ಚಲಿಸುತ್ತಿದ್ದ ಖಾಸಗಿ ಬಸ್ ಟಯರ್ ಬ್ಲಾಸ್ಟ್: ಬೈಕ್ ಸವಾರನ ತಲೆಗೆ ಕಬ್ಬಿಣದ ತುಂಡು ಬಿದ್ದು ಸಾವು
A tragic road accident occurred at HK Junction when a private bus tyre burst, causing an iron piece to hit a bike rider on the head, resulting in his death.
ಭದ್ರಾವತಿ | ಅಪಘಾತ ಸುದ್ದಿ:
ಚಲಿಸುತ್ತಿದ್ದ ಖಾಸಗಿ ಬಸ್‌ನ ಟಯರ್ ಬ್ಲಾಸ್ಟ್ ಆದ ಪರಿಣಾಮ, ಬಸ್ ಪಕ್ಕದಲ್ಲೇ ಸಾಗುತ್ತಿದ್ದ ಬೈಕ್ ಸವಾರನ ತಲೆಗೆ ಕಬ್ಬಿಣದ ತುಂಡು ತಾಗಿ ಸಾವನ್ನಪ್ಪಿರುವ ದುರ್ಘಟನೆ ಭದ್ರಾವತಿ ತಾಲೂಕಿನ ಬಿಆರ್‌ಪಿ ಹೆಚ್‌ಕೆ ಜಂಕ್ಷನ್ ಬಳಿ ನಡೆದಿದೆ.
ಭದ್ರಾವತಿ ತಾಲೂಕಿನ ಕಣಗಲಸರದಿಂದ ರಂಗೇನಹಳ್ಳಿ ಆಸ್ಪತ್ರೆಗೆ ಕೂಲಿ ಮಹಿಳೆಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ ಬೀರು (42) ಎಂಬವರು ಈ ಅಪಘಾತದಲ್ಲಿ ಮೃತಪಟ್ಟವರು. ಘಟನೆ ವೇಳೆ ಬಿಆರ್‌ಪಿ ಹೆಚ್‌ಕೆ ಜಂಕ್ಷನ್‌ನ ಅಂಗಳ ಪರಮೇಶ್ವರಿ ದೇವಸ್ಥಾನದ ಸಮೀಪಕ್ಕೆ ಬಂದಾಗ, ಎದುರಿನಿಂದ ಸಾಗುತ್ತಿದ್ದ ಕೆಎ–20 ಎಎ–7676 ಕ್ರಮ ಸಂಖ್ಯೆ ಖಾಸಗಿ ಬಸ್ ಸೈಡ್ ಹಾಕಿಕೊಂಡಿದೆ.
ಬೈಕ್ ಬಸ್‌ನ ಮುಂದೆ ಸಾಗಿದ ಕೆಲವೇ ಕ್ಷಣಗಳಲ್ಲಿ, ಚಲಿಸುತ್ತಿದ್ದ ಬಸ್‌ನ ಟಯರ್ ಏಕಾಏಕಿ ಬ್ಲಾಸ್ಟ್ ಆಗಿದೆ. ಈ ವೇಳೆ ಟಯರ್‌ನಿಂದ ಹೊರಬಿದ್ದ ಕಬ್ಬಿಣದ ಚೂರೊಂದು ಬೈಕ್ ಚಾಲನೆ ಮಾಡುತ್ತಿದ್ದ ಬೀರು ಅವರ ತಲೆಗೆ ತಗುಲಿದೆ. ಪರಿಣಾಮವಾಗಿ ಬೈಕ್ ಹಿಂಬದಿ ಕುಳಿತಿದ್ದ ಲಕ್ಷ್ಮೀ ಎಂಬ ಮಹಿಳೆ ಹಾಗೂ ಬೀರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ತಕ್ಷಣವೇ ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಲಕ್ಷ್ಮೀ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಸ್ಥಿತಿಯಲ್ಲಿದ್ದ ಬೀರು ಅವರನ್ನು ಮ್ಯಾಕ್ಸ್ ಆಸ್ಪತ್ರೆಗೆ, ಬಳಿಕ ಮಣಿಪಾಲಿಗೂ ಕರೆದೊಯ್ಯಲಾಗಿತ್ತು. ನಂತರ ಮತ್ತೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾದರೂ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಬೀರು ಅವರು ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.



