Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Accident | ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ – ತಪ್ಪಿದ ಭಾರಿ ಅನಾಹುತ

ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ – ತಪ್ಪಿದ ಭಾರಿ ಅನಾಹುತ ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಅಮ್ಮನ ಘಟ್ಟ ತಿರುವಿನ ಬಳಿ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿದ್ದು ಅಗ್ನಿಶಾಮಕ ದಳದ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಇಂದು ಬೆಳಗಿನಜಾವ ಮಂಗಳೂರಿನಿಂದ ಬಳ್ಳಾರಿ ಜಿಲ್ಲೆ ಕೂಡ್ಲಿಗಿಗೆ ಇಂಧನ ತುಂಬಿಸಿಕೊಂಡು ಹೋಗುತ್ತಿದ್ದ ಪೆಟ್ರೋಲ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಮಗುಚಿ ಬಿದ್ದು ದುರಂತ ಸಂಭವಿಸಿದೆ.  ಘಟನೆ ನಡೆದ ಸ್ಥಳದ ಸಮೀಪದಲ್ಲೇ ಕೋಡೂರು ಪೆಟ್ರೋಲ್…

Read More

Hosanagara | ಅಡಿಕೆ ತೋಟಕ್ಕೆ ಔಷದಿ ಸಿಂಪಡಿಸುವಾಗ ಅಸ್ವಸ್ಥಗೊಂಡು ರೈತ ಸಾವು – ಸೂಕ್ತ ಪರಿಹಾರಕ್ಕೆ ಆಗ್ರಹ

ಅಡಿಕೆ ತೋಟಕ್ಕೆ ಔಷದಿ ಸಿಂಪಡಿಸುವಾಗ ಅಸ್ವಸ್ಥಗೊಂಡು ರೈತ ಸಾವು  ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡೇನಕೊಪ್ಪ  ಗ್ರಾಮದ ಗಣೇಶ್ ಪೂಜಾರಿ ಎಂಬುವವರು ಅಡಿಕೆ ತೋಟಕ್ಕೆ ಕ್ರಿಮಿನಾಶಕ ಸಿಂಪಡಿಸುತ್ತಿದ್ದಾಗ ತಲೆ ಸುತ್ತು ಬಂದು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ನಡೆದಿದೆ. ರೈತ ಗಣೇಶ್ ಪೂಜಾರಿ ಔಷಧಿ ಸಿಂಪಡಣೆ ಮಾಡುವಾಗ ಅಸ್ವಸ್ಥಗೊಂಡಿದ್ದು ತಕ್ಷಣವೇ ಅವರನ್ನು ಕುಟುಂಬದವರು ಹೊಸನಗರ ಆಸ್ಪತ್ರೆಗೆ ಕರೆದೊಯ್ದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ರಕ್ತ ವಾಂತಿ ಜಾಸ್ತಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾರೆ. ಮೃತರು…

Read More

Shivamogga | ಮೋದಿ ಕಾರ್ಯಕ್ರಮದಲ್ಲಿ ಜೇಬುಗಳ್ಳರ ಹಾವಳಿ – ಓರ್ವ ವಶಕ್ಕೆ..!!

ಶಿವಮೊಗ್ಗದ ಮೋದಿ ಕಾರ್ಯಕ್ರಮದಲ್ಲಿ ಜೇಬುಗಳ್ಳರ ಹಾವಳಿ – ಓರ್ವ ವಶಕ್ಕೆ..!! ಶಿವಮೊಗ್ಗದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ನಡೆದ‌ ಮೋದಿ ಕಾರ್ಯಕ್ರಮದಲ್ಲಿ ಕಳ್ಳಕಾಕರ ಹಾವಳಿ ಹೆಚ್ಚಾಗಿದ್ದು ಬಿಗಿ ಬಂದೋ ಬಸ್ತ್ ಇದ್ದರೂ ಕಳ್ಳರ ಹಾವಳಿ ತಪ್ಪಿಸಲು ಸಾಧ್ಯವಾಗಿಲ್ಲ. ಸಭೆಯಲ್ಲಿ ಭಾಗಿಯಾಗಿರುವ ಶ್ರೀನಿವಾಸ್ ಮತ್ತು ರವಿಕುಮಾರ್ ಎಂಬುವವರ ಪ್ಯಾಂಟ್ ಜೇಬಿಗೆ ಕತ್ತರಿ ಹಾಕಿರುವ ಮೂವರು ಕಳ್ಳರಲ್ಲಿ ಓರ್ವನನ್ನು ಹಿಡಿದ ಸಾರ್ವಜನಿಕರು ಆಟೋದಲ್ಲಿ ಜಯನಗರ ಪೊಲೀಸ್ ಠಾಣೆಗೆ ಕರೆತರಲು ಮುಂದಾಗಿದ್ದಾರೆ. ಇನ್ನಿಬ್ಬರು ಎಸ್ಕೇಪ್ ಆಗಿದ್ದಾರೆ. ಪಿಕ್ ಪ್ಯಾಕೆಟ್ ಮಾಡಲು ಹೋಗಿ ಸಿಕ್ಕಿಬಿದ್ದವನನ್ನು…

