Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

ಗುತ್ತಿಗೆದಾರನ ಬಳಿ ಕಮಿಷನ್ ಪಡೆಯುತಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ

ಗುತ್ತಿಗೆದಾರನ ಬಳಿ ಕಮಿಷನ್ ಪಡೆಯುತಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ ಶಿವಮೊಗ್ಗ ಮಹಾನಗರ ಪಾಲಿಕೆಯ ಲೆಕ್ಕ ವಿಭಾಗದ ವ್ಯವಸ್ಥಾಪಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಗುತ್ತಿಗೆದಾರನ ಬಳಿ ಲಂಚ ಪಡೆಯುವ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ. ಭದ್ರಾವತಿ ಮೂಲದ ಗುತ್ತಿಗೆದಾರ ಸುನೀಲ್ ಎಂಬುವರು 3 ಲಕ್ಷದ ಕೆಲಸ ಮಾಡಿ ಮುಗಿಸಿದ್ದು ಬಿಲ್ ಮಾಡಿಸಿಕೊಳ್ಳಲು ಅಕೌಂಟ್ ವಿಭಾಗದ ಸಿದ್ದೇಶ್ 12 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದನು. ಇಂದು ಕಚೇರಿಯಲ್ಲಿಯೇ 10 ಸಾವಿರ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ತಂಡ ದಾಳಿ…

Read More

ಅಬಾಕಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಿಪ್ಪನ್‌ಪೇಟೆ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ

ಅಬಾಕಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಿಪ್ಪನ್‌ಪೇಟೆ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ ರಿಪ್ಪನ್‌ಪೇಟೆ : ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪಟ್ಟಣದ “ಐಡಿಯಲ್ ಪ್ಲೇ ಅಬಾಕಸ್ ” ಶಾಖೆಯ 17 ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಅನೇಕ ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 12- 01-2025 ರಂದು ಬೆಂಗಳೂರಿನ ವೈಟ್ ಫೆದರ್ ಹಾಲ್ ನಲ್ಲಿ ನಡೆದ ರಾಷ್ಟ್ರಮಟ್ಟದ ಅಬಾಕಸ್ ಕಾಂಪಿಟೇಶನ್ ನಲ್ಲಿ 15 ರಾಜ್ಯಗಳಿಂದ ಸುಮಾರು 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ರಿಪ್ಪನ್ ಪೇಟೆಯ…

Read More

ಅಡಿಕೆ ಕಳ್ಳತನವೆಸಗಿದ್ದ ಇಬ್ಬರ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು

ಅಡಿಕೆ ಕಳ್ಳತನವೆಸಗಿದ್ದ ಇಬ್ಬರ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು ಶಿವಮೊಗ್ಗ – ಮನೆಯಲ್ಲಿಟ್ಟಿದ್ದ ಅಡಿಕೆ ತುಂಬಿದ ಚೀಲಗಳನ್ನು ಕಳ್ಲತನ ಮಡಿಕೊಂಡು ಹೋಗಲಾಗಿದೆ ಎಂಬ ದೂರಿನನ್ವಯ ಕಾರ್ಯತತ್ಪರರಾದ ಹೊಳೆಹೊನ್ನೂರು ಪೊಲೀಸರು  ಮೂವರನ್ನು ಬಂಧಿಸಿ ಒಟ್ಟು ೬,೯೩,೦೦೦/- ರೂಗಳ ಮಾಲನ್ನು ಅಮಾನತುಪಡಿಸಿಕೊಂಡಿದ್ದಾರೆ. ಡಿ. ೧೯ರಂದು ಈ ಕಳ್ಳತನ ಸಂಭವಿಸಿದೆ ಎಂದು ಶ್ರೀನಿವಾಸಪುರದ ವಾಸಿ ರಮೇಶ್ ಎನ್ನುವವರು ದೂರು ನೀಡಿದ್ದರು. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ   ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.ತನಿಖಾ ತಂಡವು ಜ. ೧೧ರಂದು ಆರೋಪಿತರಾದ ಭದ್ರಾವತಿಯ ಖಾಜಿ ಮೊಹಲ್ಲಾದ, ಪಾಲಿಶ್…

Read More

ಅಡಿಕೆ ಬೆಳೆಗಾರರ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ: ಹರತಾಳು ಹಾಲಪ್ಪ

