Headlines

ಮೇರಿಮಾತಾ ಪ್ರೌಢಶಾಲೆಗೆ ಶೇ.95 ಫಲಿತಾಂಶ – ಸಿರಿ ಎನ್ 96% ಅಂಕಗಳೊಂದಿಗೆ ಪ್ರಥಮ

ಮೇರಿಮಾತಾ ಪ್ರೌಢಶಾಲೆಗೆ ಶೇ.95 ಫಲಿತಾಂಶ – ಸಿರಿ ಎನ್ 96% ಅಂಕಗಳೊಂದಿಗೆ ಪ್ರಥಮ

Marymatha High School in Ripponpet records 95% SSLC results, with Siri N securing first rank by scoring 96% (599/625).

ರಿಪ್ಪನ್ ಪೇಟೆ: ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಟ್ಟಣದ ಮೇರಿಮಾತಾ ಪ್ರೌಢಶಾಲೆ ಶೇ.95 ಫಲಿತಾಂಶ ದಾಖಲಿಸಿ ಗಮನ ಸೆಳೆದಿದೆ.

ಶಾಲೆಯ ವಿದ್ಯಾರ್ಥಿನಿ ಸಿರಿ ಎನ್ 625ರಲ್ಲಿ 599 ಅಂಕಗಳನ್ನು ಪಡೆದು ಶೇ.96 ಸಾಧನೆ ಮಾಡುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಕನ್ನಡದಲ್ಲಿ 123, ಇಂಗ್ಲಿಷ್‌ನಲ್ಲಿ 98, ಹಿಂದಿಯಲ್ಲಿ 100, ಗಣಿತದಲ್ಲಿ 93, ವಿಜ್ಞಾನದಲ್ಲಿ 90 ಹಾಗೂ ಸಮಾಜ ವಿಜ್ಞಾನದಲ್ಲಿ 95 ಅಂಕಗಳನ್ನು ಪಡೆದು ಆಕೆಯ ಪ್ರತಿಭೆಯನ್ನು ತೋರಿಸಿದ್ದಾಳೆ.

ಸಿರಿ ಎನ್ ರಿಪ್ಪನ್ ಪೇಟೆಯ ಶಬರೀಶನಗರದ ನೂತೋಜಿ ರಾವ್ ಹಾಗೂ ಶ್ವೇತಾ ದಂಪತಿಗಳ ಪುತ್ರಿಯಾಗಿದ್ದು, ಆಕೆಯ ಸಾಧನೆಗೆ ಕುಟುಂಬದವರೂ ಹಾಗೂ ಶಿಕ್ಷಕರೂ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನೂ, ಧಾತ್ರಿ ಡಿ ಭಗತ್ 582 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದರೆ, ಕವಿತಾ ಹೆಚ್ 570 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

ಒಟ್ಟು 38 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 36 ಮಂದಿ ಉತ್ತೀರ್ಣರಾಗಿದ್ದಾರೆ. ಶಾಲೆಯ ಈ ಸಾಧನೆಗೆ ಶಿಕ್ಷಕ ವೃಂದ, ಪೋಷಕರು ಮತ್ತು ಸ್ಥಳೀಯರ ಸಹಕಾರವೇ ಪ್ರಮುಖ ಕಾರಣವೆಂದು ಶಾಲಾ ವಲಯ ತಿಳಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಫಲಿತಾಂಶಗಳ ನಿರೀಕ್ಷೆಯೂ ವ್ಯಕ್ತವಾಗಿದೆ.

About The Author

Exit mobile version