Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

ಒಂದೇ ಕುಟುಂಬದ ನಾಲ್ವರ ಸಜೀವ ದಹನ ಪ್ರಕರಣ – ಮೂವರ ವಿರುದ್ದ ಪ್ರಕರಣ ದಾಖಲು|FIR

ತೀರ್ಥಹಳ್ಳಿ ತಾಲೂಕಿನ ಅರಳಸುರಳಿಯ ಬ್ರಾಹ್ಮಣವೊಂದರ ಕುಟುಂಬದ ಸಜೀವ ದಹನದ ಕುರಿತಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅ. 8 ರಂದು ರಾಘವೇಂದ್ರ ಕೇಕುಡ, ನಾಗರತ್ನ, ಶ್ರೀರಾಮ್ ಮತ್ತು ಭರತ್ ಎಂಬ ಒಂದೇ ಕುಟುಂಬದ ನಾಲ್ವರು ಮನೆಯ ಕೊಠಡಿಯೊಂದರಲ್ಲಿ ಕಟ್ಟಿಗೆ ಜೋಡಿಸಿಕೊಂಡು ಸಜೀವ ದಹನಕ್ಕೆ ಮುಂದಾಗಿದ್ದರು. ಭರತ್ ಸಾವಿನ ನಂತರ ಪ್ರಕರಣವನ್ನು ಯುಡಿಆರ್ (ಅಸಹಜ ಸಾವಿನ ವರದಿ) ಎಂದು ದಾಖಲಾಗಿದೆ ಎಂದು ಭಾವಿಸಲಾಗಿತ್ತು. ಆದರೆ ಭರತ್ ಸಾವಿನ ನಂತರ ರಾಘವೇಂದ್ರ ಅವರ ಪತ್ನಿಯ ಸಹೋದರನ…

Read More

ಹಾಲುಗುಡ್ಡೆ ನಿವಾಸಿ ಕೃಷಿಕ ರಾಮಕೃಷ್ಣಪ್ಪ ಗೌಡ ನಿಧನ|rpet

ನಿಧನ ವಾರ್ತೆ  ರಾಮಕೃಷ್ಣಪ್ಪ ಗೌಡ (ಈಚಲು ಗುಡ್ಡೆ) ರಿಪ್ಪನ್ ಪೇಟೆ : ಇಲ್ಲಿನ ಬಾಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಲುಗುಡ್ಡೆ ಗ್ರಾಮದ ನಿವಾಸಿ ಕೃಷಿಕ ರಾಮಕೃಷ್ಣಪ್ಪ ಗೌಡ (ಈಚಲು ಗುಡ್ಡೆ) 84 ವರ್ಷ  ಅವರು ವಯೊಸಹಜದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು.   ಮೃತರಿಗೆ ಪತ್ನಿ, ಪುತ್ರಿ ಹಾಗೂ ಮೂವರು ಪುತ್ರರು ಇದ್ದಾರೆ. ಮೃತರ ಅಂತ್ಯಕ್ರಿಯೆ ಹಾಲುಗುಡ್ಡೆಯಲ್ಲಿರುವ ಮೃತರ ಸ್ವಂತ ಜಮೀನಿನಲ್ಲಿ ಇಂದು ಸಂಜೆ ನೆರವೇರಿತು.

Read More

ರಾಗಿಗುಡ್ದದ ಜನತೆಗೆ ಸಾಂತ್ವನ ಹೇಳಲು ಹೊರಟಿದ್ದ ನನ್ನನು ತಡೆದು ಪೊಲೀಸರು ದೌರ್ಜನ್ಯ ನಡೆಸಿದ್ದಾರೆ: ಮುತಾಲಿಕ್|muthalik

