POSTMANNEWS

ನೈಜ ಸುದ್ದಿ ನೇರ ಬಿತ್ತರ..

ಶಿವಮೊಗ್ಗಕ್ಕೆ ತೆರಳಿದ್ದ 25 ವರ್ಷದ ಟೆಕ್ನಿಷಿಯನ್ ನಾಪತ್ತೆ – ಪತ್ತೆಗೆ ಸಹಕರಿಸಲು ಪೊಲೀಸ್ ಮನವಿ

A 25-year-old technician, Dhanush N D from Hosanagara taluk, Shivamogga district, has gone missing after leaving home to go to Shivamogga on January 19, 2026. A missing person case has been registered at Ripponpete Police Station, and police have appealed to the public for information.

ಹೊಸನಗರ ತಾಲೂಕು ಹುಂಚಾ ಹೋಬಳಿ, ಹುಂಚಾ ಗ್ರಾಮದ ಮಾರ್ನಮಿ ಬೈಲು ನಿವಾಸಿ ಧನುಷ್ ಎನ್.ಡಿ (25) ಎಂಬ ಯುವಕ ಕಳೆದ 19-01-2026 ರಂದು ಬೆಳಿಗ್ಗೆ ಮನೆಯಿಂದ ಶಿವಮೊಗ್ಗದ ಮಹೇಂದ್ರ ಶೋರೂಮ್‌ಗೆ ತೆರಳುವುದಾಗಿ ಹೇಳಿ ಹೊರಟು ಹೋಗಿದ್ದು, ನಂತರ ಮನೆಗೂ ವಾಪಸ್ ಬಾರದೇ ಕಾಣೆಯಾಗಿರುವ ಘಟನೆ ನಡೆದಿದೆ.

ಧನುಷ್ ಶಿವಮೊಗ್ಗಕ್ಕೆ ತೆರಳಿದ ಬಳಿಕ ಕಾಣೆಯಾಗಿದ್ದು, ಸಂಬಂಧಿಕರು ಹಾಗೂ ಕುಟುಂಬಸ್ಥರು ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಕಾಣೆಯಾದ ಯುವಕನ ತಂದೆ ದಿನೇಶ್ ಮರಗಿ ಬಿನ್ ನಾಗಪ್ಪ ಮರಗಿ ಅವರು ನೀಡಿದ ದೂರಿನ ಆಧಾರದಲ್ಲಿ ರಿಪ್ಪನಪೇಟೆ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 09/2026, ಮನುಷ್ಯ ಕಾಣೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾಣೆಯಾದ ಯುವಕನ ಚಹರೆ ವಿವರ

ಹೆಸರು: ಧನುಷ್ ಎನ್.ಡಿ ಬಿನ್ ದಿನೇಶ್ ಮರಗಿ
ವಯಸ್ಸು: 25 ವರ್ಷ
ಎತ್ತರ: ಸುಮಾರು 5 ಅಡಿ 7 ಇಂಚು
ಮೈಬಣ್ಣ: ಎಣ್ಣೆಗಂಪು
ಮುಖ: ಕೋಲು ಮುಖ
ಮೈಕಟ್ಟು: ಸಾಧಾರಣ
ಭಾಷೆ: ಕನ್ನಡ
ಉದ್ಯೋಗ: ಟಿಕ್ನಿಷಿಯನ್

ಸುಳಿವು ದೊರೆತಲ್ಲಿ ಸಂಪರ್ಕಿಸಿ

ಕಾಣೆಯಾದ ಯುವಕನ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಕೆಳಕಂಡ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ:

ಪೊಲೀಸ್ ಉಪನಿರೀಕ್ಷಕರು, ರಿಪ್ಪನಪೇಟೆ ಪೊಲೀಸ್ ಠಾಣೆ, ಹೊಸನಗರ ತಾಲೂಕು
 9480803365

ಪೊಲೀಸ್ ನಿರೀಕ್ಷಕರು, ಹೊಸನಗರ ವೃತ್ತ, ತೀರ್ಥಹಳ್ಳಿ ಉಪವಿಭಾಗ, ಶಿವಮೊಗ್ಗ ಜಿಲ್ಲೆ
 9480803337

ಪೊಲೀಸ್ ಉಪಾಧೀಕ್ಷಕರು, ತೀರ್ಥಹಳ್ಳಿ ಉಪವಿಭಾಗ, ಶಿವಮೊಗ್ಗ ಜಿಲ್ಲೆ
 9480803340

About The Author

Exit mobile version