
20 ರ ಹರೆಯದ ಯುವಕ ಆತ್ಮ*ಹತ್ಯೆಗೆ ಶರಣು
20 ರ ಹರೆಯದ ಯುವಕ ಆತ್ಮ*ಹತ್ಯೆಗೆ ಶರಣು ಶಿವಮೊಗ್ಗ, ಸೆ.29: ನಗರದ ಜಯನಗರ ಬಡಾವಣೆಯಲ್ಲಿ 20 ವರ್ಷದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ. ಜಯನಗರ ಐದನೇ ತಿರುವಿನ ನಿವಾಸಿ ನೈಜಿಲ್ (20) ಎಂಬ ಯುವಕನೇ ಮೃತ. ಡಿಪ್ಲೊಮಾ ಪೂರೈಸಿದ ಬಳಿಕ ಬೆಂಗಳೂರಿನಲ್ಲಿ ಮುಂದಿನ ಕೋರ್ಸ್ ಕಲಿಯುತ್ತಿದ್ದ ಆತ, ಹಬ್ಬದ ಪ್ರಯುಕ್ತ ಊರಿಗೆ ಬಂದಿದ್ದನು. ಬೆಳಿಗ್ಗೆ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಮೃತ ನೈಜಿಲ್…


