Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

ರಿಪ್ಪನ್‌ಪೇಟೆ : ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಆಟೋ ಅಪಘಾತ – ಚಾಲಕ ಸಾವು

ರಿಪ್ಪನ್ ಪೇಟೆ : ಪಟ್ಟಣದ ಸಾಗರ ರಸ್ತೆಯ ಅಂಚೆ ಕಚೇರಿ ಮುಂಭಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಆಟೋ ಅಪಘಾತವಾಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ. ಪಟ್ಟಣದ ಶಬರೀಶನಗರದ ನಿವಾಸಿ ಶ್ರೀನಿವಾಸ್(36) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಸಾಗರ ರಸ್ತೆಯಿಂದ ರಿಪ್ಪನ್ ಪೇಟೆ ಕಡೆಗೆ ಬರುತ್ತಿದ್ದ ಗೂಡ್ಸ್ ಆಟೊ ಅಂಚೆ ಕಚೇರಿ ಮುಂಭಾಗದಲ್ಲಿ ಇರುವ ದೊಡ್ಡ ಗುಂಡಿಯನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಅಲ್ಲಿಯೇ ನಿಂತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ.ಈ ಅಪಘಾತದಲ್ಲಿ ಗೂಡ್ಸ್ ಆಟೊ ಸ್ಟೇರಿಂಗ್ ಚಾಲಕನ ಹೊಟ್ಟೆಗೆ…

Read More

ಹಣದ ವಿಚಾರಕ್ಕೆ ಗುತ್ತಿಗೆದಾರನಿಂದ ತಂದೆ ಮತ್ತು ಮಗನಿಗೆ ಚಾಕು ಇರಿತ : ತಂದೆ ಸಾವು

ಹಣದ ವಿಚಾರದಲ್ಲಿ ಅಪ್ಪ ಮತ್ತು ಮಗನಿಗೆ ಕಟ್ಟಡದ ಕಂಟ್ರ್ಯಾಕ್ಟರ್ ಚಾಕುವಿನಿಂದ ಇರಿದ ಘಟನೆ ಶಿರಾಳಕೊಪ್ಪದಲ್ಲಿ ನಡೆದಿದೆ. ಚಾಕು ಇರಿತಕ್ಕೆ ಒಳಗಾದ ತಂದೆ ದಯಾನಂದ್(69) ಮೃತಪಟ್ಟಿದ್ದಾರೆ. ದಯಾನಂದ್ ಮತ್ತು ರಾಘವೇಂದ್ರ ಎಂಬುವರು ಶಿರಾಳಕೊಪ್ಪದಲ್ಲಿ ಹಾರ್ಡ್ ವೇರ್ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದು ಇವರ ನಿವೇಶನದ ಜಾಗದಲ್ಲಿ ಕಟ್ಟಡ ಕಟ್ಟಲು ಕಂಟ್ರ್ಯಾಕ್ಟರ್ ಕೋಟೇಶ್ ಎಂಬುವರಿಗೆ ಗುತ್ತಿಗೆ ನೀಡಲಾಗಿತ್ತು. ಕಟ್ಟಡ ಸರಿ ಕಟ್ಟುತ್ತಿಲ್ಲವೆಂದು ಅಪ್ಪ ದಯಾನಂದ್ ಮತ್ತು ಮಗ ರಾಘವೇಂದ್ರ ಬೇರೆಯವರಿಗೆ ಕಟ್ಟಡದ ಗುತ್ತಿಗೆಯನ್ನ ನೀಡಿದ್ದರು. ಕಟ್ಟಡ ನಿರ್ಮಾಣದ ಬಾಕಿ ಹಾಣ…

Read More

ತೀರ್ಥಹಳ್ಳಿ ಕ್ಷೇತ್ರದ ಘನತೆ ಕಾಪಾಡಲು ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು – ಕಿಮ್ಮನೆ ರತ್ನಾಕರ್

ತೀರ್ಥಹಳ್ಳಿ : ರಾಜ್ಯಾದ್ಯಂತ ಗೃಹಸಚಿವರ ಮೇಲೆ ಬಹುದೊಡ್ಡ ಸೈಟ್ ಹಗರಣದ ಆಪಾದನೆ ಇದೆ. ಆರಗ ಜ್ಞಾನೇಂದ್ರರವರು ಬೆಂಗಳೂರಿನಲ್ಲಿ ಅಕ್ರಮವಾಗಿ 50 ಕೋಟಿ ಸೈಟ್ ತಾವು ತೆಗೆದುಕೊಂಡು ಅಧಿಕಾರಿಗಳನ್ನು ಮನೆಗೆ ಹೋಗುವ ಹಾಗೆ ಮಾಡಿದ್ದಾರೆ. ಹೈಕೋರ್ಟ್ ಕೂಡ ಈ ವಿಚಾರವಾಗಿ ಇವರ ಕಪಾಳಕ್ಕೆ ಹೊಡೆದಿದ್ದಾರೆ. ಹಾಗಾಗಿ ತೀರ್ಥಹಳ್ಳಿ ಕ್ಷೇತ್ರದ ಘನತೆ ಕಾಪಾಡಲು ರಾಜೀನಾಮೆ ಕೊಡಬೇಕು ಎಂದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ಆಗಿನ ಕಾಲದಲ್ಲಿ ಕಡಿದಾಳ್ ಮಂಜಪ್ಪನವರಿಗೆ ಸೈಟ್ ಕೊಡಲು ಹೋದಾಗಲೇ ಅದನ್ನು ತಿರಸ್ಕಾರ…

