ಕಾಡಿನಲ್ಲಿ ಪತ್ತೆಯಾಗಿದ್ದ ಅನಾಮಧೇಯ ತಲೆಬುರುಡೆ |ಉಳಿದಿದ್ದ ಒಂದು ಹಲ್ಲಿನಲ್ಲಿ ಅಡಗಿತ್ತು ಆ ಸಾವಿನ ಅಸಲಿ ಕಹಾನಿ! | ಒಂದೂವರೆ ವರ್ಷದ ಮಿಸ್ಟರಿ ಭೇದಿಸಿದ ಆನಂದಪುರ ಪೊಲೀಸರು
After 18 months, Anandapura police solved a mysterious skull case found in Thyagarthi forest using DNA analysis from a single tooth, confirming the identity of a missing man through forensic evidence.
ಸಾಗರ: ಸುಮಾರು ಒಂದೂವರೆ ವರ್ಷದ ಹಿಂದೆ ತ್ಯಾಗರ್ತಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ ಮಾನವ ತಲೆಬುರುಡೆ ಪ್ರಕರಣಕ್ಕೆ ಇದೀಗ ಸ್ಪಷ್ಟ ಅಂತ್ಯ ಸಿಕ್ಕಿದ್ದು, ಆನಂದಪುರ ಪೊಲೀಸರು ವೈಜ್ಞಾನಿಕ ತನಿಖೆಯ ಮೂಲಕ ಮೃತನ ಗುರುತು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಒಂದೇ ಒಂದು ಹಲ್ಲಿನ ಆಧಾರದಲ್ಲಿ ನಡೆದ ಡಿಎನ್‌ಎ ಪರೀಕ್ಷೆ ಪ್ರಕರಣಕ್ಕೆ ತೀರ್ಮಾನಕಾರಿ ತಿರುವು ನೀಡಿದೆ.
2025ರ ನವೆಂಬರ್ 25ರಂದು ತ್ಯಾಗರ್ತಿ ಗ್ರಾಮದ ಕಾಡಿನಲ್ಲಿ ರವಿ ಎಂಬ ವ್ಯಕ್ತಿ ಕಟ್ಟಿಗೆ ಕಡೆಯಲು ತೆರಳಿದ್ದಾಗ ಮಾನವ ತಲೆಬುರುಡೆ ಕಂಡು ಬೆಚ್ಚಿಬಿದ್ದಿದ್ದರು. ತಕ್ಷಣವೇ ಸ್ಥಳೀಯರಿಗೆ ಹಾಗೂ ಆನಂದಪುರ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪಿಎಸ್ಐ ಪ್ರವೀಣ್ ಎಸ್.ಪಿ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿತು.
ಸ್ಥಳದಲ್ಲಿ ತಲೆಬುರುಡೆ ಹೊರತುಪಡಿಸಿ ಇತರೆ ಯಾವುದೇ ಮೂಳೆ ಅವಶೇಷಗಳು ಪತ್ತೆಯಾಗಿರಲಿಲ್ಲ. ಆದರೆ ಹತ್ತಿರದಲ್ಲೇ ಕೆಲವು ಬಟ್ಟೆಗಳು ಸಿಕ್ಕಿದ್ದು, ಅವು ಪ್ರಕರಣದ ಮೊದಲ ಸುಳಿವಾಗಿ ಪರಿಣಮಿಸಿತು.
ತನಿಖೆ ವೇಳೆ, 2024ರ ಜುಲೈ 22ರಂದು ಆನಂದಪುರ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣ ಪೊಲೀಸರ ಗಮನ ಸೆಳೆದಿತ್ತು. ತ್ಯಾಗರ್ತಿ ಗ್ರಾಮದ ಬಸವರಾಜ್ ಎಂಬ ವ್ಯಕ್ತಿ ಆ ದಿನದಿಂದ ಕಾಣೆಯಾಗಿದ್ದರೆಂದು ಕುಟುಂಬದವರು ದೂರು ನೀಡಿದ್ದರು.
ಘಟನಾ ಸ್ಥಳದಲ್ಲಿ ಸಿಕ್ಕಿದ್ದ ಬಟ್ಟೆಗಳನ್ನು ಬಸವರಾಜ್ ಅವರ ಪತ್ನಿ ಹಾಗೂ ಮಗಳಿಗೆ ತೋರಿಸಲಾಗಿದ್ದು, ಅವು ತಮ್ಮ ಕುಟುಂಬ ಸದಸ್ಯರದ್ದೇ ಎಂದು ಅವರು ಗುರುತಿಸಿದ್ದರು. ಆದಾಗ್ಯೂ, ಕೇವಲ ಬಟ್ಟೆಯ ಆಧಾರದಲ್ಲಿ ಗುರುತು ದೃಢೀಕರಣ ಸಾಧ್ಯವಾಗದ ಕಾರಣ ವೈಜ್ಞಾನಿಕ ಪರೀಕ್ಷೆಗೆ ಮುಂದಾಗಲಾಯಿತು.
