Headlines

ಟಾಂ ಟಾಂ ಶಾಸಕರು ಸಮಾಧಾನದಿಂದ ವರ್ತಿಸಲಿ – ಕಾಂಗ್ರೆಸ್ ಮುಖಂಡ ಎಚ್ ಸಿ ಯೋಗೇಶ್ ಮನವಿ

ಟಾಂ ಟಾಂ ಶಾಸಕರು ಸಮಾಧಾನದಿಂದ ವರ್ತಿಸಲಿ – ಕಾಂಗ್ರೆಸ್ ಮುಖಂಡ ಎಚ್ ಸಿ ಯೋಗೇಶ್  ಮನವಿ

ಶಿವಮೊಗ್ಗ:  ಧರ್ಮಕ್ಕಿಂತ ಕಾನೂನೇ ಮುಖ್ಯ. ಶಾಂತಿಗಾಗಿ ಹೋರಾಟ ಮಾಡಬೇಕೆ ಹೊರತು ನಗರ ವಾಸಿಗಳ  ಮನವನ್ನು ಕದಡುವ ಕೆಲಸವನ್ನಲ್ಲ. ಆರ್ ಎಂಲ್ ನಗರದಲ್ಲಿ ನಡೆದ ಹಲ್ಲೆಯನ್ನು ಕೋಮುಬಣ್ಣಕ್ಕೆ ತಿರುಗಿಸಿ, ಊರಲ್ಲೆಲ್ಲ ಟಾಂ ಟಾಂ ಹೊಡೆದು  ಲಾಭ ಪಡೆಯಲು ಮುಂದಾದ ಶಾಸಕರು ಒಂದು ಕೋಮಿನ ತುಷ್ಟೀಕರಣಕ್ಕೆ ಮುಂದಾಗಿದ್ದಾರೆ. ಹೀಗೆ ಮಾಡುವ ಮುನ್ನ ತಾಳ್ಮೆ ವಹಿಸಬೇಕಿತ್ತೆಂದು ಕಾಂಗ್ರೆಸ್ ಮುಖಂಡ ಎಚ್ ಸಿ ಯೋಗೇಶ್ ಹೇಳಿದ್ದಾರೆ.

ಶುಕ್ರವಾರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಬಸಪ್ಪ ನಗರದ ಮೇಲ್ಸೇತುವೆಯಲ್ಲಿ ಖಾಸಗಿ ಬಸ್ ಡಿಕ್ಕಿಯಾಗಿ ಒಬ್ಬ ಯುವಕ ಅಪಘಾತದಲ್ಲಿ ಸಾವನ್ನಪ್ಪಿದಾಗ ಯುವಕ ಬೇರೆ ಧರ್ಮಕ್ಕೆ ಸೇರಿದವನು ಎಂಬ ಒಂದೇ ಕಾರಣಕ್ಕೆ ಅವರ ಮನೆಗೆ ಹೋಗಿ ಸಾಂತ್ವನ ಹೇಳಲ್ಲ. ಗಾಯಗೊಂಡವರನ್ನು ವಿಚಾರಿಸಿಯೂ ಇಲ್ಲ. ಯಾಕೆ ಈ ಅಧರ್ಮ ಎಂದು ಪ್ರಶ್ನಿಸಿದರು.


ಶಾಸಕ ಚನ್ನಬಸಪ್ಪ ಅವರಿಗೆ ತಾಳ್ಮೆ, ಸಹನೆ ಕಡಿಮೆ ಇದೆ. ನಗರದಲ್ಲಿ ಯಾವುದೇ ರೀತಿಯ ಘಟನೆಯಾದರೂ ಯೋಚನೆ ಮಾಡದೇ ಅದನ್ನು ಕೋಮು ಬಣ್ಣಕ್ಕೆ ತಿರುಗಿಸಿಬಿಡುತ್ತಾರೆ. ಧರ್ಮದ ಲೇಪನ ಹಚ್ಚುತ್ತಾರೆ. ಇದಕ್ಕೆ ಹರೀಶ್ ಹಲ್ಲೆ ಗಲಾಟೆಯೇ ಇದಕ್ಕೆ ಸಾಕ್ಷಿ. ಈ ಹಲ್ಲೆಯನ್ನು ಒಂದು ಕೋಮಿನವರು ಮಾಡಿದ್ದಾರೆ ಪ್ರಚಾರ ಮಾಡಲಾಯಿತು. 

ಶಾಸಕ ಚನ್ನಬಸಪ್ಪ ಈ ಘಟನೆ ಹೇಗೆ ನಡೆಯಿತು, ಯಾರು ಮಾಡಿದ್ದಾರೆ ಎಂದು ಪೂರ್ವಾಪರ ವಿಚಾರಿಸದೆ ಪೂರ್ವಗ್ರಹಪೀಡಿತರಾಗಿ ಈ ಹಲ್ಲೆಯನ್ನು ಮುಸ್ಲಿಂ ಧರ್ಮದವರೇ ಮಾಡಿದ್ದಾರೆ ಎಂದು ಹರೀಶ್‌ನನ್ನೇ ಬಲವಂತವಾಗಿ ಪೊಲೀಸ್ ಠಾಣೆಗೆ ಕರೆಸಿ ಹೇಳಿಸಿದರು ಎಂದು ವಿವರಿಸಿದರು.
ನಿಜ ತಿಳಿದ ಮೇಲೆ ಘಟನೆಯನ್ನೇ ಬೇರೆ ಕಡೆಗೆ ತಿರುಗಿಸಿ ಗಾಂಜಾವನ್ನೇ ಪ್ರಮುಖವಾಗಿ ಬಿಂಬಿಸುತ್ತಿದ್ದಾರೆ.

ಶಾಸಕರಾದವರು ಧೈರ್ಯ ಹೇಳಬೇಕೇ ಹೊರತೂ ಇಲ್ಲಿರುವ ಹಿಂದೂಗಳು ಮುಸ್ಲೀಮರಿಂದಾಗಿ ಊರು ಬಿಟ್ಟು ಹೋಗುತ್ತಾರೆ ಎಂದು ಹೇಳಬಾರದು. ಯಾವ ಹಿಂದೂಗಳು ಶಿವಮೊಗ್ಗ ನಗರವನ್ನು ಬಿಟ್ಟು ಹೋಗಿದ್ದಾರೆ. ಯಾಕೆ ಈ ರೀತಿಯ ಸುಳ್ಳನ್ನು ಹೇಳುತ್ತಾರೆ, ಶಾಸಕರು ತಮ್ಮ ಜವಾಬ್ದಾರಿಯನ್ನು ಮರೆತಂತೆ ಕಾಣುತ್ತದೆ ಎಂದರು.

Exit mobile version