ಮಾರುತಿಪುರ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿಯ ಮಹಾಪರ್ವ , ನುಡಿದಂತೆ ನಡೆದ ಶಾಸಕ ಬೇಳೂರು ಗೋಪಾಲಕೃಷ್ಣ – ಚಿದಂಬರಂ

Large-scale development works worth over ₹8 crore are underway in Marutipura Gram Panchayat of Hosanagar taluk, with former GP president H.P. Chidambaram praising MLA Belur Gopalakrishna for fulfilling his promises and prioritizing basic infrastructure.

ಹೊಸನಗರ ತಾಲೂಕು ಮಾರುತಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಿಂದೆಂದೂ ಕಾಣದಂತಹ ಅಭಿವೃದ್ಧಿಯ ಪರ್ವ ನಡೆಯುತ್ತಿದ್ದು, ವಿವಿಧ ಯೋಜನೆಗಳ ಮೂಲಕ ಸುಮಾರು 8 ಕೋಟಿ ರೂ.ಕ್ಕೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಅನುದಾನ ಮಂಜೂರಾಗಿದೆ ಎಂದು ಮಾರುತಿಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಹೊಸನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಪಿ. ಚಿದಂಬರಂ ಹೂವಿನಕೋಣೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, “ಮಾನ್ಯ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಹೊಸನಗರ ತಾಲೂಕಿನಲ್ಲಿ ಅತ್ಯಧಿಕ ಅನುದಾನವನ್ನು ಮಾರುತಿಪುರ ಗ್ರಾಮ ಪಂಚಾಯಿತಿಗೆ ವಿನಿಯೋಗಿಸಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಜನತೆಗೆ ನೀಡಿದ್ದ ಭರವಸೆಯನ್ನು ಕಾರ್ಯರೂಪಕ್ಕೆ ತಂದು ‘ನುಡಿದಂತೆ ನಡೆದಿದ್ದಾರೆ’,” ಎಂದು ಶ್ಲಾಘಿಸಿದರು.

ಕುಡಿಯುವ ನೀರು, ರಸ್ತೆ, ಕಾಲುಸಂಕ, ಚಾನಲ್‌ಗಳು, ಸೇತುವೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಸರ್ಕಾರಿ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಸ್ಟೆಲ್, ಗ್ರಂಥಾಲಯ, ಅಂಗನವಾಡಿ ಹಾಗೂ ಬಸ್ ನಿಲ್ದಾಣಗಳ ನವೀಕರಣಕ್ಕೂ ವಿಶೇಷ ಒತ್ತು ನೀಡಲಾಗಿದೆ ಎಂದು ಚಿದಂಬರಂ ಹೇಳಿದರು.

“ಮಾರುತಿಪುರ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಸಾರ್ವಜನಿಕರಿಗೆ ನೇರ ಲಾಭ ನೀಡುತ್ತಿದ್ದು, ಕೆಲವು ಕಾಮಗಾರಿಗಳು ಪೂರ್ಣಗೊಂಡಿವೆ, ಕೆಲವು ಪ್ರಗತಿಯಲ್ಲಿವೆ, ಇನ್ನು ಕೆಲವು ಟೆಂಡರ್ ಪ್ರಕ್ರಿಯೆಯಲ್ಲಿವೆ. ಮುಂದಿನ ದಿನಗಳಲ್ಲೂ ಈ ಅಭಿವೃದ್ಧಿ ನಿರಂತರವಾಗಿ ಸಾಗಲು ಸಾರ್ವಜನಿಕರು ಶಾಸಕರ ಕೈಬಲಪಡಿಸಬೇಕು,” ಎಂದು ಅವರು ಮನವಿ ಮಾಡಿದ್ದಾರೆ.

ಶಾಸಕರ ಅವಧಿಯಲ್ಲಿ ಮಾರುತಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮಗ್ರ ಅಭಿವೃದ್ಧಿ ಸಾಧ್ಯವಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂತಸ ವ್ಯಕ್ತವಾಗುತ್ತಿದೆ ಎಂದು ಚಿದಂಬರಂ ಹೇಳಿದರು.