Read More

ಸ್ಮಶಾನದ ಜಾಗ ಒತ್ತುವರಿ : ಮೃತದೇಹ ಇಟ್ಟು ಗ್ರಾಮಸ್ಥರ ಪ್ರತಿಭಟನೆ

ಸೊರಬ : ಸರ್ಕಾರದಿಂದ ಮಂಜೂರಾದ ರುದ್ರಭೂಮಿಯನ್ನು ಅತಿಕ್ರಮಣಕಾರರಿಂದ ತೆರವುಗೊಳಿಸುವಂತೆ ಒತ್ತಾಯಿಸಿ ಊರಿನ ಗ್ರಾಮಸ್ಥರೆಲ್ಲಾ ಸೇರಿ ಮೃತದೇಹವನ್ನು ಇಟ್ಟು ಸೊರಬ ಮುಖ್ಯ ರಸ್ತೆಯಲ್ಲಿ ಪ್ರತಿಭಟಿಸಿದ ಘಟನೆ ನಡೆದಿದೆ. ತಾಲೂಕಿನ ಹೆಚ್ಚೆ ಗ್ರಾಮದಲ್ಲಿ ಮಂಜೂರಾದ ರುದ್ರಭೂಮಿಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸಿ ಗಡಿ ಗುರುತಿಸುವಂತೆ ಹತ್ತಾರು ಬಾರಿ ಮನವಿ ನೀಡಿದರೂ ಸಂಬಂಧಪಟ್ಟವರು  ಸ್ಪಂದಿಸಿಲ್ಲ ಹಾಗಾಗಿ ಈ ದಿನ ಹೆಚ್ಚೆ ಊರಿನಲ್ಲಿ ನಿಧನರಾದವರ ಮೃತದೇಹವನ್ನು ಸೊರಬ ಪಟ್ಟಣಕ್ಕೆ ತಂದು ಪ್ರತಿಭಟಿಸಿದ್ದಾರೆ. ಸರ್ಕಾರದಿಂದ 4 ಎಕರೆ ಜಾಗ ಮಂಜೂರಾಗಿದೆ ಆದರೆ…

Read More

ಬೆಂಗಳೂರು ಪೊಲೀಸರಿಗೆ ತೀರ್ಥಹಳ್ಳಿಯ ಗಾಂಧಿಚೌಕದಲ್ಲಿ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ನಟೋರಿಯಸ್ ಕ್ರಿಮಿನಲ್ ಮೋಹಿತ್ ಬಂಧನ :

ತೀರ್ಥಹಳ್ಳಿ : ಕೆಲವು ದಿನಗಳ ಹಿಂದೆ ತೀರ್ಥಹಳ್ಳಿ ಪಟ್ಟಣದ ಗಾಂಧಿ ಚೌಕದಲ್ಲಿ ಬೆಂಗಳೂರು ಪೊಲೀಸರಿಂದ ತಪ್ಪಿಸಿಕೊಂಡಿದ್ದ ಕೈಮರ ಮೋಹಿತ್  ಎಂಬುವ ನಟೋರಿಯಸ್ ನನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ತೀರ್ಥಹಳ್ಳಿ ತುಂಗಾ ಕಾಲೇಜು ಸಮೀಪ ಬದನೇ ಹಿತ್ಲು  ನಿವಾಸಿ ಸಕೇಶ್ ಬಿನ್ ಕೃಷ್ಣ ಶೆಟ್ಟಿ ರವರನ್ನು .ಮೋಹಿತ್ ಮತ್ತು ಆತನ ಸಹಚರರಾದ ಉದಯ ಹಾಗೂ ಅನ್ಸರ್ ಎಂಬುವರು ಅಡ್ಡಗಟ್ಟಿ ದರೋಡೆಗೆ ಪ್ರಯತ್ನಿಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಸಕೇಶ್  ನೀಡಿದ ದೂರಿನ ಮೇರೆಗೆ ತೀರ್ಥಹಳ್ಳಿ ಪೊಲೀಸರು…

