January 11, 2026

ಟೈಮ್ ಪಾಸ್ ಜಾಬ್ ಆಸೆಗೆ 6.78 ಲಕ್ಷ ರೂ ಕಳೆದುಕೊಂಡ ಮಹಿಳೆ

ಟೈಮ್ ಪಾಸ್ ಜಾಬ್ ಆಸೆಗೆ 6.78 ಲಕ್ಷ ರೂ ಕಳೆದುಕೊಂಡ ಮಹಿಳೆ

ಶಿವಮೊಗ್ಗ: ನಗರದ ಮಹಿಳೆಯೊಬ್ಬರು ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಪಾರ್ಟ್‌ ಟೈಮ್‌ ಜಾಬ್‌ನ ಆಸೆಗೆ ಬಿದ್ದು ಸುಮಾರು 6,78,100 ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.

ನಗರದ ಉದ್ಯಮಿ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಬಂದಿದ್ದ ಪಾರ್ಟ್‌ ಟೈಮ್‌ ಕೆಲಸದ ಆಮಿಷಕ್ಕೆ ಬಲಿಯಾಗಿ ಕೇವಲ 5 ದಿನಗಳ ಅಂತರದಲ್ಲಿ ಬರೋಬ್ಬರಿ ₹6,78,100 ರೂಪಾಯಿ ಹಣವನ್ನು ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ದೂರಿನ ಪ್ರಕಾರ, ಅಪರಿಚಿತ ವಂಚಕರು ಎನ್‌ಎಸ್‌ಇ (NSE) ಕಂಪನಿಯ ಉದ್ಯೋಗಿಗಳಂತೆ ನಟಿಸಿದ್ದಾರೆ. ನಂತರ ಮಹಿಳೆಗೆ ಎನ್‌ಎಸ್‌ಇ ಕಂಪನಿಯಲ್ಲಿ ಪಾರ್ಟ್‌ ಟೈಮ್‌ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದು, ಅಷ್ಟೇ ಅಲ್ಲದೆ, ಎನ್‌ಎಸ್‌ಇ ಕಂಪನಿಯಿಂದ ನೀಡಲಾಗುವ ಕೆಲವು ಟಾಸ್ಕ್‌ಗಳನ್ನು ಪೂರ್ಣಗೊಳಿಸಿದರೆ ಭಾರೀ ಪ್ರಮಾಣದ ಲಾಭಾಂಶ ನೀಡುವುದಾಗಿ ನಂಬಿಸಿದ್ದಾರೆ.

ವಂಚಕರ ಮಾತನ್ನು ನಂಬಿದ ಮಹಿಳೆಯು ಸೆಪ್ಟೆಂಬರ್ 24, 2025 ರಿಂದ ಸೆಪ್ಟೆಂಬರ್ 29, 2025ರ ಅವಧಿಯೊಳಗೆ ಒಟ್ಟು 6,78,100 ಹಣವನ್ನು ವಂಚಕರ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಹಣ ವರ್ಗಾಯಿಸಿದ ನಂತರ, ವಂಚಕರು ಅವರಿಗೆ ಯಾವುದೇ ಲಾಭಾಂಶವನ್ನು ಹಿಂತಿರುಗಿಸಿಲ್ಲ. ಅಲ್ಲದೆ, ಮೊತ್ತವನ್ನು ಸಹ ಮರಳಿ ನೀಡದೇ ಮೋಸ ಮಾಡಿದ್ದಾರೆ. ತಮಗೆ ವಂಚನೆಯಾಗಿರುವುದನ್ನು ಅರಿತ ಮಹಿಳೆಯು ಶಿವಮೊಗ್ಗ ಸಿಇಎನ್​ ಕ್ರೈಂ ಪೊಲೀಸ್​ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

About The Author

Exit mobile version