ಸಾಮಾಜಿಕ ಕಳಕಳಿ, ಕೊಡುಗೈದಾನಿ ಹಾಲಸ್ವಾಮಿಗೌಡರಿಗೆ ವೀರಶೈವ ಸಮಾಜಭಾಂದವರ ಭಾವಪೂರ್ಣ ಶ್ರದ್ದಾಂಜಲಿ
ರಿಪ್ಪನ್‌ಪೇಟೆ;-ವ್ಯಕ್ತಿ ಜೀವಂತವಾಗಿದ್ದಾಗ ಮಾಡಿದ ಸಮಾಜಮುಖಿ ಕಾರ್ಯಗಳ ಬಗ್ಗೆ ಜನ ಮಾತನಾಡುವುದಿಲ್ಲ. ಅದೇ ವ್ಯಕ್ತಿ ಮರಣ ಹೊಂದಿದಾಗ ಅವರು ಮಾಡಿದ ಸಾಮಾಜಿಕ ಸತ್ಕಾರ್ಯಗಳು ಮಾತನಾಡುವಂತೆ ಮಾಡುತ್ತವೆ ಎಂಬುದಕ್ಕೆ ಬೆಳಕೋಡು ಹಾಲಸ್ವಾಮಿಗೌಡರೇ ಸಾಕ್ಷಿಯಾಗಿದ್ದಾರೆಂದು ಶ್ರೀಶೈಲ ಜಗದ್ಗುರುಗಳು ಮತ್ತು ಆನಂದಪುರ ಮುರುಘಾರಾಜೇಂದ್ರ ಮಠದ ಜಗದ್ಗುರು ಹೇಳಿದರು.
ಇತ್ತೀಚೇಗೆ ನಿಧನರಾದ ರಿಪ್ಪನ್‌ಪೇಟೆ ಸಮೀಪದ ಬೆಳಕೋಡು ಗ್ರಾಮದ ಹಾಲಸ್ವಾಮಿಗೌಡರಿಗೆ ವೀರಶೈವ ಸಮಾಜ ಭಾಂದವರು ಮತ್ತು ಕುಟುಂಬದವರು ಆಯೋಜಿಸಲಾದ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ದೂರವಾಣಿಯಲ್ಲಿ ತಮ್ಮ ಅಶೀರ್ವಚನ ನೀಡಿ ಹಾಲಸ್ವಾಮಿಗೌಡರು ಸಮಾಜಕ್ಕೆ ದೊಡ್ಡ ಅಸ್ತಿ ಅವರ ಅಕಾಲಿಕ ನಿಧನದಿಂದ ವೀರಶೈವ ಸಮಾಜಕ್ಕೆ ತುಂಬಲಾರದಷ್ಟು ನಷ್ಟವಾಗಿದೆ.ಅವರ ಸೇವಾ ಕ್ಷೇತ್ರಗಳ ಬಗ್ಗೆ ಅವಲೋಕನ ಮಾಡಿದ ಉಭಯ ಜಗದ್ಗುರುಗಳು ಇಂದಿನ ಯುವ ಸಮೂಹ ಅವರ ಅದರ್ಶ ಗುಣಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳುವಂತೆ ತಿಳಿಸಿ ಇದೊಂದು ಸಮಾಜದ ಅನರ್ಘ್ಯ ರತ್ನ ಮೇರು ಪರ್ವತವಿದ್ದಂತೆ ಎಂದು ಹೇಳಿದರು.
ಕೋಣಂದೂರು ಬೃಹನ್ಮಠದ ಷ.ಬ್ರ.ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿ ಮತ್ತು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮ ಮಠದ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮಿಜಿ ದಿವ್ಯಸಾನಿಧ್ಯವಹಿಸಿ ಅಶೀರ್ವಚನ ನೀಡಿ ಜಾತಿಯ ಸಂಕೋಲೆಯಾಗಿ ಸಮಾಜದ ಸಂಘಟನೆಯೊAದಿಗೆ ಕಷ್ಟ ನಷ್ಟದಲ್ಲಿರುವವರನ್ನು ಮೇಲ್ತುವ ಮೂಲಕ ಮಠ ಮಂದಿರಗಳಿಗೆ ಸದಾ ತನುಮನ ಧನವನ್ನು ನೀಡುವ ಮೂಲಕ ಸಮಾಜ ಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಮರೆಯಲಾರದ ಮಾಣಿಕ್ಯವಾಗಿ ಇಂದಿನ ಯುವ ಜನಾಂಗಕ್ಕೆ ಸ್ಪೋರ್ತಿಯ ಚಿಲುಮೆಯಂತಾಗಿದ್ದಾರೆಂದರು.
ಭಾವಪೂರ್ಣ ಶ್ರದ್ದಾಂಜಲಿ ಸಭೆಯಲ್ಲಿ ವೀರಶೈವ ಸಮಾಜದ ಉಪಾಧ್ಯಕ್ಷ ಜಿ.ಎಂ.ದುಂಡರಾಜ್‌ಗೌಡರು, ಜಿಲ್ಲಾ ಬಿಜೆಪಿ ಮುಖಂಡ ಟಿ.ಡಿ.ಮೇಘರಾಜ್, ಅಕ್ಷಯಸಾಗರ ಸೌಹಾರ್ಧ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಜಿ.ದಿನೇಶ ಬರದವಳ್ಳಿ, ಕೋಣಂದೂರು ಉದ್ಯಮಿ ಕೆ.ಆರ್.ಪ್ರಕಾಶ್,ನ್ಯಾಯವಾದಿ ಎಂ.ಎನ್.ದಿನೇಶ,ಖೈರಾ ಕೆ.ಆರ್.ರಾಜು, ಗ್ರಾಮ ಪಂಚಾಯಿತ್ ಸದಸ್ಯ ಡಿ.ಈ.ಮಧುಸೂಧನ್, ರಶ್ಮಿ,ವಿನುತಾ ಇನ್ನಿತರರು ನುಡಿನಮನ ಸಲ್ಲಿಸಿದರು.
