ರಿಪ್ಪನ್ಪೇಟೆಯಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಅದ್ದೂರಿ ಮೆರವಣಿಗೆ | ಮನಸೆಳೆದ ಜಾನಪದ ಕಲಾ ಮೆರುಗು
ರಿಪ್ಪನ್ಪೇಟೆಯಲ್ಲಿ ಇಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಸ್ತೂರಿ ಕನ್ನಡ ಸಂಘದ ವತಿಯಿಂದ ಕನ್ನಡ ತಾಯಿ ಭುವನೇಶ್ವರಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯವಾಗಿ ನಡೆಯಿತು. ಕನ್ನಡ ತಾಯಿ ಭುವನೇಶ್ವರಿಯ ಮೆರವಣಿಗೆಗೆ ಪಟ್ಟಣದ ಪಿಎಸ್ಐ ರಾಜುರೆಡ್ಡಿ ಚಾಲನೆ ನೀಡಿದರು. ನೂರಾರು ಪುಟಾಣಿ ಮಕ್ಕಳು ಭುವನೇಶ್ವರಿ ವೇಷದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿ ಜನರ ಮನಸೆಳೆದರು. ಡೊಳ್ಳು ಕುಣಿತ, ಪಟಾಕಿ ಪ್ರದರ್ಶನಗಳು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದವು. “ಜೈ ಕನ್ನಡ ಮಾತೆ” ಘೋಷಣೆಗಳೊಂದಿಗೆ ಪಟ್ಟಣದ ಬೀದಿಗಳು ಕನ್ನಡದ ಬಣ್ಣದಲ್ಲಿ ಮಿಂದಳಿದವು.
ಕನ್ನಡ ಬಾವುಟಗಳ ಅಲಂಕಾರದಿಂದ ಸಂಪೂರ್ಣ ರಿಪ್ಪನ್ಪೇಟೆ ಚೈತನ್ಯದಿಂದ ಹೊಳೆಯಿತು. ವಿದ್ಯಾರ್ಥಿಗಳಿಂದ ಕನ್ನಡ ನುಡಿಗಟ್ಟುಗಳ ಪಥಸಂಚಲನ, ಹಾಗೂ ಜಾನಪದ ಕಲಾವಿದರಿಂದ ಜಾನಪದ ಕಲಾ ಮೆರವಣಿಗೆ ನಡೆದಿತು. ಮೆರವಣಿಗೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಗಮನಾರ್ಹವಾಗಿತ್ತು. ಶಾಸಕ ಬೇಳೂರು ಗೋಪಾಲಕೃಷ್ಣ ಮೆರವಣಿಗೆಯಲ್ಲಿ ಪಾಲ್ಗೊಂಡು ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕುತ್ತಾ ಮೆರವಣಿಗೆಯಲ್ಲಿ ಸಾಗಿದ್ದು ಕನ್ನಡ ಅಭಿಮಾನಿಗಳಲ್ಲಿ ಹುಮ್ಮಸು ಮೂಡಿಸಿತು.
ಈ ಸಂಧರ್ಭದಲ್ಲಿ ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ,ವಿವಿಧ ಪಕ್ಷಗಳ ಮುಖಂಡರು , ಸಾರ್ವಜನಿಕರು , ಕನ್ನಡ ಅಭಿಮಾನಿಗಳು ಇದ್ದರು.



