Headlines

ಅಂಧ ಮಹಿಳೆಯರ T20 ಚಾಂಪಿಯನ್ ತಂಡದ ರಿಪ್ಪನ್ ಪೇಟೆಯ ಕಾವ್ಯಾಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ

ಅಂಧ ಮಹಿಳೆಯರ T20 ಚಾಂಪಿಯನ್ ತಂಡದ ರಿಪ್ಪನ್ ಪೇಟೆಯ ಕಾವ್ಯಾಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ

ಟಿ20 ಅಂಧರ ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ಭಾರತದ ಮಹಿಳಾ ಅಂದರ ತಂಡವು ಗೆಲುವು ಸಾಧಿಸಿತ್ತು. ಈ ಗೆಲುವಿಗೆ ಹರ್ಷವನ್ನು ರಿಪ್ಪನ್ ಪೇಟೆಯ ಕಾವ್ಯಾ.ವಿ ಕೂಡ ಕಾರಣ ಎಂಬ ವಿಷಯ ತಿಳಿದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವಂತ ಅವರು, ಭಾರತದ ಅಂಧರ ಮಹಿಳಾ ಕ್ರಿಕೆಟ್ ತಂಡ ಮೊದಲ ಬಾರಿಗೆ ನಡೆದ ಮಹಿಳಾ ಬ್ಲೈಂಡ್ ಟಿ20 ಪಂದ್ಯಾವಳಿಯಲ್ಲಿ ಜಯ ಸಾಧಿಸಿದೆ. ಈ ಜಯವು ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ.

ಈ ಜಯಶೀಲ ವಿಶ್ವ ಕಪ್ ತಂಡದಲ್ಲಿ ಕರ್ನಾಟಕದಿಂದ ಮೂವರು ಆಟಗಾರ್ತಿಯರು ಇದ್ದಾರೆ. ಅವರಲ್ಲಿ ರಿಪ್ಪನ್ ಪೇಟೆಯ ಪ್ರತಿಭೆ ಕಾವ್ಯ.ವಿ ತನ್ನ ಆಲ್ ರೌಂಡರ್ ಮೂಲಕ ತಂಡದ ಗೆಲುವಿಗೆ ಸಖತ್ ಸಾಥ್ ನೀಡಿದ್ದಾರೆ. ಟಿ20 ಅಂಧರ ವಿಶ್ವಕಪ್ ಗೆಲುವಿಗೆ ಕಾರಣವಾದಂತ ನನ್ನ ಸ್ವ ಕ್ಷೇತ್ರದ ಕಾವ್ಯಾ.ವಿ ಆಚಾರ್ ರವರಿಗೆ ಕೃತಜ್ಞತಾ ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

Exit mobile version