ರಾಗಿಗುಡ್ದದ ಜನತೆಗೆ ಸಾಂತ್ವನ ಹೇಳಲು ಹೊರಟಿದ್ದ ನನ್ನನು ತಡೆದು ಪೊಲೀಸರು ದೌರ್ಜನ್ಯ ನಡೆಸಿದ್ದಾರೆ: ಮುತಾಲಿಕ್ ಶಿವಮೊಗ್ಗ ಜಿಲ್ಲಾಡಳಿತ ಒಂದು ತಿಂಗಳ‌ವರೆಗೆ ಶಿವಮೊಗ್ಗದ ರಾಗಿ ಗುಡ್ಡ ಪ್ರವೇಶ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲಾಗುವುದು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು. ಬುಧವಾರ ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ರಾಗಿಗುಡ್ಡಕ್ಕೆ ಪ್ರವೇಶ ಮಾಡದಂತೆ ಪ್ರತಿಬಂಧಕಾಜ್ಞೆ ಹೊರಡಿಸಿರುವುದು ಅತ್ಯಂತ ಖಂಡನೀಯ. ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯ ಸ್ಪಷ್ಟ ಉದಾಹರಣೆ ಎಂದು ದೂರಿದರು….

Read More

ಸರ್ಕಾರಿ ಆಸ್ಪತ್ರೆ ಆಂಬುಲೆನ್ಸ್ ಡ್ರೈವರ್ ಆತ್ಮಹತ್ಯೆ|crime news

ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆ ಆಂಬುಲೆನ್ಸ್ ಡ್ರೈವರ್ ಆತ್ಮಹತ್ಯೆ  ತೀರ್ಥಹಳ್ಳಿ: ತೀರ್ಥಹಳ್ಳಿ ಜೆಸಿ ಆಸ್ಪತ್ರೆಯಲ್ಲಿ ನಗುಮಗು ಆಂಬುಲೆನ್ಸ್ ವಾಹನದ ಸೇವೆಯ ಚಾಲಕ ವೃತ್ತಿ ಮಾಡಿಕೊಂಡು ಬೆಟ್ಟಮಕ್ಕಿಯಲ್ಲಿ ವಾಸವಾಗಿದ್ದ ರಮೇಶ್ ನೇಣುಬಿಗಿದುಕೊಂಡು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಬೆಟ್ಟಮಕ್ಕಿಯ ತನ್ನ ಬಾಡಿಗೆ ಮನೆಯಲ್ಲಿ ಮಂಗಳವಾರ ರಾತ್ರಿ ನೇಣಿಗೆ ಶರಣಾಗಿದ್ದು, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ರಮೇಶ್ ಅನೇಕ ಸಂದರ್ಭದಲ್ಲಿ ಜೀವದ ನೂರಾರು ಜನರ ಜೀವ ಉಳಿಸಿದ್ದು ಕೋವಿಡ್ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು. ಮೃತದೇಹವನ್ನು ಅವರ ಸ್ವಂತ ಊರು ಹೊಸನಗರಕ್ಕೆ ತೆಗೆದುಕೊಂಡು…

Read More

ಬಿಜೆಪಿಯ ಮಾಜಿ ಮಂತ್ರಿಯೊಬ್ಬರು 50 ಕೋಟಿ ರೂಪಾಯಿ ಹಿಡಿದುಕೊಂಡು ಕಾಂಗ್ರೆಸ್ ಶಾಸಕರ ಮನೆ ಬಾಗಿಲು ತಟ್ಟುತಿದ್ದಾರೆ – ಆಯನೂರು ಗಂಭೀರ ಆರೋಪ|political news

ಬಿಜೆಪಿಯ ಮಾಜಿ ಮಂತ್ರಿಯೊಬ್ಬರು 50 ಕೋಟಿ ರೂಪಾಯಿ ಹಿಡಿದುಕೊಂಡು ಕಾಂಗ್ರೆಸ್ ಶಾಸಕರ ಮನೆ ಬಾಗಿಲು ತಟ್ಟುತಿದ್ದಾರೆ – ಆಯನೂರು ಗಂಭೀರ ಆರೋಪ ಶಿವಮೊಗ್ಗ : ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಾಡಿದ ಮಾಜಿ ಮಂತ್ರಿ ಇದೀಗ ಕಾಂಗ್ರೆಸ್ ನಾಯಕರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಕಾಂಗ್ರೆಸ್ ಶಾಸಕರ ಮನೆಬಾಗಿಲಿಗೆ ಹೋಗಿ 50 ಕೋಟಿ ಕೊಡುತ್ತೇವೆ ಎಂದು ಹೇಳಿ ಪಕ್ಷಕ್ಕೆ ಆಹ್ವಾನಿಸುತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದ್ದಾರೆ. ಶಿವಮೊಗ್ಗದಲ್ಲಿ ಕೆಪಿಸಿಸಿ ಕಛೇರಿಯಲ್ಲಿ ಅವರು ಮಾತನಾಡುತ್ತಾ   ಭ್ರಷ್ಟಾಚಾರಿ ಬಿಜೆಪಿಯವರು ಭ್ರಷ್ಟಾಚಾರದ…

