Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Garthikere | ಶಿಕ್ಷಕನಿಂದ ಬ್ರಾಹ್ಮಣ ವಿದ್ಯಾರ್ಥಿನಿಗೆ ಮೊಟ್ಟೆ ತಿನ್ನಲು ಒತ್ತಾಯ – ಪೋಷಕರ ಆರೋಪ

ಶಿಕ್ಷಕನಿಂದ ಬ್ರಾಹ್ಮಣ ವಿದ್ಯಾರ್ಥಿನಿಗೆ ಮೊಟ್ಟೆ ತಿನ್ನಲು ಒತ್ತಾಯ – ಪೋಷಕರ ಆರೋಪ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅಮೃತ ಗ್ರಾಮದ ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿನಿಗೆ ಶಿಕ್ಷಕರೊಬ್ಬರು ಮೊಟ್ಟೆ ತಿನ್ನಲು ಒತ್ತಾಯ ಮಾಡುತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಕೆಪಿಎಸ್ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರೊಬ್ಬರು ಶಾಲೆಯ ಬ್ರಾಹ್ಮಣ ವಿದ್ಯಾರ್ಥಿನಿಯೊಬ್ಬರಿಗೆ ಮಂಗಳವಾರ ಒತ್ತಾಯ ಪೂರ್ವಕವಾಗಿ ಮೊಟ್ಟೆ ತಿನ್ನಿಸಿದ್ದು ಇದರಿಂದ ವಿದ್ಯಾರ್ಥಿನಿಯ ಆರೋಗ್ಯದಲ್ಲಿ ಏರುಪೇರಾಗಿದ್ದು ಇದರಿಂದ ನಮ್ಮ ಧಾರ್ಮಿಕ ಆಚರಣೆಗೆ ಧಕ್ಕೆಯಾಗಿರುತ್ತದೆ ಎಂದು ಪೋಷಕರಾದ ಶ್ರೀಕಾಂತ್…

Read More

Malali | ಧರ್ಮ ಪ್ರಸಾರದೊಂದಿಗೆ ಮಳಲಿ ಮಠಾಧೀಶರ ಕೃಷಿ ಕ್ರಾಂತಿ

Malali | ಧರ್ಮ ಪ್ರಸಾರದೊಂದಿಗೆ ಮಳಲಿ ಮಠಾಧೀಶರ ಕೃಷಿ ಕ್ರಾಂತಿ – ಮಳಲಿಮಠದ ಶ್ರೀಗಳ ಪಟ್ಟಾಧಿಕಾರದ ರಜತ ವರ್ಧಂತಿ ಮಹೋತ್ಸವ ರಿಪ್ಪನ್‌ಪೇಟೆ;-ಧರ್ಮ ಪ್ರಸಾರದೊಂದಿಗೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ಹೊಸ ಹೊಸ ಅವಿಷ್ಕಾರದೊಂದಿಗೆ ಮಳಲಿಮಠದ ಪಟ್ಟಾಧ್ಯಕ್ಷರಾದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಕೃಷಿ ಕ್ರಾಂತಿಯಲ್ಲಿ ಯಶಸ್ವಿಯಾಗಿ ಮುನ್ನೆಡೆಯುತ್ತಿದ್ದಾರೆ. ಧರ್ಮದ ದೇವ ತಪೋ ಭೂಮಿ ಭಾರತ. ದೇವರು ಮತ್ತು ಧರ್ಮದಲ್ಲಿ ನಂಬಿಕೆಯಿಟ್ಟ ಈ ನಾಡು ಪವಿತ್ರ ಪುಣ್ಯ ಭೂಮಿಯಲ್ಲಿ ಹಲವಾರು ಧರ್ಮಗಳು ಮೈದಾಳಿ ಬಂದಿವೆ. ಅನೇಕ ಧರ್ಮಗಳಲ್ಲಿ ವೀರಶೈವ ಧರ್ಮವು ಒಂದಾಗಿದೆ.ಪರಶಿವನಿಗೆ…

Read More

Kumsi | ವಿಷ ಸೇವಿಸಿ ಯುವಕ ಆತ್ಮಹತ್ಯೆ – ಪ್ರೇಮ ವೈಫಲ್ಯದ ಶಂಕೆ..!!!

