Headlines

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಹುಲ್ಲಿನ ಬಣವೆ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಹುಲ್ಲಿನ ಬಣವೆ

A haystack caught fire due to an electrical short circuit.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹುಲಿನ ಬಣವೆ ಹೊತ್ತಿ ಉರಿದ ಘಟನೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪಟ್ಟಣದ ಕೆಳಗಿನ ಕೆರೆಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸೇರಿದ ಗದ್ದೆಯಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್ ಹಾಗೂ ಪರಿವರ್ತಕದಿಂದ ಏಕಾಏಕಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಅದರ ಪರಿಣಾಮವಾಗಿ ಗದ್ದೆಯಲ್ಲಿ ಸಂಗ್ರಹಿಸಿಟ್ಟಿದ್ದ ಹುಲ್ಲಿನ ಬಣವೆ ಬೆಂಕಿಗೆ ಆಹುತಿಯಾಗಿದೆ.

ಬೆಂಕಿಯ ಜ್ವಾಲೆಗಳು ವೇಗವಾಗಿ ವ್ಯಾಪಿಸಿದ ಕಾರಣ ಸುತ್ತಮುತ್ತಲಿನ ಹೊಲಗಳು ಹಾಗೂ ವಾಸಸ್ಥಾನಗಳಿಗೆ ಅಪಾಯ ಉಂಟಾಗುವ ಭೀತಿ ಮೂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು,ಗ್ರಾಪಂ ಸಿಬ್ಬಂದಿಗಳು , ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು , ಗ್ರಾಮಸ್ಥರ ಸಹಕಾರದೊಂದಿಗೆ ಬೆಂಕಿ ನಂದಿಸಲು ಪ್ರಯತ್ನಿಸಿದರು. ನೀರು ಹಾಗೂ ಮಣ್ಣನ್ನು ಬಳಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.

ನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು ಘಟನೆ ನಡೆದ ಸುತ್ತಲೂ ನೀರು ಹರಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಿದರು.

ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಪರಮೇಶ್ವರ್ , ಉಮೇಶ್ ,ಕಂದಾಯ ಇಲಾಖೆಯ ಸಿಬ್ಬಂದಿಗಳಾದ ಮಂಜುನಾಥ್ , ಪ್ರವೀಣ್ ,ಮೆಸ್ಕಾಂ ಇಲಾಖೆಯ ಪ್ರಜ್ವಲ್ , ಕೃಷ್ಣಕುಮಾರ್ , ಮಲ್ಲಪ್ಪ ಗ್ರಾಪಂ ಸಿಬ್ಬಂದಿಗಳಾದ ನಾಗೇಶ್ , ರಾಜೇಶ್ ಮತ್ತು ಅಗ್ನಿಶಾಮಕ ದಳದ ಠಾಣಾಧಿಕಾರಿ ಆನಂದಪ್ಪ ಎನ್ ನೇತ್ರತ್ವದ ಸಿಬ್ಬಂದಿಗಳಾದ ರಾಜೇಶ್ ಕೆ ಹೆಚ್ , ರವೀಂದ್ರ ಕೆ , ಮಂಜುನಾಥ್ ಬಿ , ಅಶ್ಪಕ್ ಇದ್ದರು.

Exit mobile version