Headlines

ರಿಪ್ಪನ್ ಪೇಟೆ |ಕೆಲಸಕ್ಕೆ ತೆರಳಿದ್ದ ಪೋಸ್ಟ್ ಮಾಸ್ಟರ್ ನಾಪತ್ತೆ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಟೆತಾರಿಗ ನಿವಾಸಿಯಾದ ಸಂತೋಷ್ ಕುಮಾರ್ ಬಿನ್ ಕೇಶವ (38) ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದು ಇವರ ಪತ್ತೆಗೆ ಸಹಕರಿಸುವಂತೆ ಪೊಲೀಸರು ಮನವಿ ಸಲ್ಲಿಸಿದ್ದಾರೆ.

ಸಂತೋಷ್ ಕೋಡೂರು ಪೋಸ್ಟ್ ಆಫೀಸ್ ನಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದು ನ. 05 ರಂದು ಮನೆಯಿಂದ ತೆರಳಿದ್ದು ಈವರೆಗೂ ಹಿಂದಿರುಗಿರುವುದಿಲ್ಲ ಈ ಬಗ್ಗೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇವರ ಕುರಿತು ಯಾವುದೇ ಸುಳಿವು ಇದ್ದಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ (ಮೊ‌: 8277983045) ಮಾಹಿತಿ ಸಲ್ಲಿಸುವಂತೆ ಪಿಎಸ್ಐ ರಾಜುರೆಡ್ಡಿ ಕೋರಿದ್ದಾರೆ.

Exit mobile version