POSTMANNEWS

ನೈಜ ಸುದ್ದಿ ನೇರ ಬಿತ್ತರ..

ಟ್ಯಾಂಕರ್ ಲಾರಿ – ಬೈಕ್ ನಡುವೆ ಭೀಕರ ಅಪಘಾತ ; ಬೈಕ್ ಸವಾರ ಸಾವು..!

ಟ್ಯಾಂಕರ್ ಲಾರಿ – ಬೈಕ್ ನಡುವೆ ಭೀಕರ ಅಪಘಾತ ; ಬೈಕ್ ಸವಾರ ಸಾವು..!

ತೀರ್ಥಹಳ್ಳಿ : ತಾಲೂಕಿನ ಬೆಜ್ಜವಳ್ಳಿಯ ಮುಖ್ಯರಸ್ತೆಯಲ್ಲಿ ಬೈಕ್ ಸವಾರ ಹಾಗೂ ಡಿಸೇಲ್  ಟ್ಯಾಂಕರ್  ಲಾರಿ ನಡುವೆ ಬೀಕರ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅರಣ್ಯ ಇಲಾಖೆಯಲ್ಲಿ ಕ್ಷೇಮಾಭಿವೃದ್ಧಿ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 59 ವರ್ಷದ ವೆಂಕಟೇಶ್ ಎನ್ನುವ ಕುಡುವಳ್ಳಿ ಹಿರೇಬೇಯ್ಲಿನ‌ ವ್ಯಕ್ತಿ ಮೃತ ದುರ್ದೇವಿ.   ಡಿಸೇಲ್ ಟ್ಯಾಂಕರ್ ಲಾರಿ ಬೆಜ್ಜವಳ್ಳಿ ಸಮೀಪ ಬಂದಾಗ  ಅರಣ್ಯ ಇಲಾಖೆಯ ನೌಕರ ಎದುರಾದಾಗ ಈ ಅಪಘಾತ ಸಂಭವಿಸಿದೆ.

ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

About The Author

Exit mobile version