Read More

ರಿಪ್ಪನ್‌ಪೇಟೆಯಲ್ಲಿ ಗಣೇಶೋತ್ಸವದ ಅಂಗವಾಗಿ ಶಾಂತಿ ಸಭೆ : ಡ್ರೋಣ್ ಕ್ಯಾಮೆರಾ ಅಳವಡಿಕೆಗೆ ಸೂಚನೆ

ರಿಪ್ಪನ್‌ಪೇಟೆ : ಗಣೇಶೋತ್ಸವ ಅಂಗವಾಗಿ ಗ್ರಾಮ ಪಂಚಾಯ್ತಿ ಸಭಾ ಭವನದಲ್ಲಿ ಪೊಲೀಸ್ ಶಾಂತಿ ಸಮಿತಿ ಸಭೆಯು ಹೊಸನಗರ ವೃತ್ತ ನಿರೀಕ್ಷಕ ಗಿರೀಶ್ ಅಧ್ಯಕ್ಷತೆಯಲ್ಲಿ ಜರುಗಿತು. ಶಿವಮೊಗ್ಗ ಜಿಲ್ಲೆಯಲ್ಲಿಯೇ ರಿಪ್ಪನ್‌ಪೇಟೆ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಗಣಪತಿ ಅಚರಣೆ ಅದ್ದೂರಿಯಾಗಿ ಅಚರಿಸಲಾಗುತ್ತದೆ.ಮತ್ತು ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ಸುಮಾರು ೧೦೪ ಕಡೆಯಲ್ಲಿ ಗಣಪತಿಗಳನ್ನು ಪ್ರತಿಷ್ಟಾಪಿಸಲಾಗುತ್ತಿದ್ದು ಪ್ರತಿಷ್ಟಾಪನೆಗೆ ಇಲಾಖೆ ಅನುಮತಿಗಾಗಿ ಹೊಸನಗರಕ್ಕೆ ಹೋಗಿ ಬರಬೇಕಾಗುತ್ತದೆ ಇದರಿಂದ ಅಯೋಜಕರಿಗೆ ತುಂಬ ಕಷ್ಟವಾಗುತ್ತದೆ ಆ ಕಾರಣ ರಿಪ್ಪನ್‌ಪೇಟೆಯಲ್ಲಿಯೇ ಅನುಮತಿ ನೀಡುವ ಬಗ್ಗೆ ವಿಶೇಷ ಅಧಿಕಾರಿಯನ್ನು…

Read More

ದುರಸ್ತಿಯಾಗದ ರಸ್ತೆ : ರಸ್ತೆಯಲ್ಲೇ ಬಾಳೆ,ಅಡಿಕೆ,ಭತ್ತ ನಾಟಿ‌ಮಾಡುವ ಮೂಲಕ ಪ್ರತಿಭಟನೆ

ಹುಂಚಾ : ಇಲ್ಲಿನ ಸಮೀಪದ ವಾರಂಬಳ್ಳಿಯಲ್ಲಿ ಶಾಲಾ ವಿದ್ಯಾರ್ಥಿಗಳು, ಮಹಿಳೆಯರು, ಊರಿನ ಹಿರಿ-ಕಿರಿಯ ನಾಗರೀಕರು ಒಗ್ಗಟ್ಟಾಗಿ ಶಾಸಕ ಹಾಗೂ ಎಲ್ಲಾ ಜನಪ್ರತಿನಿಧಿಗಳ ವಿರುದ್ದ ಧಿಕ್ಕಾರ ಕೂಗಿದ ಘಟನೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹುಂಚ ಹೋಬಳಿಯ ವಾರಂಬಳ್ಳಿ, ನಿವಣೆ ಸಮೀಪ ನಡೆದಿದೆ. ತೀರ್ಥಹಳ್ಳಿ – ಹೊಸನಗರ ತಾಲ್ಲೂಕಿನ ಗಡಿ ಭಾಗದ ವಾರಂಬಳ್ಳಿ, ನಿವಣೆ, ಗೊರಗೋಡು, ಜಯನಗರ, ಹೇರಗಲ್ಲು, ಕೊಳಗಿ, ಗೊರದಳ್ಳಿ, ಅಲಗಾರು, ಹುಣಸೆಮಕ್ಕಿ ಗ್ರಾಮಸ್ಥರು ಅಡಿಕೆ, ಬಾಳೆ ಸಸಿ, ಭತ್ತದ ಸಸಿಗಳನ್ನು ಕೆಸರಿನಿಂದ ಮುಚ್ಚಿಕೊಂಡಿರುವ ರಸ್ತೆಯಲ್ಲಿ ನಾಟಿ ಮಾಡುವ…

