ್ಕೆ ಪಾದಯಾತ್ರೆ ನಡೆಸಿ ಸಾವಿರಾರು ಕಾರ್ಯಕರ್ತರೊಂದಿಗೆ ಶಿವಮೊಗ್ಗದ ಸಮಾವೇಶಕ್ಕೆ ಹಾಜರಾಗಿದ್ದರು. ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಸಾವಿರಾರು ಮಂದಿ ಕಾರ್ಯಕರ್ತರು ಬಂದಿದ್ದರು. ಸಭಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್, ನಾಯಕರಾದ ಹರಿಪ್ರಸಾದ್, ಕಾಗೋಡು ತಿಮ್ಮಪ್ಪ, ಕಿಮ್ಮನೆ, ಮಂಜುನಾಥ ಗೌಡ, ಸುಂದರೇಶ್ ಇತರರು…