ಅಡಿಕೆ ಬೆಳೆಗಾರರ ಸಮಸ್ಯೆಗೆ ಪರಿಹಾರಕಲ್ಪಿಸುವಂತೆ  ಕೇಂದ್ರ ಸರ್ಕಾರಕ್ಕೆ ಮನವಿ: ಹರತಾಳು ಹಾಲಪ್ಪ ಜನವರಿ 18ರಂದು ಸಾಗರದಲ್ಲಿ ಅಡಿಕೆ ಬೆಳೆಗಾರರ ಬೃಹತ್  ಸಮಾವೇಶ. ರಿಪ್ಪನ್‌ಪೇಟೆ;- ಜನವರಿ 18ರಂದು ಸಾಗರ ಸಂತೆ ಮೈದಾನದಲ್ಲಿಏರ್ಪಡಿಸಲಾಗಿದ್ದು ಆಡಿಕೆ ಬೆಳೆಗಾರರ ಸಮಾವೇಶಕ್ಕೆ ಸಾಗರ-ಹೊಸನಗರತಾಲ್ಲೂಕಿನಅಡಿಕೆ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಡಿಕೆ ಬೆಳೆಗಾರ ಸಮಸ್ಯೆ ಪರಿಹಾರಕ್ಕೆ ಬೆಂಬಲಿಸುವಂತೆ ಮಾಜಿ ಮಂತ್ರಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ತಿಳಿಸಿದರು. ಪಟ್ಟಣದ ರಾಮಮಂದಿರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಲೆನಾಡಿನ ವ್ಯಾಪ್ತಿಯಲ್ಲಿ ಹವಾಮಾನ ವೈಪರಿತ್ಯದಿಂದಾಗಿಆಡಿಕೆ ಬೆಳೆಯಲ್ಲಿ…

Read More

ಎಣ್ಣೆ ಪಾರ್ಟಿ ಮಾಡುವಾಗ ಸ್ನೇಹಿತರ ನಡುವೆ ಕಿರಿಕ್ : ಚಾಕು ಇರಿತಕೊಳಗಾದ ಓರ್ವ ಆಸ್ಪತ್ರೆಗೆ ದಾಖಲು

ಎಣ್ಣೆ ಪಾರ್ಟಿ ಮಾಡುವಾಗ ಸ್ನೇಹಿತರ ನಡುವೆ ಕಿರಿಕ್ : ಚಾಕು ಇರಿತಕೊಳಗಾದ ಓರ್ವ ಆಸ್ಪತ್ರೆಗೆ ದಾಖಲು ಶಿವಮೊಗ್ಗ: ಮದ್ಯ ಸೇವನೆ ವೇಳೆ ಪ್ರಸ್ತಾಪವಾದ ವಿಷಯದಲ್ಲಿ ವ್ಯಕ್ತಿಯೋರ್ವನಿಗೆ ಚಾಕುವಿನಿಂದ  ಇರಿದು ಗಾಯಗೊಳಿಸಿರುವ ಘಟನೆ ನಗರದಲ್ಲಿ ಸಂಭವಿಸಿದೆ. ಜ.೧೩ ರಂದು ಈ ಬಗ್ಗೆ  ಕಿರಣ್ ಎಂಬುವರು ವಿನೋಬನಗರ ಪೊಲೀಸ್  ಠಾಣೆಯಲ್ಲಿ   ಆನಂದ್, ನಿತಿನ್, ಮೋಹನ್, ಮಾಲತೇಶ,, ರಾಕೇಶ್ ಅಡ್ಡು ಎಂಬುವರ ವಿರುದ್ಧ ದೂರು ದಾಖಲಿಸಿದ್ದಾರೆ. ಕಿರಣ್ ಎಂಬುವರ ಸ್ನೇಹಿತನಾದ ಸದಾನಂದ ಇವರಿಗೆ ಆನಂದ ಬಿನ್ ಜಯರಾಮ, ನಿತಿನ್ ಬಿನ್ ನಾಗರಾಜ,…

Read More

ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 56 ಕೆಜಿ ಗಾಂಜಾ ನಾಶಪಡಿಸಿದ ಪೊಲೀಸ್ ಇಲಾಖೆ

ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 56 ಕೆಜಿ ಗಾಂಜಾ ನಾಶಪಡಿಸಿದ ಪೊಲೀಸ್ ಇಲಾಖೆ ಶಿವಮೊಗ್ಗ :   ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ದಾಖಲಾದ ಒಟ್ಟು ೪೩ ಪ್ರಕರಣಗಳಲ್ಲಿ ಅಮಾನತುಪಡಿಸಿಕೊಳ್ಳಲಾದ ಅಂದಾಜು ಮೌಲ್ಯ ೨೧,೮೪,೬೬೦ ರೂಗಳ ಒಟ್ಟು ೫೬ ಕೆಜಿ ೭೪೦  ಗ್ರಾಂ ತೂಕದ ಗಾಂಜಾವನ್ನು ಗುರುವಾರ ನಾಶಪಡಿಸಲಾಯಿತು. ಮಾಚೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಮೆ|| ಶುಶ್ರುತ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್‌ಮೆಂಟ್ ಸೊಸೈಟಿ ಇಲ್ಲಿ ಶಿವಮೊಗ್ಗ ಜಿಲ್ಲಾ ಮಾದಕ ವಸ್ತು ವಿಲೇವಾರಿ ಸಮಿತಿಯ ಅಧ್ಯಕ್ಷ ಮಿಥುನ್‌ಕುಮಾರ್ ಸಮ್ಮುಖದಲ್ಲಿ…

Read More

ಸ್ತ್ರೀ ಪೀಡಕರಿದ್ದರೆ 112ಕ್ಕೆ ಕರೆ ಮಾಡಿ – ಪಿಎಸ್ ಐ ಸ್ವಪ್ನಾ

ಸ್ತ್ರೀ ಪೀಡಕರಿದ್ದರೆ 112ಕ್ಕೆ ಕರೆ ಮಾಡಿ – ಪಿಎಸ್ ಐ ಸ್ವಪ್ನಾ ಶಿವಮೊಗ್ಗ : ಜ. 16: ‘ಸಾರ್ವಜನಿಕ ಸ್ಥಳದಲ್ಲಿ ಯಾರಾದರೂ ನಿಮಗೆ ಸಮಸ್ಯೆ, ಉಪಟಳ, ಕಿರಿಕಿರಿ ಉಂಟು ಮಾಡಿದರೆ ಕೂಡಲೇ 112 ಸಂಖ್ಯೆಯ ಸಹಾಯವಾಣಿ ಅಥವಾ ಚೆನ್ನಮ್ಮ ಪಡೆಗೆ ಕರೆ ಮಾಡಿ ಮಾಹಿತಿ ನೀಡಿ. ತೊಂದರೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಮಹಿಳೆಯರ ರಕ್ಷಣೆಗೆಂದೆ ಜಿಲ್ಲಾ ಪೊಲೀಸ್ ಇಲಾಖೆ ಅಸ್ತಿತ್ವಕ್ಕೆ ತಂದಿರುವ ‘ಚನ್ನಮ್ಮ ಪಡೆ’ಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಗ್ರಾಮಾಂತರ ಠಾಣೆ ಸಬ್ ಇನ್ಸ್’ಪೆಕ್ಟರ್…

Read More

ಅಯ್ಯಪ್ಪಸ್ವಾಮಿ ಜಾತ್ರೆಯಲ್ಲಿ ಭಕ್ತರ ಮೇಲೆ ಹರಿದ ಕಾರು – ಓರ್ವ ಯುವತಿ ಸಾವು 08 ಜನರಿಗೆ  ಗಂಭೀರ ಗಾಯ

ಅಯ್ಯಪ್ಪಸ್ವಾಮಿ ಜಾತ್ರೆಯಲ್ಲಿ ಭಕ್ತರ ಮೇಲೆ ಹರಿದ ಕಾರು – ಓರ್ವ ಯುವತಿ ಸಾವು 08 ಜನರಿಗೆ  ಗಂಭೀರ ಗಾಯ ಸಿದ್ದಾಪುರ:  ಅಯ್ಯಪ್ಪ ಸ್ವಾಮಿ ಜಾತ್ರಾ ಮಹೋತ್ಸವ ದಲ್ಲಿ  ಭಕ್ತರ ಮೇಲೆ  ಕಾರು ಹರಿದ ಪರಿಣಾಮ   ಓರ್ವ ಯುವತಿ ಸಾವಿಗೀಡಾಗಿ  08 ಭಕ್ತರಿಗೆ ದಲ್ಲಿ ಗಂಭೀರ ಗಾಯ ಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆ  ಸಿದ್ದಾ ಪುರದಲ್ಲಿ ನಿನ್ನೆ ಸಂಭವಿಸಿದೆ. ಕಾರು ಚಾಲಕ ರೋಶನ್ ಫರ್ನಾಂಡಿಸ್ ನನ್ನು ಪೊಲೀಸರು ಬಂಧಿಸಿದ್ದಾರೆ.ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿಕೊಂಡು ಬಂದು ಈತ ಜಾತ್ರೆಗೆ ನುಗ್ಗಿಸಿದ್ದಾನೆ….

