POSTMANNEWS

ನೈಜ ಸುದ್ದಿ ನೇರ ಬಿತ್ತರ..

ಶಿವಮೊಗ್ಗ | ಭಾರೀ ಅಗ್ನಿ ಅವಘಡ: ಜ್ಯೂಸ್ ಸೆಂಟರ್‌, ಬಟ್ಟೆ ಅಂಗಡಿಗೆ ಬೆಂಕಿ – ಲಕ್ಷಾಂತರ ರೂ. ನಷ್ಟ

A massive fire on BH Road in Shivamogga gutted a juice center and cloth shop, causing losses worth lakhs. Firefighters averted a major disaster.

ಶಿವಮೊಗ್ಗ: ನಗರದ ಪ್ರಮುಖ ವ್ಯಾಪಾರಿಕ ಕೇಂದ್ರವಾಗಿರುವ BH ರಸ್ತೆಯಲ್ಲಿ ಇಂದು ಸಂಜೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಡೈಮೆಂಡ್ ಜ್ಯೂಸ್ ಸೆಂಟರ್‌ ಹಾಗೂ ಬಾಂಬೆ ಸೇಲ್‌ ಬಟ್ಟೆ ಅಂಗಡಿಯಲ್ಲಿ ಬೆಂಕಿ ಹೊತ್ತುಕೊಂಡ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.

ಕರ್ನಾಟಕ ಸಂಘದ ಸಮೀಪ ತಗಡು ಶೀಟ್‌ಗಳನ್ನು ಬಳಸಿ ನಿರ್ಮಿಸಿದ್ದ ಮಳಿಗೆಯಲ್ಲಿ ಈ ಘಟನೆ ನಡೆದಿದ್ದು, ಮೊಹಮದ್ ಗೌಸ್ ಅವರಿಗೆ ಸೇರಿರುವ ಬಟ್ಟೆ ಅಂಗಡಿಯ ಹಿಂಭಾಗದಲ್ಲಿ ಸಂಗ್ರಹಿಸಿದ್ದ ಕಸಕ್ಕೆ ಅಪರಿಚಿತರು ಬೆಂಕಿ ಹಚ್ಚಿದ ಕಾರಣ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬೆಂಕಿ ವೇಗವಾಗಿ ಹರಡಿದ್ದು, ಅಂಗಡಿಯಲ್ಲಿದ್ದ ಬಟ್ಟೆಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ.

ಇದೇ ವೇಳೆ ಪಕ್ಕದಲ್ಲಿದ್ದ ಡೈಮೆಂಡ್ ಜ್ಯೂಸ್ ಸೆಂಟರ್‌ನಲ್ಲಿದ್ದ ರೆಫ್ರಿಜರೇಟರ್‌, ಮಿಕ್ಸಿ ಸೇರಿದಂತೆ ಹಲವು ಉಪಕರಣಗಳು ಬೆಂಕಿಗೆ ಆಹುತಿಯಾಗಿವೆ. ಅಂಗಡಿಯಲ್ಲಿ ಸಣ್ಣ ಅಡುಗೆ ಗ್ಯಾಸ್ ಸಿಲಿಂಡರ್ ಇದ್ದರೂ, ಅದರಲ್ಲಿ ಗ್ಯಾಸ್ ಖಾಲಿಯಾಗಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ ಎಂದು ತಿಳಿದು ಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಶಿವಮೊಗ್ಗ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಿದರು. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಅಗ್ನಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕದಳದ FSTO ಮಕ್ತುಂ ಹುಸೇನ್, LF ಸುನಿಲ್, FD ಸತೀಶ್ ಹಾಗೂ FM ಯರಿಸ್ವಾಮಿ ಮನೋಜ್ ಭಾಗವಹಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ತನಿಖೆ ಮುಂದುವರಿಸಿದೆ.

About The Author

Exit mobile version