
ಗಣೇಶೋತ್ಸವ , ಈದ್ ಮಿಲಾದ್ ಶಾಂತಿ ಸಭೆ | ಶಾಂತಿ ಕದಡುವವರ ವಿರುದ್ದ ಕಠಿಣ ಕ್ರಮ – ಅಡಿಷನಲ್ ಎಸ್ ಪಿ ಕಾರ್ಯಪ್ಪ ಎ ಜಿ
ಗಣೇಶೋತ್ಸವ , ಈದ್ ಮಿಲಾದ್ ಶಾಂತಿ ಸಭೆ | ಶಾಂತಿ ಕದಡುವವರ ವಿರುದ್ದ ಕಠಿಣ ಕ್ರಮ – ಅಡಿಷನಲ್ ಎಸ್ ಪಿ ಕಾರ್ಯಪ್ಪ ಎ ಜಿ ರಿಪ್ಪನ್ ಪೇಟೆ : ಗಣೇಶೋತ್ಸವ ಈದ್‌ಮಿಲಾದ್ ಹಬ್ಬಕ್ಕೆ ಡಿಜೆ ಸಂಪೂರ್ಣ ನಿಷೇಧಿಸಲಾಗಿದ್ದು, ಹಬ್ಬದ ಸಂದರ್ಭದಲ್ಲಿ ಶಾಂತಿ ಕದಡುವವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದೆಂದು ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎ ಜಿ ಕಾರ್ಯಪ್ಪ ತಿಳಿಸಿದರು. ರಿಪ್ಪನ್‌ಪೇಟೆ ಪೊಲೀಸ್ ಇಲಾಖೆಯವರು ಶಿವಮಂದಿರದಲ್ಲಿ ಆಯೋಜಿಸಲಾದ ಶಾಂತಿಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಣೇಶೋತ್ಸವ ಮತ್ತು ಈದ್‌ಮಿಲಾದ್ ಹಬ್ಬಗಳು ಶಾಂತಿ…


