Headlines

ಮಹಿಳೆ ನಾಪತ್ತೆ ; ಮಾಹಿತಿ ನೀಡಲು ಪೊಲೀಸರ ಮನವಿ

ಮಹಿಳೆ ನಾಪತ್ತೆ ; ಮಾಹಿತಿ ನೀಡಲು ಪೊಲೀಸರ ಮನವಿ

Shiralakoppa police have appealed for information regarding a missing woman from Kanasogi village in Shivamogga district who has been missing since January 2026.

ಶಿವಮೊಗ್ಗ : ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕಣಸೋಗಿ ಗ್ರಾಮದ ನಿವಾಸಿ ಬಲವೀಂದ್ರಪ್ಪ ಅವರ ಪತ್ನಿ ದೀಪಾ (30) ಅವರು ಜನವರಿ 2026ರಿಂದ ಕಾಣೆಯಾಗಿದ್ದು, ಈವರೆಗೂ ಮನೆಗೆ ವಾಪಸ್ಸಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಣೆಯಾದ ಮಹಿಳೆ ಸುಮಾರು 5 ಅಡಿ ಎತ್ತರ, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ ಹಾಗೂ ಕೋಲುಮುಖ ಹೊಂದಿದ್ದಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ತೆರಳುವ ವೇಳೆ ಹಸಿರು ಬಣ್ಣದ ಸೀರೆ ಧರಿಸಿದ್ದರು ಎಂದು ತಿಳಿಸಲಾಗಿದೆ.

ಈ ಮಹಿಳೆಯ ಕುರಿತು ಯಾವುದೇ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ಸಾರ್ವಜನಿಕರು ಶಿರಾಳಕೊಪ್ಪ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 8722983310 / 9480803367 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ಮನವಿ ಮಾಡಿದೆ.

About The Author

Exit mobile version