Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

ಭಾರಿ ಗಾಳಿ ಮಳೆ – ಹೊಸನಗರ ತಾಲೂಕಿನಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ | Rain

ಭಾರಿ ಗಾಳಿ ಮಳೆ – ಹೊಸನಗರ ತಾಲೂಕಿನಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಭಾರಿ ಗಾಳಿಯೊಂದಿಗೆ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಜು‌.26 ಶುಕ್ರವಾರ ತಾಲೂಕಿನಾದ್ಯಂತ ಎಲ್ಲಾ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿ ತಹಶೀಲ್ದಾರ್‌ ರಶ್ಮಿ ಹಾಲೇಶ್ ಆದೇಶಿಸಿದ್ದಾರೆ. ತಾಲೂಕಿನಾದ್ಯಂತ ಅತಿಯಾದ ಮಳೆ ಹಾಗೂ ಗಾಳಿ ವ್ಯಾಪಕವಾಗಿ ಬೀಸುತ್ತಿರುವುದರಿಂದ ಮಕ್ಕಳ ಹಿತದೃಷ್ಟಿಯಿಂದ ಶುಕ್ರವಾರದಂದು ಎಲ್ಲಾ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ, ಪದವಿ ಕಾಲೇಜು, ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ. ಮಕ್ಕಳ ಬಗ್ಗೆ ಜಾಗ್ರತೆ ವಹಿಸಲು ಪಾಲಕರಲ್ಲಿ ವಿನಂತಿಸಲಾಗಿದೆ…

Read More

ಸೌಮ್ಯ ಕೊಲೆ ಪ್ರಕರಣ | ಕೊಲೆಯಾಗುವ ದಿನ ಪ್ರಿಯಕರನಿಗಾಗಿ ತಂದಿದ್ದಳು ಉಡುಗೊರೆ – ಘಟನೆ ಬಗ್ಗೆ ಎಸ್ ಪಿ ಹೇಳಿದ್ದೇನು..!?Crime news

ಸೌಮ್ಯ ಕೊಲೆ ಪ್ರಕರಣ | ಕೊಲೆಯಾಗುವ ದಿನ ಪ್ರಿಯಕರನಿಗಾಗಿ ತಂದಿದ್ದಳು ಉಡುಗೊರೆ – ಘಟನೆ ಬಗ್ಗೆ ಎಸ್ ಪಿ ಹೇಳಿದ್ದೇನು ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ – ಸೌಮ್ಯ ಸಹೋದರಿ ಸುಮ ಪ್ರಿಯಕರನಿಗಾಗಿ ಪ್ರೀತಿಯಿಂದ ಉಡುಗೊರೆ ತೆಗೆದುಕೊಂಡು ಬಂದಿದ್ದ ಯುವತಿ ಪ್ರಿಯಕರನಿಂದಲೇ ಕ್ರೂರವಾಗಿ ಹತ್ಯೆಯಾಗಿದ್ದಾಳೆ ಹೌದು ಬದುಕಿನ ಬಗ್ಗೆ ಬಣ್ಣಬಣ್ಣದ ಕನಸುಗಳನ್ನು ಕಟ್ಟಿಕೊಂಡಿದ್ದ ಸೌಮ್ಯ ತನ್ನನ್ನು ಕೊಲೆಗೈಯುವ ದಿನವೂ ಆತನಿಗೆ ಬ್ಲೂಟೂತ್ ಹೆಡ್ ಫೋನ್ ನ್ನು ಉಡುಗೊರೆಯಾಗಿ ತಂದಿದ್ದಾಳೆ. ಸೌಮ್ಯಾ ಮತ್ತು ಸೃಜನ್ ಕಳೆದ ಎರಡೂವರೆ ವರ್ಷದಿಂದ…

Read More

Humcha | ಭಾರಿ ಮಳೆಗೆ ಮನೆ ,ಕೊಟ್ಟಿಗೆ ಹಾನಿ – ಸ್ಥಳಕ್ಕೆ ಗ್ರಾಪಂ ಅಧ್ಯಕ್ಷೆ , ಅಧಿಕಾರಿಗಳ ಭೇಟಿ

