Heavy rain and strong winds in Belluru village of Hosanagara taluk caused a coconut tree to fall on a house. Five family members inside the house escaped without injuries though the house suffered damage.
ರಿಪ್ಪನ್‌ಪೇಟೆ: ಇಲ್ಲಿನ ಸಮೀಪದ ಬೆಳ್ಳೂರು ಗ್ರಾಮದಲ್ಲಿ ಭಾನುವಾರ ಸಂಜೆ ಸುರಿದ ಭಾರಿ ಮಳೆಯೊಂದಿಗೆ ಬಿರುಸಿನ ಗಾಳಿ ಬೀಸಿದ ಪರಿಣಾಮ ಮನೆ ಮೇಲೆಗೆ ತೆಂಗಿನ ಮರ ಬಿದ್ದು ಆತಂಕದ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಐವರು ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳ್ಳೂರು ಗ್ರಾಮದ ನಿವಾಸಿ ರತ್ನಮ್ಮ ಅವರಿಗೆ ಸೇರಿದ ಹಂಚಿನ ಮನೆ ಮುಂದೆ ನಿಂತಿದ್ದ ದೊಡ್ಡ ತೆಂಗಿನ ಮರ ಮಳೆ ಹಾಗೂ ಗಾಳಿಯ ತೀವ್ರತೆಗೆ ತಾಳಲಾರದೆ ಏಕಾಏಕಿ ಮನೆ ಮೇಲೆ ಬಿದ್ದಿದೆ. ಘಟನೆ ನಡೆದ ವೇಳೆ ಮನೆಯೊಳಗೆ ಕುಟುಂಬದ ಐವರು ಸದಸ್ಯರು ಇದ್ದರು. ಮರ ಬಿದ್ದ ಶಬ್ದ ಕೇಳಿ ಅವರು ತಕ್ಷಣ ಹೊರಗೆ ಓಡಿಬಂದ ಪರಿಣಾಮ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮರ ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿಗೆ ಹಾನಿಯಾಗಿದ್ದು, ಹಂಚುಗಳು ಜಾರಿಬಿದ್ದಿವೆ. ಇದರ ಪರಿಣಾಮವಾಗಿ ಬಳಿಕ ಮುಂದುವರಿದ ಮಳೆಯಿಂದ ಮನೆಯೊಳಗೆ ನೀರು ನುಗ್ಗಿ ಒಳಗಿನ ಸಾಮಾನುಗಳಿಗೆ ಹಾನಿಯಾಗಿದೆ. ಮನೆಯ ಕೆಲವು ಭಾಗಗಳು ಭಾಗಶಃ ಹಾನಿಗೊಳಗಾಗಿರುವುದರಿಂದ ಕುಟುಂಬಸ್ಥರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.
ರೈತರ ಹೆಸರಿಗೂ ಗೌರವದ ಅಂಕಿತ ಬೇಕು: ‘Fr’ ಸೇರಿಸಲು ಸರ್ಕಾರಕ್ಕೆ ಮನವಿ Kalluru Meghraj urges the Karnataka government…
ಕುಡಿಯುವ ನೀರಿಗಾಗಿ ಬಾಳೂರು ಗ್ರಾಮಸ್ಥರ ಆಕ್ರೋಶ; ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ Residents of Baluru and Kaleshwara villages…
ಬಟಾಣಿಜಡ್ಡು, ತಮ್ಮಡಿಕೊಪ್ಪ ಭಾಗದಲ್ಲಿ ಆನೆಗಳ ಸಂಚಾರ – ತೋಟಗಳಿಗೆ ಹಾನಿ , ಜನರಿಗೆ ಅರಣ್ಯ ಇಲಾಖೆ ಎಚ್ಚರಿಕೆ Wild elephant…
ಕಾರಿನಲ್ಲಿ ಗಾಂಜಾ ಮಾರಾಟ: ಇಬ್ಬರ ಬಂಧನ, 1.42 ಕೆಜಿ ಗಾಂಜಾ ಹಾಗೂ ಕಾರು ಜಪ್ತಿ Two people were arrested…
ಎಣ್ಣೆ ಮತ್ತಿನಲ್ಲಿ ಅಪಾಯಕಾರಿ ಆಟೋ ಚಾಲನೆ: ಚಾಲಕನ ಬಂಧನ, ವಾಹನ ಪೊಲೀಸ್ ವಶಕ್ಕೆ Shivamogga West Traffic Police registered…
ಅರಸಾಳು ಬಳಿ ರೈಲ್ವೆ ಹಳಿಯ ಮೇಲೆ ಉರುಳಿದ ಮರ; ಮಾರ್ಗ ಮಧ್ಯೆ ನಿಂತ ತಾಳಗುಪ್ಪ-ಬೆಂಗಳೂರು ರೈಲು! ಪ್ರಯಾಣಿಕರ ಪರದಾಟ The…