ನಕಲಿ ಅಥವಾ ತಜ್ಞರಲ್ಲದ ಚರ್ಮವೈದ್ಯರಿಂದ ದೂರವಿರಿ – ಚರ್ಮ ವೈದ್ಯರ ಸಂಘದ ಮನವಿ
ಶಿವಮೊಗ್ಗ: ಯಾವುದೇ ಚರ್ಮ ಚಿಕಿತ್ಸೆ ಪಡೆಯುವ ಮೊದಲು ವೈದ್ಯರ ಚರ್ಮರೋಗ ಪದವಿ ಮತ್ತು (kmc)ವೈದ್ಯಕೀಯ ಮಂಡಳಿಯ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಬೇಕೆಂದು ಸಹ್ಯಾದ್ರಿ ಡೆರ್ಮಾ ಅಸೋಸಿಯೇಶನ್ ಮನವಿ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಪ್ರೊ. ಡಾ!! ದಾದಾ ಪೀರ್, ಚರ್ಮ ರೋಗದ ಬಗ್ಗೆ ಸಾರ್ವಜನಿಕ ಜಾಗೃತಿ ಅಗತ್ಯವಾಗಿದೆ. ಚರ್ಮರೋಗ ವಿಭಾಗದಲ್ಲಿ ಅನಧಿಕೃತ
ಮತ್ತು ನಕಲಿ ವೈದ್ಯಕೀಯ ಚಿಕಿತ್ಸೆ ತಡೆಗಟ್ಟುವುದು ಮುಖ್ಯವಾಹಿದೆ ಎಂದರು.
ಜಿಲ್ಲೆಯಲ್ಲಿ ನಕಲಿ ಚರ್ಮ ವೈದ್ಯರು ಅಥವಾ ಅತ್ಹತೆ ಇಲ್ಲದ ವೈದ್ಯರು ಹೆಚ್ಚುತ್ತಿದ್ದು, ಚಿಕಿತ್ಸೆ ನೀಡಿ ಚರ್ಮರೋಗಕ್ಕೆ ಕಾರಣರಾಗುತ್ತಿದ್ದಾರೆ. ಅವರಿಂದ ಗುಣವಾಗದವರು ತಮ್ಮಲ್ಲಿ ಬರುತ್ತಿದ್ದಾರೆ. ಬ್ಯುಟಿಶಿಯನ್ಸ್ ಸಹ ಫೇಸಿಯಲ್ ಚಿಕಿತ್ಸೆ ನೀಡುತ್ತಿದ್ದಾರೆ. ಇದು ಕಾನೂನುಬಾಹಿರ ಕೆಲಸ ಎಂದರು.
ತಜ್ಞರಲ್ಲದ ವ್ಯಕ್ತಿಗಳು ಚರ್ಮರೋಗ ಮತ್ತು ಸೌಂದರ್ಯ ಚಿಕಿತ್ಸೆ ನಡೆಸುತ್ತಿರುವ ಘಟನೆಗಳು ದಿನೇದಿನೇ ಹೆಚ್ಚುತ್ತಿದ್ದು, ಇದು ಸಾರ್ವಜನಿಕರ ಆರೋಗ್ಯಕ್ಕೆ ಗಂಭೀರ ಆತಂಕ ಉಂಟುಮಾಡುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಚರ್ಮರೋಗ ತಜ್ಞರು (Dermatologist) ಎಂದರೆ MBBS ನಂತರ ಚರ್ಮರೋಗದಲ್ಲಿ ಮಾನ್ಯತೆ ಪಡೆದ ಸ್ನಾತಕೋತ್ತರ ಪದವಿ (MD/DNB/DVD/DDVL) ಪೂರ್ಣಗೊಳಿಸಿದ ವೈದ್ಯರು ಇಂತಹ ಅರ್ಹತೆ ಹೊಂದಿದ ವೈದ್ಯರು ಮಾತ್ರ ಚರ್ಮ, ಕೂದಲು ಮತ್ತು ಉಗುರುಗಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ಗುರುತಿಸಿ ಚಿಕಿತ್ಸೆ ನೀಡುವುದಕ್ಕೂ, ಕಾಸೆಟಿಕ್/ಲೇಸರ್ ವಿಧಾನಗಳನ್ನು, ಕೂದಲು ಕಸಿ ಶಸ್ತ್ರ ಚಿಕಿತ್ಸೆ ಗಳನ್ನು ನಡೆಸುವುದಕ್ಕೆ ಕಾನೂನುಬದ್ಧ ಹಕ್ಕು ಹೊಂದಿರುತ್ತಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಅನಧಿಕೃತ (ನಕಲಿ )ವ್ಯಕ್ತಿಗಳು – ಅಲೋಪಥಿ ಅಲ್ಲದ ಚಿಕಿತ್ಸಕರು, ತರಬೇತಿ /ಪರವಾನಗಿ ಇಲ್ಲದ, ಅನರ್ಹ ಬ್ಯೂಟಿ ಕ್ಲಿನಿಕ್ ಸಿಬ್ಬಂದಿ – ಲೇಸರ್ ಕೂದಲು ತೆಗೆದುಹಾಕುವುದು, ಕೇಮಿಕಲ್ ಪೀಲ್, ಮೈಕ್ರೋನಿಡ್ಡಿಂಗ್, PRP, ಬೋಟಾಕ್ಸ್, ಫಿಲ್ಲರ್ ಹಾಗೂ ಮಚ್ಚೆ ತೆಗೆದುಹಾಕುವಂತಹ ಚಿಕಿತ್ಸೆಗಳು ಅನಧಿಕೃತವಾಗಿ ಮಾಡುತ್ತಿದ್ದುದು ಕಂಡುಬರುತ್ತಿದೆ.ಇಂತಹ ಸುರಕ್ಷತೆರಹಿತ/ಅವೈಜ್ಞಾನಿಕ ವಿಧಾನಗಳಿಂದ ಗಾಯದ ಗುಡ್ಡೆಗಳು, ಸೋಂಕುಗಳು, ವರ್ಣಕದ ತೀವು ಬದಲಾವಣೆ, ಅಲರ್ಜಿಗಳು ಹಾಗೂ ಗಂಭೀರ/ಜೀವ ಹಾನಿ ಅಡ್ಡಪರಿಣಾಮಗಳು ಕಂಡುಬರುತ್ತಿವೆ ಎಂದರು.
ಸಾರ್ವಜನಿಕರು ಅಧಿಕೃತ ವೈದ್ಯರ ಬಳಿಮಾತ್ರ ಚಿಕಿತ್ಸೆ ಪಡೆಯಬೇಕೆಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಡಾ!! ಮಂಜುನಾಥ, ಡಾ!! ಸುಮಲತಾ, ಡಾ!! ಶಾಂತಲಾ ಮೊದಲಾದವರಿದ್ದರು.