Read More

ಹೊಸನಗರದಲ್ಲಿ ಯುವರತ್ನ ಪುನೀತ್ ರಾಜ್‍ಕುಮಾರ್ 49ನೇ ಹುಟ್ಟು ಹಬ್ಬ ಹಾಗೂ RCB ವಿಜಯೋತ್ಸವ ಆಚರಣೆ

ಹೊಸನಗರದಲ್ಲಿ ಯುವರತ್ನ ಪುನೀತ್ ರಾಜ್‍ಕುಮಾರ್ 49ನೇ ಹುಟ್ಟು ಹಬ್ಬ ಹಾಗೂ RCB ವಿಜಯೋತ್ಸವ ಆಚರಣೆ ಹೊಸನಗರ : ಪಟ್ಟಣದ ಗೇರುಪುರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಸ್ಯಾಂಡಲ್ ವುಡ್ ನ ಯುವರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಅವರ 49ನೇ ಹುಟ್ಟುಹಬ್ಬವನ್ನು ಪಟ್ಟಣದ ಡಾಕ್ಟರ್ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದವರು ಸಂಭ್ರಮ ಸಡಗರದಿಂದ ಆಚರಿಸಿದರು. ಪ್ರಪಂಚದ ಕಲಾಭಿಮಾನಿಗಳ ಕಣ್ಮಣಿ ಪುನೀತ್ ರಾಜಕುಮಾರ್ ಇಲ್ಲದೆ ಆಚರಿಸುತ್ತಿರುವ ಮೂರನೇ ಹುಟ್ಟುಹಬ್ಬ ಇದಾಗಿದ್ದು ಈ ಸಂದರ್ಭದಲ್ಲಿ ಪುನೀತ್ ರವರ ಸವಿನೆನಪಿಗಾಗಿ ಪೌರ  ಕಾರ್ಮಿಕ ನಾಗರಾಜರವರನ್ನು…

Read More

ಈ ಭಾರಿ – ನಾನೂರಕ್ಕೂ ಮೀರಿ – ನರೇಂದ್ರ ಮೋದಿ | ಶಿವಮೊಗ್ಗದಲ್ಲಿ ಪ್ರಧಾನಿ ಭಾಷಣದಲ್ಲಿ ಏನೆಲ್ಲಾ ಹೇಳಿದ್ರು.. ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್|Modi

ಈ ಭಾರಿ.. ನಾನೂರಕ್ಕೂ ಮೀರಿ – ನರೇಂದ್ರ ಮೋದಿ | ಶಿವಮೊಗ್ಗದಲ್ಲಿ ಪ್ರಧಾನಿ ಭಾಷಣದಲ್ಲಿ ಏನೆಲ್ಲಾ ಹೇಳಿದ್ರು.. ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್ ಶಿವಮೊಗ್ಗ : ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ ನಡೆದ ಬಿಜೆಪಿ ಪಕ್ಷದ ಬೃಹತ್ ಸಮಾವೇಶದಲ್ಲಿ ಕಾರ್ಯಕ್ರಮದಲ್ಲಿ ಮಾತು ಆರಂಭಿಸಿದ ಪ್ರಧಾನಿ ಮೋದಿ ಶಿವಮೊಗ್ಗದ ಜನತೆ ನನ್ನ ನಮಸ್ಕಾರಗಳು, ಮಾತೆ ಸಿಗಂದೂರು ಚೌಡಶ್ವೇರಿ ದೇವಿಗೆ ನನ್ನ ಭಕ್ತಿ ಪೂರ್ವ ನಮಸ್ಕಾರ ಎಂದು ಕನ್ನಡದಲ್ಲಿಯೇ ಹೇಳಿದರು. ನಂತರ ಮಾತನಾಡಿ ಇವತ್ತು ಇಡೀ ಮೈದಾನ ಉತ್ಸಾಹದಿಂದ ಭರ್ತಿಯಾಗಿದೆ. ಇನ್ನೊಂದು ಕಡೆ…

