ತೋಟದ ಹುನಗುಂದ ಗ್ರಾಮದೇವಿ ದೇವಸ್ಥಾನದಲ್ಲಿ ಭವ್ಯ ಕಳಸಾರೋಹಣ – ಭಕ್ತಿ ಮಯ ವಾತಾವರಣ
ಬಂಕಾಪುರ್: ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತೋಟದ ಹುನಗುಂದ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಶ್ರೀ ಗ್ರಾಮದೇವಿ ಹೊಸ ದೇವಾಲಯದಲ್ಲಿ ಸೋಮವಾರ ಭಕ್ತಿ ಭಾವದಿಂದ ಕಳಸಾರೋಹಣ ಮತ್ತು ಪ್ರಾಣ ಪ್ರತಿಷ್ಠಾಪನೆಯ ವೈದಿಕ ವಿಧಿಗಳು ಜರುಗಿದವು.
ಶ್ರೀ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ, ಸೋಂದಾ ಸ್ವರ್ಣವಲ್ಲಿ ಮಠದ ಆಸ್ಥಾನ ವಿದ್ವಾಂಸ ಬಾಲಚಂದ್ರ ಶಾಸ್ತ್ರಿಗಳ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಸುಗಮವಾಗಿ ನೆರವೇರಿದವು. ಹೊಸ ದೇವಸ್ಥಾನದ ಉದ್ಘಾಟನಾ ವೈಭವದಿಂದ ಊರಿನಾದ್ಯಂತ ಹರ್ಷೋದ್ಗಾರದ ವಾತಾವರಣ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಐದು ದಿನಗಳ ಧರ್ಮ ಜಾಗೃತಿ ಸಭೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಹಾಸ್ಯ ರಸಮಂಜರಿ ಆಯೋಜನೆ ಮಾಡಲಾಗಿದೆ.
ವರದಿ: ನಿಂಗರಾಜ್ ಕುಡಲ್, ಹಾವೇರಿ ಜಿಲ್ಲೆ, ಬಂಕಾಪುರ್