Read More

ಆಯನೂರು ಬಳಿ ಮರಕ್ಕೆ ಡಿಕ್ಕಿ‌ ಹೊಡೆದ ಖಾಸಗಿ ಬಸ್ : ಹಲವರಿಗೆ ಗಂಭೀರ ಗಾಯ

ಆಯನೂರು : ಇಲ್ಲಿನ ಸಮೀಪದ ಕದಂಬ ರೆಸ್ಟೋರೆಂಟ್ ಬಳಿ ಖಾಸಗಿ ಬಸ್ ಮರಕ್ಕೆ ಗುದ್ದಿ ಹಲವರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ. ಚಾಮೇನಹಳ್ಳಿಯಿಂದ ಶಿವಮೊಗ್ಗ ಕಡೆಗೆ ತೆರಳುತಿದ್ದ ಮಂಜುನಾಥ್ ಬಸ್  ವಾಹನವೊಂದನ್ನು ಹಿಂದಿಕ್ಕಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಅಪಘಾತದಲ್ಲಿ ಚಾಮೇನಹಳ್ಳಿ ನಿವಾಸಿಗಳಾದ ಶಿಲ್ಪ(33) ಕೀರ್ತಿ(21) ಭೂಮಿಕಾ(21) ಮತ್ತು ಕಾವ್ಯಾ(21) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಮೂವರು ಶಿವಮೊಗ್ಗದ ಎಟಿ ಎನ್ ಸಿಸಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಕುಂಸಿ ಪೊಲೀಸ್ ಠಾಣೆ…

Read More

ಲಾರಿ ಚಕ್ರ ತಲೆಯ ಮೇಲೆ ಹರಿದು ಅಪರಿಚಿತ ವ್ಯಕ್ತಿ ಸಾವು :

ಆನಂದಪುರ : ಪಟ್ಟಣದ ಸಂತೋಷ್ ರೈಸ್ ಮಿಲ್ ಮುಂಭಾಗದಲ್ಲಿ  ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ವ್ಯಕ್ತಿಯ ತಲೆಯ ಮೇಲೆ ಲಾರಿ ಹರಿದು ಸಾವನ್ನಪ್ಪಿರುವ ಘಟನೆ ನಡೆದಿದ್ದು,ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಆನಂದಪುರದಿಂದ ಕೊಪ್ಪಳಕ್ಕೆ ಭತ್ತದ ಹೊಟ್ಟನ್ನು ತುಂಬಿಕೊಂಡು ಹೊರಡಲು ಸಿದ್ಧವಾಗಿದ್ದ  ಲಾರಿ ಅಪರಿಚಿತ ವ್ಯಕ್ತಿಯ  ತಲೆ ಮೇಲೆ ಹತ್ತಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳೀಯರ ಮಾಹಿತಿಯ ಪ್ರಕಾರ  ಭತ್ತದ ಹೊಟ್ಟು ತುಂಬಿಕೊಂಡು ಲಾರಿ ಹೊರಟ್ಟಿತ್ತು ಆದರೆ ಆಗ ಅಪರಿಚಿತ ವ್ಯಕ್ತಿ ಲಾರಿಯ ಕೆಳಗೆ…

Read More

ಅವಧೂತ ವಿನಯ್ ಗುರೂಜಿ ಜನ್ಮ ದಿನೋತ್ಸವದ ಅಂಗವಾಗಿ ನಡೆದ ರಕ್ತದಾನ ಶಿಬಿರ ಯಶಸ್ವಿ :

ಅವಧೂತ ಗೌರಿಗದ್ದೆ ಮಠದ ಅವಧೂತ ಶ್ರೀ ವಿನಯ್ ಗುರೂಜಿ ಅವರ ಹುಟ್ಟು ಹಬ್ಬದ ಅಂಗವಾಗಿ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯ ಪ್ರೌಢಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಡಿವೈಎಸ್ಪಿ ಶಾಂತವೀರ ಉದ್ಘಾಟನೆ ಮಾಡಿದರು. ಮೇಗರವಳ್ಳಿ ಪ್ರೌಢಶಾಲೆಯಲ್ಲಿ ಶ್ರೀ ವಿನಯ್ ಗುರೂಜಿ ಭಕ್ತ ವೃಂದ, ಪುನೀತ್ ಬ್ರಿಗೇಡ್, ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮ ಸಂಸ್ಥೆ, ರೋಟರಿ ಬ್ಲಡ್ ಬ್ಯಾಂಕ್, ಮೆಗ್ಗಾನ್ ಆಸ್ಪತ್ರೆ ರಕ್ತ ನಿಧಿ ಸಹಯೋಗದಲ್ಲಿ ನಡೆದ ರಕ್ತದಾನ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಕೂಡ ಭಾಗವಹಿಸಿ ರಕ್ತದಾನಿಗಳಿಗೆ ಶುಭ ಕೋರಿದರು….

Read More
Exit mobile version