ರಿಪ್ಪನ್‌ಪೇಟೆ : ಮಸೀದಿ ಮುಂಭಾಗದಲ್ಲಿ ಮದ್ಯದಂಗಡಿ ಅರಂಭಿಸುವುದನ್ನು ವಿರೋಧಿಸಿ ಮೌನ ಪ್ರತಿಭಟನೆಗೆ ಸಿದ್ದತೆ|ಮದ್ಯದಂಗಡಿ ಪ್ರಾರಂಭದ ಹುನ್ನಾರದಲ್ಲಿ ಪ್ರತಿಷ್ಠಿತ ಧರ್ಮದರ್ಶಿಯೊಬ್ಬರ ಹೆಸರು ದುರ್ಬಳಕೆ.???
“ಮಸೀದಿ ಬಳಿ ಮಧ್ಯದಂಗಡಿ ಅರಂಭಿಸುವುದನ್ನು ವಿರೋಧಿಸಿ ಮೌನ ಪ್ರತಿಭನೆಗೆ ಸಿದ್ದತೆ” ರಿಪ್ಪನ್‌ಪೇಟೆ;-ಸರ್ಕಾರದ ಅಬಕಾರಿ ನಿಯಮದಂತೆ ಮಸೀದಿ ಚರ್ಚ್ ದೇವಸ್ಥಾನ ಹಾಗೂ ಶಾಲೆ ಅಸ್ಪತ್ರೆಗೆ 100 ಮೀಟರ್ ಸುತ್ತಳಲೆತೆಯಲ್ಲಿ ಮಧ್ಯದಂಗಡಿ ತೆರೆಯಬಾರದೆಂಬ ನಿಯಮ ಜಾರಿಯಲ್ಲಿದ್ದರೂ ಕೂಡಾ ಇಲ್ಲಿನ ಹೊಸನಗರ ರಸ್ತೆಯ ಜುಮ್ಮಾಮಸೀದಿಯಿಂದ ಕೆಲವೇ ಅಂತರದಲ್ಲಿರುವ ರಾಯಲ್ ಕಂಪರ್ಟ್ ಕಟ್ಟಡದಲ್ಲಿ ಸಿ.ಎಲ್.ನಂ 7 ಬಾರ್ ಅಂಡ್ ರೆಸ್ಟೊರೆಂಟ್‌ಯನ್ನು ಆರಂಭಿಸುವ ಎಲ್ಲ ಸಿದ್ದತೆ ನಡೆದಿದ್ದು ಈ ಬಗ್ಗೆ ಇಂದು ಮುಸ್ಲಿಂ ಸಮುದಾಯದವರು ಶುಕ್ರವಾರದ ನಮಾಜ್ (ಪ್ರಾರ್ಥನೆ) ಮುಗಿಸಿ ಠಾಣೆಗೆ ತೆರಳಿ ಮಸೀದಿ ಬಳಿ…


