ರಿಪ್ಪನ್‍ಪೇಟೆಯ ರಾಮಕೃಷ್ಣ ವಿದ್ಯಾಲಯದ 5 ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಸ್ಥಾನ
ಬೆಂಗಳೂರು: 2025–26ನೇ ಸಾಲಿನ ರಾಜ್ಯಮಟ್ಟದ 14 ಮತ್ತು 17 ವರ್ಷ ವಯೋಮಿತಿಯೊಳಗಿನ ಬಾಲಕಿಯರ ಕಬ್ಬಡ್ಡಿ ಕ್ರೀಡಾಕೂಟದಲ್ಲಿ ರಿಪ್ಪನ್‍ಪೇಟೆಯ ಶಾರದಾ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿನಿಯರು ದಿಟ್ಟ ಪ್ರದರ್ಶನ ನೀಡಿದ್ದು, ಎರಡೂ ವಿಭಾಗಗಳಲ್ಲಿ ದ್ವಿತೀಯ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಮಿಂಚಿದ ಐದು ಪ್ರತಿಭಾವಂತ ವಿದ್ಯಾರ್ಥಿನಿಯರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಅಪರೂಪದ ಸಾಧನೆ ಮಾಡಿದ್ದಾರೆ.
ಆಯ್ಕೆಯಾದ ಕ್ರೀಡಾಪಟುಗಳು:
1. ಶ್ರೇಯಾ ಬಿ.ಆರ್ — 10ನೇ ತರಗತಿ
2. ಸೋನಾಲಿ — 8ನೇ ತರಗತಿ
3. ಮಾನಸ — 8ನೇ ತರಗತಿ
4. ಕೀರ್ತಿ — 8ನೇ ತರಗತಿ
5. ಆಯುಶ್ರೀ — 7ನೇ ತರಗತಿ
ಈ ಎಲ್ಲ ವಿದ್ಯಾರ್ಥಿನಿಯರು ಮುಂದಿನ ದಿನಗಳಲ್ಲಿ ಹರಿಯಾಣ ಮತ್ತು ಆಂಧ್ರಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ.
ಇವರ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರ ವರ್ಗ, ಪೋಷಕರು ಹಾಗೂ ರಿಪ್ಪನ್ ಪೇಟೆಯ ಎಲ್ಲಾ ಕ್ರೀಡಾಭಿಮಾನಿಗಳು ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದ್ದಾರೆ.ಈ ಸಾಧನೆ ಗ್ರಾಮ–ಪಟ್ಟಣಕ್ಕೆ ಹೆಮ್ಮೆಯ ಸಂಭ್ರಮ ತಂದಿದ್ದು, ಮುಂಬರುವ ರಾಷ್ಟ್ರಮಟ್ಟದ ಪಂದ್ಯಗಳಲ್ಲಿ ಕೂಡ ಇದೇ ರೀತಿ ಕೀರ್ತಿಯನ್ನು ಗಳಿಸಲಿ ಎಂಬುದು ಎಲ್ಲರ ಹಾರೈಕೆ.



