ರಿಪ್ಪನ್ ಪೇಟೆ | ಜುಮ್ಮಾ ಮಸೀದಿ ಆಡಳಿತ ಸಮಿತಿ ಸದಸ್ಯ ಮೊಹಮ್ಮದ್ ರಫ಼ಿ ಹೃದಯಾಘಾತದಿಂದ ನಿಧನ
ರಿಪ್ಪನ್ ಪೇಟೆ : ಪಟ್ಟಣದ ಮಹಿಯುದ್ದೀನ್ ಜುಮ್ಮಾ ಮಸೀದಿ ಆಡಳಿತ ಸಮಿತಿಯ ಸಕ್ರೀಯ ಸದಸ್ಯರು ಗವಟೂರು ಶ್ರೀರಾಮನಗರ ನಿವಾಸಿಯಾದ ಮೊಹಮ್ಮದ್ ರಫ಼ಿ (54) ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಶ್ರೀರಾಮನಗರ ನಿವಾಸದಲ್ಲಿ ಶುಕ್ರವಾರ ತಡರಾತ್ರಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು ಆದರೆ ಆ ಸಮಯದಲ್ಲಿ ವೈದ್ಯರು ಇಲ್ಲದ ಕಾರಣ ತತ್ತಕ್ಷಣ ಆಂಬುಲೆನ್ಸ್ ಮೂಲಕ ಶಿವಮೊಗ್ಗದ ನಂಜಪ್ಪ ಲೈಪ್ ಕೇರ್ ಗೆ ರವಾನಿಸಲಾಗಿತ್ತು ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗುತ್ತಿದೆ.
ಮೃತರು ಪತ್ನಿ , ಮೂವರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.