Kumsi | ವಿಷ ಸೇವಿಸಿ ಯುವಕ ಆತ್ಮಹತ್ಯೆ – ಪ್ರೇಮ ವೈಫಲ್ಯದ ಶಂಕೆ..!!! ಶಿವಮೊಗ್ಗ : ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಪ್ರೇಮ ವೈಫಲ್ಯದಿಂದ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ ನಿನ್ನೆ ಸಂಜೆ ವಿನೋದ್(21) ಎಂಬ ಯುವಕ ಆಡುಗೋಡಿ ಗ್ರಾಮದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಪದವಿ ಪಾಸಾಗಿದ್ದ ವಿನೋದ್ ನಿನ್ನೆ ಜಮೀನಿಗೆ ಹೋಗಿ ಬಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ,ಪ್ರೇಮ ವೈಫಲ್ಯದಿಂದ ಬೇಸತ್ತು ಈ ಘತನೆ ನಡೆದಿರಬಹುದು ಎನ್ನಲಾಗುತಿದ್ದು…

Read More

Ripponpet | ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸಿ : ನಿರ್ಭಯಾನಂದ ಸರಸ್ವತಿ ಸ್ವಾಮೀಜಿ

ಸಾವಿರ ಭಾರಿ ಸೋಲುಂಡರು ಚಿಂತಿಸದೇ  ಛಲಬಿಡದೆ ಹೋರಾಟದಿಂದ ಯಶಸ್ಸು ಸಾಧ್ಯ – ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ರಿಪ್ಪನ್‌ಪೇಟೆ : ಭಾರತದಲ್ಲಿ ಪ್ರತಿಭಾನ್ವಿತ ಸಾಧಕರಿದ್ದಾರೆ. ಆದರೆ ಅವರಿಗೆ ಪ್ರೋತ್ಸಾಹ-ಅವಕಾಶಗಳಿಲ್ಲ,ನಮ್ಮಲ್ಲಿ ಎಷ್ಟೇ ಸಂಶೋಧನೆಗಳಾದರೂ ಅವು ಸದ್ಬಳಕೆಯಾಗಿದ್ದು ವಿದೇಶಗಳಲ್ಲಿ  ಹೀಗಾಗಿ ಆ ದೇಶಗಳು ಮುಂದುವರಿದಿವೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು ಪಟ್ಟಣದ ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಜ್ಞಾನ ಮತ್ತು ತಾಂತ್ರಿಕತೆ ಇಂದು ಬಹಳಷ್ಟು ವಿಸ್ತಾರಗೊಂಡಿದೆ….

Read More

Hosanagara | ಪೊಲೀಸ್ ಠಾಣೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Hosanagara | ಪೊಲೀಸ್ ಠಾಣೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹೊಸನಗರ : ಪ್ರತಿಯೊಬ್ಬರೂ ನಾಡು, ನುಡಿಗೆ ಅರ್ಥ ಕಲ್ಪಿಸಿ ಕನ್ನಡ ಭಾಷಾಭಿಮಾನ ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ಪಿಎಸ್‌ಐ ಶಿವಾನಂದ ಕೋಳಿ ತಿಳಿಸಿದರು. ಕರ್ನಾಟಕ ರಾಜ್ಯದ ಏಕೀಕರಣ ಹಿನ್ನಲೆಯಲ್ಲಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಟ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹೆತ್ತ ತಾಯಿಗೆ ಸಮನಾದ ನಾಡು, ನುಡಿ, ಭಾಷೆಯ ವಿಷಯದಲ್ಲಿ ನಾಡಿನ ಸಮಸ್ತ ಜನತೆ ಒಗ್ಗೂಡಿ, ಪ್ರಾಮಾಣಿಕವಾಗಿ…