Read More

ರಿಪ್ಪನ್‌ಪೇಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಳೆ (19-03-2024) ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ…

ರಿಪ್ಪನ್‌ಪೇಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಳೆ (19-03-2024) ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ… ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ನಾಳೆ 19/03/23 ರಂದು ಬೆಳಿಗ್ಗೆ 9-00 ರಿಂದ ಸಂಜೆ 6.00 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಶಿವಮೊಗ್ಗದ ಎಂ ಆರ್ ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣ ಕಾರ್ಯವಿರುವ ನಿಮಿತ್ತ  ನಾಳೆ ಬೆಳಿಗ್ಗೆ 9-00 ರಿಂದ ಸಂಜೆ 6-00 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು…

Read More

ಹುಂಚದ ಮುತ್ತಿನಕೆರೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ | ಕೊಲೆಯೋ..!!? ಆತ್ಮಹತ್ಯೆಯೋ..!!???|Crime News

ಹುಂಚದ ಮುತ್ತಿನಕೆರೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ | ಕೊಲೆಯೋ..!!? ಆತ್ಮಹತ್ಯೆಯೋ..!!??? ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದ ಮುತ್ತಿನಕೆರೆಯಲ್ಲಿ ಅಪರಿಚಿತ ಮಹಿಳೆಯ ಶವವೊಂದು ಕೊಳೆತ ಸ್ಥಿತಿಯಲ್ಲಿ ಸೋಮವಾರ ಮಧ್ಯಾಹ್ನ ಪತ್ತೆಯಾಗಿದ್ದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹುಂಚ ಹೊಸನಗರ ಮಾರ್ಗದಲ್ಲಿರುವ ಮುತ್ತಿನಕೆರೆಯಲ್ಲಿ ಸುಮಾರು 40 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಶವ ಕೆರೆಯಲ್ಲಿ ಕಂಡುಬಂದಿದ್ದು , ಮೃತದೇಹವನ್ನು ಹಗ್ಗದಿಂದ ಕಟ್ಟಲಾಗಿದೆ ಎನ್ನಲಾಗುತಿದ್ದು ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಾಗಿದೆ. ವಿಷಯ ತಿಳಿಯುತ್ತಿದ್ದಂತೆ…

Read More

Shivamogga | ಮೋದಿ ಸಮಾವೇಶದಲ್ಲಿ ಕುಮಾರ್‌ ಬಂಗಾರಪ್ಪ ಪ್ರತ್ಯಕ್ಷ , ಕೆ ಎಸ್ ಈಶ್ವರಪ್ಪ ಗೈರು

Shivamogga | ಮೋದಿ ಸಮಾವೇಶದಲ್ಲಿ ಕುಮಾರ್‌ ಬಂಗಾರಪ್ಪ ಪ್ರತ್ಯಕ್ಷ , ಕೆ ಎಸ್ ಈಶ್ವರಪ್ಪ ಗೈರು ಶಿವಮೊಗ್ಗ :  ನಗರದ ಫ್ರೀಡಂ ಪಾರ್ಕಿನಲ್ಲಿ ನರೇಂದ್ರ ಮೋದಿ ಕಾರ್ಯಕ್ರಮ ನಡೆಯುತ್ತಿದ್ದು ಈ ಕಾರ್ಯಕ್ರಮದಲ್ಲಿ ಹಲವು ಬಿಜೆಪಿ ನಾಯಕರು ಉಪಸ್ಥಿತರಿದ್ದು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಬಿಜೆಪಿಯ ಹಿರಿಯ ಮುಖಂಡ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಈ ನಡುವೆ ಬಿಜೆಪಿಯಿಯ ಹಲವು  ಕಾರ್ಯಕ್ರಮಗಳಲ್ಲಿ ದೂರ ಉಳಿದಿದ್ದ ಇನ್ನೇನು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು ಎಂದು ಹಲವು…