ಶಾಸಕರು ಅನುಷ್ಠಾನಗೊಳಿಸಿದ ಪ್ರಮುಖ ಕಾಮಗಾರಿಗಳ ಪಟ್ಟಿ

ವಿಜಾಪುರ ಮುಖ್ಯ ರಸ್ತೆಯಿಂದ ಬೀಸಿನಕೊಪ್ಪ ರಸ್ತೆ ಡಾಂಬರೀಕರಣ – ₹15 ಲಕ್ಷ

  • ಹೊಸನಗರ–ಸಾಗರ ಮುಖ್ಯ ರಸ್ತೆಯಿಂದ ಚಿಕ್ಕುಂದ ರಸ್ತೆ ಡಾಂಬರೀಕರಣ – ₹20 ಲಕ್ಷ
  • ಮಜ್ವಾನ ಗ್ರಾಮದ ಹೂವಿನಕೋಣೆ ರಸ್ತೆ – ₹30 ಲಕ್ಷ
  • ಸೊಗಡು ರಸ್ತೆ – ₹35 ಲಕ್ಷ
  • ಸಂಪಳ್ಳಿ ಗ್ರಾಮದ ಗೋರ್ಗದ್ದೆ ರಸ್ತೆ – ₹20 ಲಕ್ಷ
  • ವಿಜಾಪುರ ಮುಖ್ಯ ರಸ್ತೆಯಿಂದ ಕಟ್ಟಿಗೆ ಜೆಡ್ ರಸ್ತೆ – ₹20 ಲಕ್ಷ
  • ವನದಗದ್ದೆ ಕಾಲುಸಂಕ ನಿರ್ಮಾಣ – ₹20 ಲಕ್ಷ
  • ಸಂಪಳ್ಳಿ ಗ್ರಾಮ: ಗುಬ್ಬಿಗದಿಂದ ಮತ್ತಿಕೊಪ್ಪ ಹಳ್ಳಕ್ಕೆ ಕಾಲುಸಂಕ – ₹20 ಲಕ್ಷ
  • ಬೀಸಿನಕೊಪ್ಪ ರವಿಕುಮಾರ್ ಮನೆ ಬಳಿ ಮಂಕೋಡು – ₹25 ಲಕ್ಷ
  • ಸಂಪಳ್ಳಿ ಹಳ್ಳಕ್ಕೆ ಕಾಲುಸಂಕ (ನಾಗಪ್ಪ–ನಿಜಲಿಂಗಪ್ಪ ಮನೆ ಬಳಿ) – ₹20 ಲಕ್ಷ
  • ಸರ್ವೇ ನಂ.29 ಭೋವಿಗುಂಡನಕೆರೆ ಅಭಿವೃದ್ಧಿ – ₹20 ಲಕ್ಷ
  • ಸರ್ವೇ ನಂ.59 ಜಮೀನಿಗೆ ಚಾನಲ್ ನಿರ್ಮಾಣ – ₹10 ಲಕ್ಷ
  • ಹೊಸಕೊಪ್ಪ–ನಿಂಬೆಸನ ಶಾಲೆ ಸಂಪರ್ಕ ರಸ್ತೆ ತಡೆಗೋಡೆ – ₹70 ಲಕ್ಷ
  • ಹಿರೇಕೆರಿ ಚಾನಲ್ ದುರಸ್ತಿ – ₹75 ಲಕ್ಷ
  • ಮುಜ್ವಾನ ಚಕ್ರಕೆರೆ ಅಭಿವೃದ್ಧಿ – ₹25 ಲಕ್ಷ
  • ಮಾರುತಿಪುರ–ಮತ್ತಿಕೊಪ್ಪ ಸಂಪರ್ಕ ಸೇತುವೆ – ₹40 ಲಕ್ಷ
  • ಬ್ರಹ್ಮೇಶ್ವರ–ಪಟಗುಪ್ಪೆ ರಸ್ತೆ ಅಭಿವೃದ್ಧಿ – ₹1 ಕೋಟಿ

ಇತರ ಅಭಿವೃದ್ಧಿ ಕಾಮಗಾರಿಗಳು

ಮಾರುತಿಪುರ ಹಾಸ್ಟೆಲ್ ದುರಸ್ತಿ, ಆಸ್ಪತ್ರೆ ದುರಸ್ತಿ, ಶಾಲೆಗಳ ದುರಸ್ತಿ, ಗ್ರಂಥಾಲಯ ನವೀಕರಣ, ಪ್ರೌಢಶಾಲೆ ಹಾಗೂ ಮಜ್ವಾನ ಶಾಲೆಗೆ ಪ್ರಾರ್ಥನಾ ಮಂದಿರ, ಪ್ರೌಢಶಾಲೆ ಮುಂಭಾಗ ಬಸ್ ನಿಲ್ದಾಣ, ಅಂಗನವಾಡಿ ಕಟ್ಟಡ ನಿರ್ಮಾಣ, ಪುನೀತ್ ರಾಜಕುಮಾರ್ ಪ್ರತಿಮೆ ಬಳಿ ಹೈಮಾಸ್ಟ್ ದೀಪ ಸ್ಥಾಪನೆ ಸೇರಿದಂತೆ ಹಲವು ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಸಾಗರ ಗ್ರಾಮಾಂತರ ಠಾಣೆಯ ನೂತನ ಪಿಎಸ್‌ಐ ಆಗಿ ಶಂಕರ್ ಗೌಡ ಪಾಟೀಲ್ ನೇಮಕ