Read More

ವಾಟ್ಸಾಪ್ ನಲ್ಲಿ ಬೆತ್ತಲಾಗಿ ಹಣಕ್ಕಾಗಿ ಬೇಡಿಕೆ ಇಟ್ಟ ಸುಂದರಿ – ಹಣ ಕೊಡದಿದ್ದಕ್ಕೆ ಕಿಡ್ನಾಪ್ : ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಐವರ ಬಂಧನ |honey trap

ವಾಟ್ಸಾಪ್ ನಲ್ಲಿ ಬೆತ್ತಲಾಗಿ ಹಣಕ್ಕಾಗಿ ಬೇಡಿಕೆ ಇಟ್ಟ ಸುಂದರಿ – ಹಣ ಕೊಡದಿದ್ದಕ್ಕೆ ಕಿಡ್ನಾಪ್ : ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಐವರ ಬಂಧನ ಶಿವಮೊಗ್ಗ : ಹನಿ ಟ್ರ್ಯಾಪ್(Honey trap) ಮೂಲಕ ಹಣಕ್ಕೆ ಬೇಡಿಕೆಯಿಡುತಿದ್ದ ನಟೋರಿಯಸ್ ಗ್ಯಾಂಗ್ ನ್ನು ಭದ್ರಾವತಿ(bhadravathi) ಹೊಸಮನೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮದುವೆ ನಿಶ್ಚಯವಾಗಿದ್ದ ಭದ್ರಾವತಿ ಮೂಲದ ಯುವಕನಿಗೆ ವಾಟ್ಸಾಪ್(Whatsup) ನಲ್ಲಿ ಬೆತ್ತಲೆ ಕರೆ ಮಾಡಿ ಅದನ್ನು ರೆಕಾರ್ಡ್ ಮಾಡಿಕೊಂಡು  ಹಣಕ್ಕಾಗಿ ಬೇಡಿಕೆಯಿಟ್ಟು ನಂತರ ಕಿಡ್ನಾಪ್(kidnap) ಮಾಡಿ ಅಕ್ರಮ ಬಂಧನದಲ್ಲಿಟ್ಟಿದ್ದರು.ಈ ಹಿನ್ನಲೆಯಲ್ಲಿ ಭದ್ರಾವತಿ…

Read More

ಕೋಡೂರಿನಲ್ಲಿ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವ ಸಾವು|accident

ಕೋಡೂರಿನಲ್ಲಿ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವ ಸಾವು ಬೈಕ್ ಗಳ ನಡುವೆ ನಡೆದ ಮುಖಾಮುಖಿ ಢಿಕ್ಕಿಯಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಮದ ಕಾಂತಾರ ಹೋಟೆಲ್ ಬಳಿ ನಡೆದಿದೆ‌. ಕೋಡೂರಿನ ಕಾಂತಾರ ಹೋಟೆಲ್ ಸಮೀಪದಲ್ಲಿ ಈ ಘಟನೆ ನಡೆದಿದ್ದು ಲಿಂಗಪ್ಪ ಕುನ್ನೂರು(55) ಮೃತಪಟ್ಟ ದುರ್ಧೈವಿಯಾಗಿದ್ದಾರೆ.ಗಂಭೀರ ಗಾಯಗೊಂಡಿದ್ದ ಗಾಯಾಳುವನ್ನು ಶಿವಮೊಗ್ಗಕ್ಕೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಹೊಸನಗರ ಕಡೆಯಿಂದ ಕೋಡೂರು ಕಡೆಗೆ ತೆರಳುತಿದ್ದ ಟಿವಿಎಸ್ ಎಕ್ಸೆಲ್ ಮತ್ತು ಕೋಡೂರು…