Read More

ರಾಗಿಗುಡ್ಡ ಭೇಟಿಗೆ ತೆರಳುತಿದ್ದ ಪ್ರಮೋದ್ ಮುತಾಲಿಕ್ ರನ್ನು ಮಾಸ್ತಿಕಟ್ಟೆಯಲ್ಲೇ ತಡೆದ ಪೊಲೀಸರು – 30 ದಿನ ಜಿಲ್ಲೆಗೆ ಪ್ರವೇಶಿಸದಂತೆ ನೋಟಿಸ್

ಶಿವಮೊಗ್ಗ : ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಶಿವಮೊಗ್ಗ ಭೇಟಿಗಾಗಿ ಮಂಗಳೂರಿನಿಂದ ಬರುತಿದ್ದ ವೇಳೆಯಲ್ಲಿ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿ ತಡೆದು ಪ್ರತ್ಯೇಕ ಕಾರಿನಲ್ಲಿ ದಾವಣಗೆರೆಗೆ ಕಳುಹಿಸಿಕೊಟ್ಟಿದ್ದಾರೆ. ಹೌದು, ಪ್ರಮೋದ್ ಮುತಾಲಿಕ್ ಶಿವಮೊಗ್ಗ ಭೇಟಿಗೆ 30 ದಿನ ನಿರ್ಬಂಧ ವಿಧಿಸಲಾಗಿದೆ.ಶಿವಮೊಗ್ಗ ಜಿಲ್ಲೆಗೆ ಪ್ರವೇಶ ಮಾಡದಂತೆ ಶಿವಮೊಗ್ಗ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಇಲಾಖೆ ಕೋರಿಕೆ ಮೇರೆಗೆ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಪ್ರಮೋದ್ ಮುತಾಲಿಕ್ ಮಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ವೇಳೆ ಹೊಸನಗರ ತಾಲೂಕಿನ…

Read More

C M ಇಬ್ರಾಹಿಂ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಗೌರವಯುತವಾಗಿ ರಾಜೀನಾಮೆ ನೀಡಿ ಪಕ್ಷದಿಂದ ಹೊರನಡೆಯಲಿ – ಅರ್ ಎ ಚಾಬುಸಾಬ್|JDS

C M ಇಬ್ರಾಹಿಂ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಗೌರವಯುತವಾಗಿ ರಾಜೀನಾಮೆ ನೀಡಿ ಪಕ್ಷದಿಂದ ಹೊರನಡೆಯಲಿ – ಅರ್ ಎ ಚಾಬುಸಾಬ್ ರಿಪ್ಪನ್‌ಪೇಟೆ : ಸಿ ಎಂ ಇಬ್ರಾಹಿಂ ರವರು ಗೌರವಯುತವಾಗಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಹೋಗಲಿ ಅದನ್ನು ಹೊರತುಪಡಿಸಿ ಯಾರದೋ ಮನೆಯಲ್ಲಿ ಯಜಮಾನಿಕೆ ನಡೆಸಲು ಬಂದರೆ ಸಹಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ಎ ಚಾಬುಸಾಬ್ ಹೇಳಿದರು. ಪಟ್ಟಣದ ಕುವೆಂಪು ಸಭಾಂಗಣದಲ್ಲಿ ಪತ್ರೀಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಸಿ…

Read More

ತುಂಗಾ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ತೀರ್ಥಹಳ್ಳಿಯ ನಾಲ್ವರಿಗೆ ನೋಟಿಸ್|NIA

