Headlines

ಕಿರಿ ವಯಸ್ಸಿನಲ್ಲಿ ಹಿರಿ ಸಾಧನೆ – ಉತ್ತರಕನ್ನಡ ಜಿಲ್ಲೆಯ ಪ್ರಥಮ ಮಹಿಳಾ ಪೈಲಟ್ ಕಾವ್ಯಶ್ರೀ ಭಟ್

ಕಿರಿ ವಯಸ್ಸಿನಲ್ಲಿ ಹಿರಿ ಸಾಧನೆ – ಉತ್ತರಕನ್ನಡ ಜಿಲ್ಲೆಯ ಪ್ರಥಮ ಮಹಿಳಾ ಪೈಲಟ್ ಕಾವ್ಯಶ್ರೀ ಭಟ್

ಉತ್ತರಕನ್ನಡ: ಹಾರಬೇಕೆನ್ನೋ ಕನಸು  ಕಾಣದೇ ಇರೋ ಹೆಣ್ಣು ಮನಸಿಲ್ಲ, ಆದರೆ ಆ ಕನಸು ಜವಾಬ್ದಾರಿಗೋ ಮರ್ಜಿಗೋ ಕುಸಿದು ಬೀಳೋದು ಇದ್ದೇ ಇದೆ. ಈ ಹುಡುಗಿ ಬರೀ ಆಗಸದಲ್ಲಿ ಹಾರಾಟ ಮಾಡಿಲ್ಲ ಬದಲಿಗೆ ಈಕೆಯ ಕನಸಿನ ರೆಕ್ಕೆಗಳು ಕೋಟಿ ಕಂಗಳಿಗೆ  ಸ್ಫೂರ್ತಿಯಾಗಿದೆ.

ಜಪ ಮಾಡೋರ ಮಗಳ ಕೈಗೆ ಬಂತು ಜಾಯ್‌ಸ್ಟಿಕ್ :

ಅಪ್ಪ ಪುಟ್ಟ ಮಗುವನ್ನು ಎತ್ತಿಕೊಂಡು ಆಕಾಶದಲ್ಲಿ ವಿಮಾನ ಹಾರಾಡುತ್ತಿರುವುದನ್ನು ತೋರಿಸುತ್ತಾ ʼನೋಡು, ನೀನು ದೊಡ್ಡವಳಾದ ಮೇಲೆ ಹೀಗೆ ವಿಮಾನ ಹಾರಿಸುʼ ಎಂದು ಬಾಲ್ಯದಲ್ಲಿ ತಂದೆ ಹೇಳಿದ ಮಾತನ್ನೇ ತನ್ನ ಜೀವನದ ಗುರಿಯಾಗಿಸಿ ಇಂದು ಜಿಲ್ಲೆಯ ಪ್ರಥಮ ಮಹಿಳಾ ಪೈಲಟ್ ಆಗಿ ಹೊರಹೊಮ್ಮಿದ ಪುಣ್ಯಕ್ಷೇತ್ರ ಗೋಕರ್ಣದ ಹುಡುಗಿ, ವೈದಿಕ ಮನೆತನದ ಯುವತಿಯ ಸಾಹಸಗಾಥೆ ಇದು.

ಇಲ್ಲಿನ ಕೂರ್ಸೆ ಮನೆತನದ ಕಾವ್ಯಶ್ರೀ ಕೂರ್ಸೆ (ಭಟ್ಟ) 21ನೇ ವಯಸ್ಸಿನಲ್ಲಿ ಕಮರ್ಷಿಯಲ್ ಪೈಲೆಟ್ ಲೈಸನ್ಸಸ್ ಪಡೆದು ತಮ್ಮ ಜೀವನದ ಮಹತ್ವದ ಗುರಿಯನ್ನು ಸಾಧಿಸಿ ಊರಿಗೆ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಗೋವಾದಲ್ಲಿ ವೈದಿಕ ವೃತ್ತಿಯಲ್ಲಿರುವ ಲಕ್ಷ್ಮೀನಾರಾಯಣ ಕೂರ್ಸೆ ಹಾಗೂ ಶ್ಯಾಮಲಾರವರ ದಂಪತಿಗಳ ಪುತ್ರಿಯಾಗಿರುವ ಕಾವ್ಯಶ್ರೀ ಪ್ರಾಥಮಿಕ, ಮಾಧ್ಯಮಿಕ, ಪದವಿಪೂರ್ವ ಶಿಕ್ಷಣವನ್ನು ಗೋವಾ ರಾಜ್ಯದಲ್ಲಿ ಮುಗಿಸಿ ಮಹಾರಾಷ್ಟ್ರದ ಬಾರಾಮತಿ ವಿಮಾನ ತರಬೇತಿ ಕೇಂದ್ರದಲ್ಲಿ ಒಟ್ಟು 200 ಗಂಟೆಗಳ ಹಾರಾಟ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

Exit mobile version