ಪದವಿ ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆಗೆ ಶರಣು..!
ಪ್ರಾಪ್ತಿ (21) ಕಾಲೇಜಿನಲ್ಲಿ ತೃತೀಯ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದರು. ವಿದ್ಯಾಭ್ಯಾಸದಲ್ಲಿ ಸದಾ ಮುಂದಿದ್ದ, ಮಿತವ್ಯಯಿ ಹಾಗೂ ಚುರುಕು ಸ್ವಭಾವದ ವಿದ್ಯಾರ್ಥಿನಿ ಪ್ರಾಪ್ತಿ, ನವೆಂಬರ್ 14ರ ಬೆಳಿಗ್ಗೆ ಸುಮಾರು 4:00 ಗಂಟೆಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ತೀರ್ಥಹಳ್ಳಿ – ಬಾಳೆಬೈಲು ಕಾಲೇಜು
ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ
ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಸಮೀಪದ
ದಬ್ಬಣ ಗದ್ದೆ ಸಮೀಪದ ಬಚ್ಚನಕೊಡಿಗೆ ರಮೇಶ್
ಆಚಾರ್ ಎಂಬುವರ ಪುತ್ರಿ ಪ್ರಾಪ್ತಿ (21) ಎಂಬ
ಯುವತಿ ಬಾಳೆಬೈಲು ಕಾಲೇಜಿನಲ್ಲಿ ತೃತೀಯ
ಬಿಬಿಎ ವ್ಯಾಸಂಗ ಮಾಡುತ್ತಿದ್ದಳು.
ನವೆಂಬರ್ 14ರಂದು ಬೆಳಿಗ್ಗೆ 4:00 ಸಮಯದಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ವ್ಯಾಸಂಗದಲ್ಲಿ ಮುಂದಿದ್ದ ಪ್ರಾಪ್ತಿಯ ಸಾವಿನ ಸುದ್ದಿ ತಿಳಿದು ಕಾಲೇಜಿನಲ್ಲಿ ನೀರವ ಮೌನ ಆವರಿಸಿದೆ.




