ಕೆಂಚನಾಲ ಮಾರಿಕಾಂಬ ದೇವಿಯ ವಿಜೃಂಬಣೆಯ ಜಾತ್ರಾ ಮಹೋತ್ಸವ
ರಿಪ್ಪನ್‌ಪೇಟೆ;-ಇತಿಹಾಸ ಪ್ರಸಿದ್ದ ಕೆಂಚನಾಲ ಮಾರಿಕಾಂಬ ದೇವಿಯ ಜಾತ್ರೆಯುವ ವಿಜೃಂಬಣೆಯೊಂದಿಗೆ ಜರುಗಿತು.
ಮುಂಜಾನೆ ಬ್ರಾಹ್ಮಿ ಮೂಹರ್ತದಲ್ಲಿ ದೇವಿಯ ವಿಶೇಷ ಪೂಜೆ ಹೂವಿನ ಅಲಂಕಾರ ಪೂಜೆಯೊಂದಿಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನೆರವೇರಿತು.
ದೇವಿಯ ಜಾತ್ರಾ ಮಹೋತ್ಸವದಲ್ಲಿ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವಿಯ ದರ್ಶನಾಶೀರ್ವಾದ ಪಡೆದರು.
ವರ್ಷದಲ್ಲಿ ಎರಡು ಭಾರಿ ಆಚರಿಸುವ ಕೆಂಚನಾಲ ಮಾರಿಕಾಂಬ ದೇವಿಯ ಜಾತ್ರೆಯು ಮಳೆಗಾಲದಲ್ಲಿ ಮಂಗಳವಾರ ಬೇಸಿಗೆಯಲ್ಲಿ ಬುಧವಾರ ಆಚರಿಸುವುದು ವಿಶೇಷವಾಗಿದೆ.
ಬೆಳಗ್ಗೆಯಿಂದಲೇ ದೇವಸ್ಥಾನದ ಬಳಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಹಣ್ಣು ಕಾಯಿ ಹರಕೆಯನ್ನು ದೇವಿಗೆ ಸಮರ್ಪಿಸುತ್ತಿದ್ದ ಸುತ್ತಮುತ್ತಲಿನ ರೈತ ನಾಗರೀಕರು ಜಾತ್ರೆಯಲ್ಲಿ ಪಾಲ್ಗೊಂಡು ಕಾರ ಮಂಡಕ್ಕಿ ಬೆಂಡು ಬತ್ತಾಸು ಮೈಸೂರು ಪಾಕು.ಜಿಲೇಬಿ ಹೀಗೆ ಮಕ್ಕಳ ಅಟಿಕೆ ಸಾಮಾನುಗಳ ಅಂಗಡಿಗಳ ಮುಂದೆ ಭಕ್ತ ಸಮೂಹ ಜಮಾಯಿಸಿತು.