ತುಂಗಾ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ತೀರ್ಥಹಳ್ಳಿಯ ನಾಲ್ವರಿಗೆ ನೋಟಿಸ್ ಶಿವಮೊಗ್ಗದ ತುಂಗಾ ತೀರದಲ್ಲಿ ಟ್ರಯಲ್ ಬ್ಲ್ಯಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ಮೂಲದ ನಾಲ್ವರಿಗೆ ಎನ್​ಐಎ (NIA) ನೋಟಿಸ್ ಜಾರಿ ಮಾಡಿದೆ. ತೀರ್ಥಹಳ್ಳಿ ಮೂಲದ ಶಂಸುದ್ದೀನ್, ರಿಜ್ವಾನ್, ನಜೀಬ್ ವುಲ್ಲಾ ಹಾಗೂ ತಮೀಮ್​ಗೆ ವಿಚಾರಣೆಗೆ ಹಾಜರಾಗುವಂತೆ ಎನ್​​ಐಎ ನೋಟಿಸ್ ನೀಡಿದೆ. ಅಕ್ಟೋಬರ್ 19ರ ಮಧ್ಯಾಹ್ನದೊಳಗೆ ಬೆಂಗಳೂರಿನ‌ ಎನ್​ಐಎ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ನಲ್ಲಿ ಸೂಚನೆ ನೀಡಲಾಗಿದೆ. 2022ರ ಆ.26ರಂದು ಶಿವಮೊಗ್ಗ ತುಂಗಾ ನದಿ ತೀರದಲ್ಲಿ…

Read More

ಅಕ್ರಮವಾಗಿ ಮರಳು ಸಾಗಿಸುತಿದ್ದ ಎರಡು ಟಿಪ್ಪರ್ ಲಾರಿ ವಶಕ್ಕೆ..!!|sand

ಹೊಸನಗರ : ಹಿನ್ನೀರು ಪ್ರದೇಶದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ಟಿಪ್ಪರ್ ಲಾರಿಗಳನ್ನು ವಶಪಡೆದು ಎರಡು ಪ್ರತ್ಯೇಕ ಪ್ರಕರಣಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ದಾಖಲಿಸಿದ್ದಾರೆ. ಪರವಾನಿಗೆ ಇಲ್ಲದೆ ಟಿಪ್ಪರ್ ಲಾರಿಗಳಲ್ಲಿ ಮರಳು ಸಾಗಾಣಿಕೆ ಮಾಡುತ್ತಿದ್ದ ವೇಳೆ ದಾಳಿ ನಡೆಸಿ ಆರೋಪಿಗಳ ಸಹಿತ ಮರಳು ತುಂಬಿದ ಟಿಪ್ಪರ್‌ ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಸೊನಲೆ ಗ್ರಾಮದ ಕಿರಣ್ ಹಾಗೂ ಬಟ್ಟೆಮಲ್ಲಪ್ಪದ ದೇವರಾಜ ಎಂಬುವವರು ಕರಿನಗೊಳ್ಳಿ ಹಾಗೂ ಮುತ್ತಲ ಗ್ರಾಮಗಳಲ್ಲಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದರು….

Read More

ಕೋಡೂರು – ಬಸ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವು|accident

ಕೋಡೂರು – ಬಸ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವು ಚಲಿಸುತ್ತಿದ್ದ ಖಾಸಗಿ ಬಸ್‌ನಿಂದ ಮಗುವಿನೊಂದಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತರಾದರು. ಮೃತ ವ್ಯಕ್ತಿ ಕುಮಾರ್ ಆರ್ (62) ಎಂದು ಗುರುತಿಸಲಾಗಿದೆ. ಮೂಲತಃ ಮಡಿಕೇರಿಯವನಾದ ಈತ ಕಳೆದೊಂದು ವರ್ಷದಿಂದ ಚಿಕ್ಕಜೇನಿ ತಮ್ಮ ಪುತ್ರಿಯ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಕಳೆದ ಮಂಗಳವಾರ ರಿಪ್ಪನ್ ಪೇಟೆ ವ್ಯಾಪ್ತಿಯ ಕೋಡೂರು ಗ್ರಾಮ ಪಂಚಾಯತಿಯ ಶಾಂತಪುರದಲ್ಲಿ ಹೊಸನಗರದಿಂದ ಶಿವಮೊಗ್ಗ ಕಡೆ ಹೊರಟಿದ್ದ…

Read More
Exit mobile version