ರಿಪ್ಪನ್ಪೇಟೆಯಲ್ಲಿ ಜೂನ್ 14 ರಂದು ‘ಮಲೆನಾಡಿನ ಭಾಗ್ಯಧಾರೆ ಮುಂಗಾರು’ ಕವಿಗೋಷ್ಠಿ
Ripponpet to host ‘Malenadina Bhagyadhare Mungaru’ poetry recital and poem collection program on June 14. Event includes senior and junior categories, prizes, and book publication plans.
ರಿಪ್ಪನ್ಪೇಟೆ: ಕಲಾ ಕೌಸ್ತುಭ ಕನ್ನಡ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಹಾಗೂ ನಾಥ್ ಬಳಗ ರಿಪ್ಪನ್ಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 14ರಂದು ‘ಮಲೆನಾಡಿನ ಭಾಗ್ಯಧಾರೆ ಮುಂಗಾರು’ ಶೀರ್ಷಿಕೆಯಡಿ ವಿಶೇಷ ಕವಿಗೋಷ್ಠಿ ಹಾಗೂ ಕವನ ಸಂಗ್ರಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಾಲೂಕ್ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ತ ಮ ನರಸಿಂಹ ಹಾಗೂ ನಾಥ್ ಬಳಗದ ರಾ. ಸೋಮಶೇಖರ್ ಜಂಟಿ ಪತ್ರೀಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಪಟ್ಟಣದ ಕುವೆಂಪು ಸಭಾಂಗಣದಲ್ಲಿ ಪತ್ರೀಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ಕಸಾಪ ಹೋಬಳಿ ಘಟಕ , ಕಲಾ ಕೌಸ್ತುಭ ಕನ್ನಡ ಸಂಘ , ನಾಥ್ ಬಳಗ ಸಾಗರ ರಸ್ತೆಯ ಬಿ.ಎಸ್.ಎನ್.ಎಲ್ ಕಚೇರಿ ಸಮೀಪದ ಶ್ರೀ ರಾಮ ಮಂದಿರದಲ್ಲಿ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಸಾಹಿತಿಗಳ ಸಮ್ಮುಖದಲ್ಲಿ ಕವನ ವಾಚನಕ್ಕೆ ವೇದಿಕೆ ಸಿದ್ಧವಾಗಿದೆ.ಕಾರ್ಯಕ್ರಮದಲ್ಲಿ ಹಿರಿಯರು ಮತ್ತು ಕಿರಿಯರು ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಉತ್ತಮ ಕವಿತೆಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ. ಭಾಗವಹಿಸುವ ಎಲ್ಲಾ ಯುವ ಕವಿಗಳು ಹಾಗೂ ಕವಯತ್ರಿಯರಿಗೂ ಸಮಾಧಾನಕರ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ವಾಚಿಸಲ್ಪಡುವ ಆಯ್ದ ಕವಿತೆಗಳನ್ನು ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸುವ ಯೋಜನೆಯೂ ರೂಪಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಕವಿತೆಗಳು ‘ಮುಂಗಾರು’ ವಿಷಯಾಧಾರಿತವಾಗಿರಬೇಕು. ಕವಿತೆಗಳು ಸ್ವರಚಿತವಾಗಿದ್ದು, 20 ಸಾಲುಗಳನ್ನು ಮೀರಿರಬಾರದು. ಪ್ರತಿಯೊಬ್ಬರಿಗೂ ಒಂದೇ ಕವಿತೆ ವಾಚಿಸಲು ಅವಕಾಶ ನೀಡಲಾಗಿದೆ.ಭಾಗವಹಿಸುವವರು ತಮ್ಮ ಕವನದ ಎರಡು ಪ್ರತಿಗಳೊಂದಿಗೆ ಸಂಪೂರ್ಣ ವಿಳಾಸ ನಮೂದಿಸಿ, ಸ್ವರಚಿತ ಕವನವನ್ನು ಜೂನ್ 10, 2026ರೊಳಗೆ ಸಂಘಟಕರಿಗೆ ತಲುಪಿಸಬೇಕು ತಿಳಿಸಿದರು.
ಈ ಘೋಷ್ಟಿಯಲ್ಲಿ ಹೊರಾಟಗಾರರಾದ ಟಿ ಆರ್ ಕೃಷ್ಣಪ್ಪ , ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷರಾದ ಮುರುಳಿ ಕೆರೆಹಳ್ಳಿ , ನಾಥ್ ಬಳಗದ ಸಾಯಿನಾಥ್ ಭಂಡಾರಿ , ಸುರೇಶ್ ಸಿಂಗ್ , ಕುಕ್ಕಳಲೆ ಈಶ್ವರಪ್ಪ ಗೌಡ , ಕೆ ಅಬ್ಬಾಸ್ ಇದ್ದರು.
ಸಂಪರ್ಕಿಸಿ :
ನಾಗಭೂಷಣ ಅಧ್ಯಕ್ಷರು, ಕ.ಸಾ.ಪ 7483021975
ರಾ. ಸೋಮಶೇಖರ ಮಾಜಿ ಅಧ್ಯಕ್ಷರು, ಕ.ಸಾ.ಪ 9448726910
ಚೋಳರಾಜ್ ಸದಸ್ಯರು, ಕ.ಸಾ.ಪ 9449328741
ಸತೀಶ್ ಹೆಗಡೆ ಸದಸ್ಯರು, ಕ.ಸಾ.ಪ 9900991274
ರಾಮಚಂದ್ರ ಕಲಾಕೌಸ್ತುಭ ಕನ್ನಡ ಸಂಘ 9886442359
ಪ್ರೇಮನಾಥ ನಾಥ್ ಬಳಗ 9945084407