Humcha | ಭಾರಿ ಮಳೆಗೆ ಮನೆ ,ಕೊಟ್ಟಿಗೆ ಹಾನಿ – ಸ್ಥಳಕ್ಕೆ ಗ್ರಾಪಂ ಅಧ್ಯಕ್ಷೆ , ಅಧಿಕಾರಿಗಳ ಭೇಟಿ  ಹುಂಚ : ಭಾರಿ ಗಾಳಿ ಮಳೆಗೆ ಕಡಸೂರು ಗ್ರಾಮದಲ್ಲಿ ಮನೆ ಹಾಗೂ ಕೊಟ್ಟಿಗೆಗಳು ಹಾನಿಯಾಗಿದ್ದು ಸ್ಥಳಕ್ಕೆ ಗ್ರಾಪಂ ಅಧ್ಯಕ್ಷರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೀಟಿ ನೀಡಿ ಪರಿಶೀಲಿಸಿದರು. ಕಡಸೂರು ಗ್ರಾಮದ ಶಶಿಕಲಾ ಕೋಂ ಮಂಜುನಾಥ್ ರವರ ಮನೆ ಭಾರಿ ಗಾಳಿ ಮಳೆಗೆ ಹಾನಿಯಾಗಿದ್ದು ಸ್ಥಳಕ್ಕೆ ಭೇಟಿ ನೀಡಿ ಗ್ರಾಪಂ ಅಧ್ಯಕ್ಷೆ ಸುಮಂಗಲ ದೇವರಾಜ್ , ಕಂದಾಯ…

Read More

ಬಾಳೂರು ಮಹಿಳಾ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಪ್ರೇಮಾ ಕೃಷ್ಣಮೂರ್ತಿ ಅವಿರೋಧ ಆಯ್ಕೆ | Baluru

ಬಾಳೂರು ಮಹಿಳಾ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಪ್ರೇಮಾ ಕೃಷ್ಣಮೂರ್ತಿ ಅವಿರೋಧ ಆಯ್ಕೆ | Baluru ರಿಪ್ಪನ್‌ಪೇಟೆ : ಇಲ್ಲಿನ ಬಾಳೂರು ಮಹಿಳಾ ಹಾಲು ಒಕ್ಕೂಟದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಪ್ರೇಮಾ ಕೃಷ್ಣಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದಿನಾಂಕ 23-7-2024 ರ ಮಂಗಳವಾರ ನಡೆದ ಬಾಳೂರು ಮಹಿಳಾ ಹಾಲು ಒಕ್ಕೂಟದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪ್ರೇಮಾ ಕೃಷ್ಣಮೂರ್ತಿ ಹಾಗೂ ಉಪಾಧ್ಯಕ್ಷರಾಗಿ ಮಧುರ ಷಣ್ಮುಖ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಾಳೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೃಷ್ಣಮೂರ್ತಿ ಗೌಡ ರವರ ಪತ್ನಿಯಾದ…

Read More

Ripponpete | ಬೈಕ್ ಅಪಘಾತ – ವ್ಯಕ್ತಿ ಗಂಭೀರ : ಮಣಿಪಾಲ್ ಗೆ ರವಾನೆ

ಬೈಕ್ ಅಪಘಾತ – ವ್ಯಕ್ತಿ ಗಂಭೀರ : ಮಣಿಪಾಲ್ ಗೆ ರವಾನೆ ರಿಪ್ಪನ್‌ಪೇಟೆ : ಬಾಳೂರು ಗ್ರಾಪಂ ವ್ಯಾಪ್ತಿಯ ಪೂಜಾರದಿಂಬ ಬಳಿ ನಡೆದ ಬೈಕ್ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಇಂದು ಸಂಜೆ ನಡೆದಿದೆ. ಪುರಪ್ಪೆಮನೆ ಸಮೀಪದ ನಂದಿಗೆ ಗ್ರಾಮದ ಮೃತ್ಯುಂಜಯ ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಬಾಳೂರು ಗ್ರಾಪಂ ವ್ಯಾಪ್ತಿಯ ಪೂಜಾರದಿಂಬ ಬಳಿಯಲ್ಲಿ ಬಜಾಜ್ ಪ್ಲಾಟಿನಾ ಬೈಕ್ ಸ್ಕಿಡ್ ಆಗಿ ಕೆಳಕ್ಕೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು. ಸ್ಥಳೀಯರು 108 ಆಂಬುಲೆನ್ಸ್ ನಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪ್ರಾಥಮಿಕ…