Read More

Thirthahalli | ಕುಪ್ಪಳ್ಳಿ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ

ಕುಪ್ಪಳ್ಳಿ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ ತೀರ್ಥಹಳ್ಳಿ : ಅತೀ ವೇಗವಾಗಿ ಚಲಾಯಿಸಿದ  ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ತಾಲೂಕಿನ ಕುಪ್ಪಳ್ಳಿ ಸಮೀಪದಲ್ಲಿ ನೆಡೆದಿದೆ. ಕೊಪ್ಪದಿಂದ ತೀರ್ಥಹಳ್ಳಿ ಕಡೆಗೆ ಬರುತಿದ್ದ ಹ್ಯುಂಡಾಯ್ i 20 ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದಿದೆ.  ಕಾರಿನಲ್ಲಿ ಚಾಲಕನೊಬ್ಬನೆ ಇದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆಯಲ್ಲಿ ಕಾರು ಸಂಪೂರ್ಣ ಜಖಂ ಆಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ…

Read More

Ripponpete | ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರೆಸಬಾರದು – ಶಾಸಕ ಬೇಳೂರು

ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರೆಸಬಾರದು – ಶಾಸಕ ಬೇಳೂರು  ರಿಪ್ಪನ್‌ಪೇಟೆ – ಸಹಕಾರಿ ಕ್ಷೇತ್ರವನ್ನು ನಾವು ಇಂದು ಉಳಿಸಿ ಬೆಳೆಸಬೇಕಾಗಿದೆ. ಹಳೆ ನಂಬರ್ ಕ್ಷೇತ್ರದ ರೈತರ ಪರವಾಗಿ ಸದಾ ನಾನು ನಿಮ್ಮೊಂದಿಗೆ ಧ್ವನಿಯಾಗಿರುತ್ತೇನೆ  ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರಸದೆ  ಎತ್ತರಕ್ಕೆ ಬೆಳೆಸುವಂತೆ  ಆಗಬೇಕು ಎಂದು ಶಾಸಕ  ಬೇಳೂರು ಗೋಪಾಲಕೃಷ್ಣ ಹೇಳಿದರು. ಪಟ್ಟಣದ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ  ನಡೆದ ಕರ್ನಾಟಕ ರಾಜ್ಯ ಮಹಾಮಂಡಳ ನಿಯಮಿತ, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಜಿಲ್ಲಾ ಡಿಸಿಸಿ ಬ್ಯಾಂಕ್, ಸಹಕಾರ ಹಾಲು…

Read More

Ripponpet | ಗ್ರಾಮೀಣ ಯುವಕರಲ್ಲಿ ಕ್ರೀಡಾ ಚಟುವಟಿಕೆಯಿಂದ ಕ್ರೀಯಾಶೀಲ ಬದುಕು – ಶಾಸಕ ಬೇಳೂರು

ಗ್ರಾಮೀಣ ಯುವಕರಲ್ಲಿ ಕ್ರೀಡಾ ಚಟುವಟಿಕೆಯಿಂದ ಕ್ರೀಯಾಶೀಲ ಬದುಕು’’ ರಿಪ್ಪನ್‌ಪೇಟೆ;-ದೈನಂದಿನ ಕ್ರೀಡಾ ಚಟುವಟಿಕೆಯಲ್ಲಿ ಗ್ರಾಮಸ್ಥರು ಹಾಗೂ ಮಕ್ಕಳು ತೊಡಗಿಸಿಕೊಂಡಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಗೆ ಕ್ರೀಯಾಶೀಲರಾಗಿರಬಹುದು  ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ರಿಪ್ಪನ್‌ಪೇಟೆ ಸಮೀಪದ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದ ಛತ್ರಪತಿ ಶಿವಾಜಿ ಯುವಕ ಸಂಘದವರು ಆಯೋಜಿಸಲಾದ ಕ್ರಿಕೇಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಕ್ರಿಕೇಟ್ ಬ್ಯಾಟಿಂಗ್ ಮಾಡಿ ನಂತರ ಮಾತನಾಡಿ ಗ್ರಾಮಸ್ಥರು ಒತ್ತಡದ ಬದುಕಿನಲ್ಲಲಿ ತಮ್ಮ ಅಲ್ಪ ಸಮಯವನ್ನು ವ್ಯಾಯಾಮ…

Read More
Exit mobile version