ಸಾಗರ ಗ್ರಾಮಾಂತರ ಠಾಣೆಯ ನೂತನ ಪಿಎಸ್‌ಐ ಆಗಿ ಶಂಕರ್ ಗೌಡ ಪಾಟೀಲ್ ನೇಮಕ PSI Shankar Gowda Patil has…

2 hours ago

ಶತಮಾನದ ಸಂಭ್ರಮದಲ್ಲಿ ರಿಪ್ಪನ್‌ಪೇಟೆ ಬಾಲಕರ ಶಾಲೆ: ಸೆ. 3ಕ್ಕೆ ಹಳೆಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆ

ಶತಮಾನದ ಸಂಭ್ರಮದಲ್ಲಿ ರಿಪ್ಪನ್‌ಪೇಟೆ ಬಾಲಕರ ಶಾಲೆ: ಸೆ. 3ಕ್ಕೆ ಹಳೆಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆ Ripponpete Government Model Boys…

2 hours ago

ಪ್ಲಾಸ್ಟಿಕ್ ಚೀಲಗಳ ನಡುವೆ ಅಡಗಿದ್ದ 7.5 ಅಡಿ ಬೃಹತ್ ಹೆಬ್ಬಾವು ಸೆರೆ

ಪ್ಲಾಸ್ಟಿಕ್ ಚೀಲಗಳ ನಡುವೆ ಅಡಗಿದ್ದ 7.5 ಅಡಿ ಬೃಹತ್ ಹೆಬ್ಬಾವು ಸೆರೆ A 7.5-foot-long, 10 kg giant python…

3 hours ago

ಈದ್ ಮಿಲಾದ್ – ಗಣೇಶೋತ್ಸವಕ್ಕೆ ಅನುಮತಿ ಇಲ್ಲದೆ ಡಿಜೆ ಹಾಕಿದರೆ ಕೇಸ್ ! ಸೌಂಡ್ ಸಿಸ್ಟಂ ಮಾಲೀಕರಿಗೆ ಪೊಲೀಸರಿಂದ ಖಡಕ್ ವಾರ್ನಿಂಗ್

ಈದ್ ಮಿಲಾದ್ - ಗಣೇಶೋತ್ಸವಕ್ಕೆ ಅನುಮತಿ ಇಲ್ಲದೆ ಡಿಜೆ ಹಾಕಿದರೆ ಕೇಸ್ ! ಸೌಂಡ್ ಸಿಸ್ಟಂ ಮಾಲೀಕರಿಗೆ ಪೊಲೀಸರಿಂದ ಖಡಕ್…

4 hours ago

ಅಕ್ರಮ ಜಂಬಿಟ್ಟಿಗೆ ಕಲ್ಲು ಕ್ವಾರಿಗೆ ತಹಶೀಲ್ದಾರ್ ದಿಢೀರ್ ದಾಳಿ; ಜೆಸಿಬಿ ವಶಕ್ಕೆ, ಪ್ರಕರಣ ದಾಖಲು

ಅಕ್ರಮ ಜಂಬಿಟ್ಟಿಗೆ ಕಲ್ಲು ಕ್ವಾರಿಗೆ ತಹಶೀಲ್ದಾರ್ ದಿಢೀರ್ ದಾಳಿ; ಜೆಸಿಬಿ ವಶಕ್ಕೆ, ಪ್ರಕರಣ ದಾಖಲು Sagar Tahsildar Dr. Prathibha…

11 hours ago

ಗೋಡಾನ್ ಜಾಲರಿ ಮುರಿದು ಅಡಕೆ ಕಳವು; ₹2.50 ಲಕ್ಷ ಮೌಲ್ಯದ 4.80 ಕ್ವಿಂಟಾಲ್ ಅಡಕೆ ದೋಚಿದ ಕಳ್ಳರು

ಗೋಡಾನ್ ಜಾಲರಿ ಮುರಿದು ಅಡಕೆ ಕಳವು; ₹2.50 ಲಕ್ಷ ಮೌಲ್ಯದ 4.80 ಕ್ವಿಂಟಾಲ್ ಅಡಕೆ ದೋಚಿದ ಕಳ್ಳರು Thieves broke…

12 hours ago