Read More

ಸೌಮ್ಯ ಕೊಲೆ ಪ್ರಕರಣ – ಮೃತದೇಹವನ್ನು ಹೊರತೆಗೆದ ಪೊಲೀಸರು | ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ Crime News

ಸೌಮ್ಯ ಕೊಲೆ ಪ್ರಕರಣ – ಮೃತದೇಹವನ್ನು ಹೊರತೆಗೆದ ಪೊಲೀಸರು | ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗುತ್ತೇನೆ ಎಂದು ನಂಬಿಸಿ , ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಪ್ರಿಯಕರನೇ ಕೊಲೆಗೈದ ಪ್ರಕರಣದಲ್ಲಿ ಯುವತಿಯ ಮೃತದೇಹವನ್ನು ಹೊರತೆಗೆಯಲಾಗಿದೆ. ಸೌಮ್ಯಾ ಮತ್ತು ಸೃಜನ್ ಕಳೆದ ಎರಡೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಮಧ್ಯೆ ತನ್ನನ್ನು ಮದುವೆಯಾಗುವಂತೆ ಸೌಮ್ಯಾ ಒತ್ತಾಯಿಸುತ್ತಿದ್ದಳು. ಇದರಿಂದ ಬೇಸತ್ತ ಸೃಜನ್ ಯುವತಿಯನ್ನು ಹೆದ್ದಾರಿಪುರ ಬಳಿಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ…

Read More

ಅಡಿಕೆ ಕಳ್ಳತನ ಮಾಡುತಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು | ಮಾಲು ಸಹಿತ ವಾಹನ ವಶಕ್ಕೆ | Crime news

ಅಡಿಕೆ ಕಳ್ಳತನ ಮಾಡುತಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು | ಮಾಲು ಸಹಿತ ವಾಹನ ವಶಕ್ಕೆ | Crime news ಮಲೆನಾಡು ಭಾಗದಲ್ಲಿ ಅಡಿಕೆ ಕಳ್ಳತನವೆಸಗುತಿದ್ದ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ತೀರ್ಥಹಳ್ಳಿ ತಾಲ್ಲೂಕಿನ ಕಲ್ಕೊಪ್ಪ ಕರಕುಚ್ಚಿ ಗ್ರಾಮದ ದೇವಾದಾಸ್ ಎಂಬುವರ ಮನೆಯಲ್ಲಿ 4 ಕ್ವಿಂಟಾಲ್ ಚಾಲಿ ಅಡಿಕೆ ಕಳ್ಳತನವಾಗಿದ್ದು ಅಡಿಕೆ ಕಳ್ಳತನ ಮಾಡಿದ್ದ ನಾಲ್ವರನ್ನು ವಾಹನ ಹಾಗೂ ಮಾಲು ಸಮೇತ ಮಾಳೂರು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಮಾಳೂರು ವ್ಯಾಪ್ತಿಯಲ್ಲಿ…

Read More

ಭಾರಿ ಗಾಳಿ ಮಳೆಗೆ ಕಾರಿನ ಮೇಲೆ ಬಿದ್ದ ಮರ | Thirthahalli

ಭಾರಿ ಗಾಳಿ ಮಳೆಗೆ ಕಾರಿನ ಮೇಲೆ ಬಿದ್ದ ಮರ  ಶಿವಮೊಗ್ಗ(Shivamogga) ಜಿಲ್ಲೆಯ ತೀರ್ಥಹಳ್ಳಿ(Thirthahalli) ತಾಲೂಕಿನಾದ್ಯಂತ ಪುಷ್ಯ ಮಳೆಯ ಆರ್ಭಟ ಹೆಚ್ಚಾಗಿದ್ದು ಗಾಳಿ ಮಳೆಯಿಂದ ಗೋಳಿ ಮರವೊಂದು ಉರುಳಿ ಬಿದ್ದು ಪಕ್ಕದಲ್ಲಿ ಇದ್ದ ಕಾರು(car) ಜಖಂಗೊಂಡ ಘಟನೆ ನಡೆದಿದೆ. ಪಟ್ಟಣದ ಮುಖ್ಯ ಬಸ್ ನಿಲ್ದಾಣ ಸಮೀಪ ಇರುವ ಕಾಂಗ್ರೆಸ್ ಕಚೇರಿ ಪಕ್ಕದಲ್ಲಿ ಇರುವಂತಹ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಪಕ್ಕದಲ್ಲಿ ಇದ್ದಂತಹ ಭಾರಿ ಹಳೆಯ ಗೋಳಿ ಮರವೊಂದು ಉರುಳಿ ಬಿದ್ದಿದ್ದು ನಿಲ್ಲಿಸಿದ್ದ ಮಾರುತಿ ಸ್ವಿಫ್ಟ್ ಕಾರಿನ ಮೇಲೆ ಬಿದ್ದ…

