Headlines

ವಿದೇಶದಿಂದ ತಾಯ್ನಾಡಿಗೆ ಬಂದ ಎರಡು ದಿನಗಳಲ್ಲಿ ವಿಧಿಯ ಆಟ – ಹೃದಯಾಘಾತದಿಂದ ಯುವಕ ಸಾವು

Fate strikes within two days of returning to the homeland from abroad – young man dies of heart attack

ವಿದೇಶದಿಂದ ತಾಯ್ನಾಡಿಗೆ ಬಂದ ಎರಡು ದಿನಗಳಲ್ಲಿ ವಿಧಿಯ ಆಟ – ಹೃದಯಾಘಾತದಿಂದ ಯುವಕ ಸಾವು

ರಿಪ್ಪನ್ ಪೇಟೆ : ಇಲ್ಲಿನ ಮದೀನಾ ಕಾಲೋನಿಯ ಯುವಕನೊಬ್ಬ ತೀವ್ರ ಹೃದಯಾಘಾತದಿಂದ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಇಮ್ರಾನ್ (36) ಮೃತಪಟ್ಟ ದುರ್ಧೈವಿಯಾಗಿದ್ದಾರೆ.

ಕಳೆದ ಮೂರು ವರ್ಷದಿಂದ ಸೌದಿ ಅರೇಬಿಯಾದಲ್ಲಿ ಚಾಲಕ ವೃತ್ತಿ ನಿರ್ವಹಿಸುತಿದ್ದ ಇಮ್ರಾನ್ ಕಳೆದ ಎರಡು ದಿನಗಳ ಹಿಂದೆ ಊರಿಗೆ ಮರಳಿದ್ದನು.

ಇಂದು ಮುಂಜಾನೆ ಸ್ವಗೃಹದಲ್ಲಿ ತೀವ್ರವಾಗಿ ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಮರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ.

ಮೃತರು ಪತ್ನಿ , ಇಬ್ಬರು ಪುತ್ರಿಯರು , ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಇಂದು ಸಂಜೆ ಸಾಗರ ರಸ್ತೆಯ ಮುಸ್ಲಿಂ ಖಬರ್ ಸ್ತಾನ್ ನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Fate strikes within two days of returning to the homeland from abroad – young man dies of heart attack

Exit mobile version