Headlines

ದೂನದಲ್ಲಿ ಮಲೆನಾಡು ಕನ್ನಡಿಗರ ಸೇನೆ ವತಿಯಿಂದ ನಾಳೆ ಅದ್ದೂರಿ ಕನ್ನಡ ರಾಜ್ಯೋತ್ಸವ

ದೂನದಲ್ಲಿ ಮಲೆನಾಡು ಕನ್ನಡಿಗರ ಸೇನೆ ವತಿಯಿಂದ ನಾಳೆ ಅದ್ದೂರಿ ಕನ್ನಡ ರಾಜ್ಯೋತ್ಸವ

ರಿಪ್ಪನ್ ಪೇಟೆ : ಇಲ್ಲಿನ ದೂನ ಗ್ರಾಮದ ಮಲೆನಾಡು ಕನ್ನಡಿಗರ ಸೇನೆ ಮತ್ತು ಗೆಳೆಯರ ಬಳಗದ ವತಿಯಿಂದ ದೂನದಲ್ಲಿ ಸೇನೆಯ 3ನೇ ವರ್ಷದ ಸಂಭ್ರಮ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಲೆನಾಡು ಕನ್ನಡಿಗರ ಸೇನೆ ದೂನ ಘಟಕದ ಅಧ್ಯಕ್ಷ ಚಿರಂತ್ ಭಂಡಾರಿ ತಿಳಿಸಿದ್ದಾರೆ.

ಬೆಳಗ್ಗೆ 9.00 ಗಂಟೆಗೆ ದೂನ ಸರ್ಕಲ್‌ನಲ್ಲಿ ಧ್ವಜಾರೋಹಣ ಜರುಗಲಿದ್ದು, ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜು ರೆಡ್ಡಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ಭುವನೇಶ್ವರಿ ತಾಯಿಗೆ ಮಾಲಾರ್ಪಣೆ ನಡೆಯಲಿದೆ ಎಂದರು

ಮಧ್ಯಾಹ್ನ 3.00 ಗಂಟೆಗೆ ದೂನ ಸರ್ಕಲ್‌ನಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಹರತಾಳು ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ , ವೀರೇಶ್ ಆಲುವಳ್ಳಿ , ಎಂ ಎಂ ಪರಮೇಶ್ , ಜಯಮ್ಮ ನಾಗಪ್ಪ , ಈಶ್ವರಪ್ಪಗೌಡ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಕಾರ್ಯಕ್ರಮಕ್ಕೆ ಸ್ಥಳೀಯರು , ಸಂಘಟನಾ ಸದಸ್ಯರು ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.

Exit mobile version