Read More

ವಿಳಾಸ ಹೇಳಿದ ವ್ಯಾಪಾರಿಗೆ ನಾಲ್ವರಿಂದ ಹಲ್ಲೆ, ಇರಿತ

ವಿಳಾಸ ಹೇಳಿದ ವ್ಯಾಪಾರಿಗೆ ನಾಲ್ವರಿಂದ ಹಲ್ಲೆ, ಇರಿತ ಶಿವಮೊಗ್ಗ : ನಗರದಲ್ಲಿ ನಿನ್ನೆ ವ್ಯಾಪಾರಿಯೊಬ್ಬನ ಮೇಲೆ ಹಲ್ಲೆ ಮಾಡಿ, ಆತನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ. ನಗರದ ಕಸ್ತೂರಿ ಬಾ ರಸ್ತೆಯಲ್ಲಿ ನಡೆದಿದೆ, ವ್ಯಾಪಾರ ಕೇಂದ್ರವಾಗಿರುವ ಮುರುಡೇಶ್ವರ ದೇವಾಲಯದ ಬಳಿ,  ರಾತ್ರಿ ಎಂಟು ಗಂಟೆ ಸುಮಾರಿಗೆ ನಾಲ್ವರು ಇಲ್ಲಿನ ಅಂಗಡಿಯೊಂದರ ಬಳಿ ಬಂದು ವಿಳಾಸ ಕೇಳಿದ್ದಾರೆ. ಅಂಗಡಿಯ ಮಾಲೀಕ ಕೇಳಿದ ವಿಳಾಸ ಎಲ್ಲಿದೆ ಎಂದು ತೋರಿಸಿದ್ದಾನೆ. ಅಲ್ಲಿಗೆ ತೆರಳಿದ ನಾಲ್ವರು ಅಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ಹೊರಕ್ಕೆ…

Read More

ಹೆದ್ದಾರಿಯಲ್ಲಿ ಜೀಪ್ ಪಲ್ಟಿ – ಮೂವರು ಸಾವು , ನಾಲ್ವರ ಸ್ಥಿತಿ ಗಂಭೀರ

ಹೆದ್ದಾರಿಯಲ್ಲಿ ಜೀಪ್ ಪಲ್ಟಿ – ಮೂವರು ಸಾವು , ನಾಲ್ವರ ಸ್ಥಿತಿ ಗಂಭೀರ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನೆಗವಾಡಿ ಗ್ರಾಮ ಸಮೀಪದ ಹಿರೇಮಾಗಡಿ ಕ್ರಾಸ್‌ನ ರಾಜ್ಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಜೀಪ್ ವಿದ್ಯುತ್ ಕಂಬಗಳಿಗೆ ಡಿಕ್ಕಿಯಾದ ಪರಿಣಾಮ ಮೂವರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಘಟನೆ ನಡೆದಿದೆ. ಕಣಸೋಗಿಯಿಂದ ಎಸ್.ಎನ್. ಕೊಪ್ಪ ಕಡೆಗೆ ಹೋಗುತ್ತಿದ್ದ ಜೀಪ್‌ನಲ್ಲಿ ಕಬ್ಬೂರು, ಕೊಪ್ಪ, ಕಣಸೋಗಿ ಗ್ರಾಮದ 8 ಜನ ಪ್ರಯಾಣಿಸುತ್ತಿದ್ದರು. ಹೆದ್ದಾರಿ ಅಂಚಿನಲ್ಲಿದ್ದ ಸಿಮೆಂಟ್ ಕಂಬಗಳಿಗೆ ಜೀಪ್‌…

Read More
Exit mobile version