Bike accident – Engineering student from Hosanagar dies in Bengaluru
ಬೈಕ್ ಅಪಘಾತ – ಬೆಂಗಳೂರಿನಲ್ಲಿ ಹೊಸನಗರ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು
Bike accident – Engineering student from Hosanagar dies in Bengaluru
Bike accident – Engineering student from Hosanagar dies in Bengaluru
ಹೊಸನಗರ : ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಹೊಸನಗರ ಮೂಲದ ಯುವಕನೊಬ್ಬ ಬೈಕ್ ಅಪಘಾತದಲ್ಲಿ ಮೃತಪಟ್ಟಿರುವ ದುರ್ಘಟನೆ ಬುಧವಾರ ನಡೆದಿದೆ.
ಮೃತರನ್ನು ಹೊಸನಗರದ ಕೊಡಚಾದ್ರಿ ಬಸ್ ಮಾಲೀಕ ಪಿ. ಮನೋಹರ್ ಅವರ ಸಹೋದರ ಸುರೇಶ್ ಅವರ ಪುತ್ರ ನಾಗಭೂಷಣ್ (21) ಎಂದು ಗುರುತಿಸಲಾಗಿದೆ.
ನಾಗಭೂಷಣ್ ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿದ್ದು, ವಿದ್ಯಾಭ್ಯಾಸದ ಜೊತೆಗೆ ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಂಡಿದ್ದ ಯುವ ಪ್ರತಿಭೆ ಆಗಿದ್ದಾನೆ. ಬುಧವಾರ ಬೈಕ್‌ನಲ್ಲಿ ಸಂಚರಿಸುವ ವೇಳೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಾಗಭೂಷಣ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಸುದ್ದಿ ತಿಳಿಯುತಿದ್ದಂತೆ ಕುಟುಂಬದವರು ಹಾಗೂ ಸಂಬಂಧಿಕರಲ್ಲಿ ಆಘಾತ ಮತ್ತು ಶೋಕದ ವಾತಾವರಣ ಆವರಿಸಿತು. ಮೃತ ನಾಗಭೂಷಣ್ ತಂದೆ ಸುರೇಶ್, ತಾಯಿ ವರಲಕ್ಷ್ಮೀ, ಸಹೋದರಿ ಸೇರಿದಂತೆ ಚಿಕ್ಕಪ್ಪ, ಚಿಕ್ಕಮ್ಮ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತದೇಹವನ್ನು ಗುರುವಾರ ಹೊಸನಗರದ ಶಿವಮೊಗ್ಗ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ತರಲಾಗಿದ್ದು, ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಸ್ನೇಹಿತರು, ಬಂಧುಗಳು, ಸ್ಥಳೀಯರು ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಮಾರಿಗುಡ್ಡದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಯುವ ವಯಸ್ಸಿನಲ್ಲೇ ಭರವಸೆಯ ವಿದ್ಯಾರ್ಥಿಯನ್ನು ಕಳೆದುಕೊಂಡ ಕುಟುಂಬದ ದುಃಖಕ್ಕೆ ಊರಿನವರು ಸಂತಾಪ ಸೂಚಿಸಿದ್ದು, ಈ ದುರಂತ ರಸ್ತೆ ಸುರಕ್ಷತೆಯ ಅಗತ್ಯತೆಯನ್ನು ಮತ್ತೆ ಒತ್ತಿ ಹೇಳುವಂತಾಗಿದೆ.