Read More

ಶಾಲಾ ಮಕ್ಕಳಿಗೆ ಉಚಿತವಾಗಿ ಬ್ಯಾಗ್ ವಿತರಿಸಿದ ಆರ್ ಶಂಕರ್ | shiggav

ಶಾಲಾ ಮಕ್ಕಳಿಗೆ ಉಚಿತವಾಗಿ ಬ್ಯಾಗ್ ವಿತರಿಸಿದ ಆರ್ ಶಂಕರ್ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್ ಗಳನ್ನು ಮಾಜಿ ಸಚಿವ ಆರ್ ಶಂಕರ್ ವಿತರಿಸಿದರು. ಶಿಗ್ಗಾವಿ ಸವಣೂರ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾದ ಆರ್ ಶಂಕರ್ ಬಡ ಮಕ್ಕಳಿಗೆ ಸತತವಾಗಿ ಕ್ಷೇತ್ರದಲ್ಲಿ ಅನೇಕ ಸ್ಕೂಲ್ ಗಳಿಗೆ ಬ್ಯಾಗ್ ಗಳನ್ನು ಕೊಡುತ್ತಿರುವ ಶಿಕ್ಷಣ ಪ್ರೇಮಿಯಾಗಿದ್ದು, ಉಚಿತ ಸ್ಕೂಲ್ ಬ್ಯಾಗ್ ಹಾಗೂ ಆಯ್ದ ವಿದ್ಯಾರ್ಥಿಗಳಿಗೆ ಪಾಠೋಪಕರಣ…

Read More

ಎರಡೂವರೆ ವರ್ಷದ ಪ್ರೀತಿ – ಮದುವೆಯಾಗೋಣ ಬಾ ಎಂದಳು ಪ್ರಿಯತಮೆ | ಸುಂದರಿಯ ಕಥೆಯನ್ನೆ ಮುಗಿಸಿ ಹೂತಿಟ್ಟ ಪ್ರಿಯಕರ | Crime Story

ಎರಡೂವರೆ ವರ್ಷದ ಪ್ರೀತಿ – ಮದುವೆಯಾಗೋಣ ಬಾ ಎಂದಳು ಪ್ರಿಯತಮೆ | ಸುಂದರಿಯ ಕಥೆಯನ್ನೆ ಮುಗಿಸಿ ಹೂತಿಟ್ಟ ಪ್ರಿಯಕರ ಹೆದ್ದಾರಿಪುರದಲ್ಲಿ ನಡೆದ ಸೌಮ್ಯ ಮರ್ಡರ್ ಕಹಾನಿ ಜೀವನದಲ್ಲಿ ತಾವು ಪ್ರೀತಿಸಿದವರ ಜೊತೆ ಸುಂದರವಾಗಿ ಬದುಕಿ ಬಾಳಿ ತಮ್ಮ ಪ್ರೀತಿಯನ್ನು ವಿರೋಧಿಸಿದವರ ಮುಂದೆ ಸುಂದರವಾಗಿ ಬದುಕಿ ತೋರಿಸಬೇಕೆಂಬ ಬಣ್ಣಬಣ್ಣದ ಕನಸುಗಳನ್ನು ಕಟ್ಟಿಕೊಂಡಿದ್ದ ಅಮಾಯಕ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗುತ್ತೇನೆ ಎಂದು ನಂಬಿಸಿ , ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಪ್ರಿಯಕರನೇ ಕೊಲೆಗೈದ ಆಘಾತಕಾರಿ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರದ ತಾಲೂಕಿನ…

Read More
Exit mobile version