Read More

Ripponpete | ಗ್ರಾಮ ಒನ್ ಕೇಂದ್ರದಲ್ಲಿ ಗ್ರಾಹಕರಿಂದ ಹೆಚ್ಚುವರಿ ಹಣ ಸುಲಿಗೆ – ಲೈಸೆನ್ಸ್ ರದ್ದುಗೊಳಿಸುವಂತೆ ಮನವಿ

Ripponpete | ಗ್ರಾಮ ಒನ್ ಕೇಂದ್ರದಲ್ಲಿ ಗ್ರಾಹಕರಿಂದ ಹೆಚ್ಚುವರಿ ಹಣ ಸುಲಿಗೆ – ಲೈಸೆನ್ಸ್ ರದ್ದುಗೊಳಿಸುವಂತೆ ಮನವಿ ರಿಪ್ಪನ್‌ಪೇಟೆ : ಪಟ್ಟಣದ ಬರುವೆ ಗ್ರಾಮ್ ಒನ್ ಕೇಂದ್ರದಲ್ಲಿ ರೈತರು ತಮ್ಮ ಅಗತ್ಯ ದಾಖಲೆಗಾಗಿ ಅರ್ಜಿ ಸಲ್ಲಿಸಲು ಹೋದರೆ ಹೆಚ್ಚುವರಿ ಹಣವನ್ನು ಸುಲಿಗೆ ಮಾಡುತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತಿದ್ದಾರೆ. ಸಾಗರ ರಸ್ತೆಯಲ್ಲಿರುವ ಯಲ್ಲಪ್ಪ ಎಂಬುವವರ ಗ್ರಾಮ ಒನ್ ಕೇಂದ್ರದಲ್ಲಿ ತಮ್ಮ ಅಗತ್ಯ ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಲು ಹೋಗುವ ಗ್ರಾಹಕರುಗಳ ಬಳಿಯಲ್ಲಿ ಬೇಕಾಬಿಟ್ಟಿ ಶುಲ್ಕವನ್ನು ವಸೂಲಿ ಮಾಡುತಿದ್ದು, ಸರ್ಕಾರದ ನಿಯಮದಂತೆ…

Read More

ಕೆ.ಎಸ್. ಈಶ್ವರಪ್ಪ ನಿವಾಸಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ದೌಡು : ನಾಯಕರಿಗೆ ಡೋಂಟ್ ಕೇರ್ ಎಂದ ಈಶ್ವರಪ್ಪ |KSE

 ಕೆ.ಎಸ್. ಈಶ್ವರಪ್ಪ ನಿವಾಸಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ದೌಡು : ನಾಯಕರಿಗೆ ಡೋಂಟ್ ಕೇರ್ ಎಂದ ಈಶ್ವರಪ್ಪ ಶಿವಮೊಗ್ಗದಲ್ಲಿ ಬಿಜೆಪಿ ಪ್ರಹಸನ ಮುಂದಿವರಿದಿದೆ. ಮಗನಿಗೆ ಹಾವೇರಿ ಗದಗ ಟಿಕೆಟ್ ತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಈಶ್ವರಪ್ಪ, ಬಂಡಾಯದ ಬಾವುಟ ಹಾರಿಸಿದ್ದಾರೆ. ಇದೀಗ ಈಶ್ವರಪ್ಪ ಮನವೊಲಿಕೆಗೆ ಬಿಜೆಪಿ ನಾಯಕರು ಮುಂದಾಗಿದ್ದು, ಆದರೆ ಈಶ್ವರಪ್ಪ ಸಂಧಾನಕ್ಕೆ ಬಂದವರನ್ನು ಭೇಟಿಯಾಗದೆ ತನ್ನ ವಿರೋಧ ತೋರಿದ್ದಾರೆ. ರವಿವಾರ ಶಿವಮೊಗ್ಗ ನಗರದ ಗುಂಡಪ್ಪ ಶೆಡ್ ನಲ್ಲಿರುವ ಈಶ್ವರಪ್ಪ ನಿವಾಸಕ್ಕೆ ಕೇಂದ್ರದ ನಾಯಕರು ಭೇಟಿ ನೀಡಿದ್ದಾರೆ. ಚುನಾವಣಾ ಉಸ್ತುವಾರಿ…

Read More
Exit mobile version