Headlines

HOSANAGARA | ಟ್ರ್ಯಾಕ್ಟರ್ – ಕಾರು ನಡುವೆ ಡಿಕ್ಕಿ – ಮೂವರಿಗೆ ಗಾಯ , ಮೆಗ್ಗಾನ್ ಗೆ ದಾಖಲು

HOSANAGARA | ಟ್ರ್ಯಾಕ್ಟರ್ – ಕಾರು ನಡುವೆ ಡಿಕ್ಕಿ – ಮೂವರಿಗೆ ಗಾಯ , ಮೆಗ್ಗಾನ್ ಗೆ ದಾಖಲು

Three people were injured in a head-on collision between a tractor and a car near Marakutika Cross on Kollur National Highway in Hosanagara. The injured have been admitted to Shivamogga Meggan Hospital.

ಹೊಸನಗರ, ಜೂನ್ 12: ತಾಲೂಕಿನ ಮೂಲಕ ಹಾದುಹೋಗಿರುವ ಕೊಲ್ಲೂರು ರಾಷ್ಟ್ರೀಯ ಹೆದ್ದಾರಿಯ ಮರಕುಟಿಕ ಕ್ರಾಸ್ ಸಮೀಪ ಟ್ರಾಕ್ಟರ್ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಗಾಯಗೊಂಡ ಘಟನೆ ನಡೆದಿದೆ.

ಸಾಗರದ ಜೆ.ಪಿ. ನಗರ ನಿವಾಸಿ ಅರುಣ್ ಕುಮಾರ್ ಅವರು ತಮ್ಮ ಕುಟುಂಬ ಸದಸ್ಯರಾದ ತಾತ ಆನಂದ್ (80), ತಾಯಿ ನಾಗರತ್ನ (51) ಹಾಗೂ ಅಜ್ಜಿ ರುಕ್ಮಿಣಿ (65) ಅವರೊಂದಿಗೆ ಬೆನ್ನಟ್ಟೆ ದೇವಸ್ಥಾನಕ್ಕೆ ಭೇಟಿ ನೀಡಿ ಕಾರಿನಲ್ಲಿ ವಾಪಸ್ಸಾಗುತ್ತಿದ್ದರು. ಈ ವೇಳೆ ನಿಟ್ಟೂರು ಕಡೆಯಿಂದ ವೇಗವಾಗಿ ಬಂದ ಟ್ರಾಕ್ಟರ್ ಕಾರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆಗೆ ಟ್ರಾಕ್ಟರ್‌ನ ಒಂದು ಚಕ್ರ ಕಾರಿನ ಮುಂಭಾಗದ ಮೇಲೆ ಹತ್ತಿದ್ದು, ಬಳಿಕ ಟ್ರಾಕ್ಟರ್ ರಸ್ತೆ ಬದಿಗೆ ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ನಾಗರತ್ನ, ಆನಂದ್ ಹಾಗೂ ರುಕ್ಮಿಣಿ ಗಾಯಗೊಂಡಿದ್ದಾರೆ.

ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲನೆ ಮಾಡುತ್ತಿದ್ದ ಅರುಣ್ ಕುಮಾರ್ ಅವರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಟ್ರಾಕ್ಟರ್ ಚಾಲಕ ಆರೀಫ್ ವಿರುದ್ಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

About The Author

Exit mobile version