ಪೊಲೀಸರು ತಲೆಬುರುಡೆಯನ್ನು ಶಿವಮೊಗ್ಗ ಮೆಗನ್ ಆಸ್ಪತ್ರೆ ಮೂಲಕ ಎಫ್‌ಎಸ್‌ಎಲ್ ದಾವಣಗೆರೆ ಮತ್ತು ಹುಬ್ಬಳ್ಳಿಗೆ ಕಳುಹಿಸಿದರು. ಉಳಿದ ಮೂಳೆಗಳು ಸಿಗದ ಹಿನ್ನೆಲೆಯಲ್ಲಿ ತಲೆಬುರುಡೆಯೊಳಗಿನ ಒಂದೇ ಒಂದು ಹಲ್ಲು ಪ್ರಮುಖ ಸಾಕ್ಷಿಯಾಗಿ ಪರಿಣಮಿಸಿತು.
ತಹಸೀಲ್ದಾರ್ ಸಮ್ಮುಖದಲ್ಲಿ ಬಸವರಾಜ್ ಅವರ ಮಗಳ ರಕ್ತದ ಮಾದರಿ ಸಂಗ್ರಹಿಸಿ ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಯಿತು. ದೀರ್ಘ ನಿರೀಕ್ಷೆಯ ಬಳಿಕ ಬಂದಿರುವ ವರದಿ, ತಲೆಬುರುಡೆ ಬಸವರಾಜ್ ಅವರದ್ದೇ ಎಂಬುದನ್ನು ವೈಜ್ಞಾನಿಕವಾಗಿ ದೃಢಪಡಿಸಿದೆ.
ತನಿಖೆಯಲ್ಲಿ ಬೆಳಕಿಗೆ ಬಂದ ಮಾಹಿತಿಯ ಪ್ರಕಾರ, ಬಸವರಾಜ್ ಅತಿಯಾದ ಮದ್ಯಪಾನಕ್ಕೆ ಒಳಗಾಗಿದ್ದರಿಂದ ಕುಟುಂಬದಲ್ಲಿ ಕಲಹಗಳು ನಡೆಯುತ್ತಿದ್ದು, ಮಾನಸಿಕ ಒತ್ತಡದಿಂದ ಅವರು ಕಾಡಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ವ್ಯಕ್ತವಾಗಿದೆ.
ಒಟ್ಟಾರೆ, ಕಾಡಿನ ನಿಶ್ಶಬ್ದತೆಯ ನಡುವೆ ಪತ್ತೆಯಾದ ಒಂದು ತಲೆಬುರುಡೆ ಹಾಗೂ ಅದರೊಳಗಿನ ಒಂದೇ ಒಂದು ಹಲ್ಲಿನ ಆಧಾರದ ಮೇಲೆ ಗುರುತು ಪತ್ತೆಹಚ್ಚಿರುವುದು ಆನಂದಪುರ ಪೊಲೀಸರ ಸೂಕ್ಷ್ಮ ಪರಿಶ್ರಮ, ವೈಜ್ಞಾನಿಕ ದೃಷ್ಟಿಕೋನ ಹಾಗೂ ನಿಖರ ತನಿಖೆಗೆ ನಿದರ್ಶನವಾಗಿದೆ.
ಯುವಶಕ್ತಿಯೇ ಎಚ್ಚೆತ್ತುಕೋ: ಈದ್ ಮಿಲಾದ್ ಸಂಭ್ರಮದಲ್ಲಿ ಮೊಳಗಿದ ‘ನಶಾಮುಕ್ತ ಭಾರತ’ ಸಂದೇಶ Ripponpete Police launched an anti-drug awareness…
ಅಂಗವಿಕಲ ಯುವಕನ ಸೈಟ್ ತೆರವಿಗೆ ಅರಣ್ಯ ಇಲಾಖೆ ಯತ್ನ – ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ, ಹೈಡ್ರಾಮಾ High drama…
ರಿಪ್ಪನ್ ಪೇಟೆ ಸಮೀಪದ ಅರಣ್ಯದಲ್ಲಿ ಕುಡುಮಲ್ಲಿಗೆ ಸೊಸೈಟಿ ಸಿಇಒ ನಾಪತ್ತೆ ರಹಸ್ಯವೇನು? ಅನಾಹುತವೋ, ಪಲಾಯನವೋ? ಮುಂದುವರಿದ ತೀವ್ರ ಶೋಧ! An…
ರಿಪ್ಪನ್‌ಪೇಟೆಯಲ್ಲಿ ಅರಣ್ಯಾಧಿಕಾರಿಗಳ ದಾಳಿ : 21 ಕೆ.ಜಿ. ಜಿಂಕೆ ಮಾಂಸ ವಶ, ಆರೋಪಿಗಳು ಪರಾರಿ Forest Flying Squad officials…
ರಿಪ್ಪನ್‌ಪೇಟೆಯ ನಿವೃತ್ತ ಶಿಕ್ಷಕ, ಶಿಕ್ಷಣ ಪ್ರೇಮಿ ಬಿ. ಶೇಖರಪ್ಪ ಮಾಸ್ಟರ್ ನಿಧನ; ರಂಭಾಪುರಿ ಜಗದ್ಗುರುಗಳಿಂದ ಸಂತಾಪ Retired teacher and…
ಸಾಗರೋತ್ತರದಲ್ಲೂ ಹುಟ್ಟೂರಿನ ಕಳಕಳಿ | ನೊಂದವರ ಬಾಳಲ್ಲಿ ಬೆಳಕಾದ ರಿಪ್ಪನ್‌ಪೇಟೆಯ ಜಿಸಿಸಿ ಯುವಪಡೆಗೆ ಶಾಸಕರಿಂದ ವಿಶೇಷ ಸನ್ಮಾನ ಮಾನವೀಯತೆಯೆಂಬುದು ಕೇವಲ…