ರಿಪ್ಪನ್‌ಪೇಟೆ ಪೊಲೀಸರ ದಾಳಿ: ಅಕ್ರಮ ಗೋ ಸಾಗಾಣಿಕೆ ಪತ್ತೆ, ಮೂವರ ಬಂಧನ
ರಿಪ್ಪನ್‌ಪೇಟೆ – ಅಕ್ರಮವಾಗಿ ಗೋವುಗಳನ್ನು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿಯ ಆಧಾರದ ಮೇಲೆ ಗ್ರಾಮಸ್ಥರ ಸಹಕಾರದೊಂದಿಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಅವರ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ಜಾನುವಾರು ಸಹಿತ ಆರೋಪಿಗಳನ್ನು ಬಂಧಿಸಿದೆ.
ಪೊಲೀಸರು ಬಂಧಿಸಿದವರನ್ನು ನಲ್ಲಿಹೊಂಡಾ ಗ್ರಾಮದ ಅರಣ್ಯ ಇಲಾಖೆಯ ವಾಚರ್ ಹಾಗೂ ತಾಲ್ಲೂಕು ದಿನಗೂಲಿ ನೌಕರರ ಸಂಘದ ಅಧ್ಯಕ್ಷ ರಮೇಶ್ ಹಾಗೂ ಶಿಕಾರಿಪುರ ಬೆಂಡೆಕಟ್ಟ ಗ್ರಾಮದ ಹರೀಶ್ ಮತ್ತು ಪುನೀತ್ ಎಂದು ಗುರುತಿಸಲಾಗಿದೆ.
ಇವರು ಅಕ್ರಮ ಗೋ ಸಾಗಾಣಿಕೆಯಲ್ಲಿ ತೊಡಗಿದ್ದು, ಮೂರು ಮಲೆನಾಡು ಗಿಡ್ಡಗಳನ್ನು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸ್ಥಳೀಯರಾದ ಹರತಾಳು ಗೋಪಾಲಕೃಷ್ಣ, ಅಭಿಶೆಟ್ಟಿ, ಶರತ್, ಸುರೇಶ್, ನಾಗೇಶ, ನಾಗರಾಜ್, ಚಂದ್ರು, ಚಂದ್ರಶೇಖರ್, ಕಿರಣ್ ಮತ್ತಿತರರು ಪೊಲೀಸರಿಗೆ ಸಹಕರಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…
ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ Bhadravati police arrested…
ರಿಪ್ಪನ್‌ಪೇಟೆ: ವಾಹನದಿಂದ ಬಿದ್ದ ಕರುವನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಚಾಲಕ; ಕರು ಸ್ಥಿತಿ ಚಿಂತಾಜನಕ , ಸ್ಥಳೀಯರ ಆಕ್ರೋಶ !! A…
ಈಸ್ಟ್‌ವೆಸ್ಟ್ ಬಸ್ ಮಾಲೀಕ ತಲ್ಕೀನ್ ಅಹ್ಮದ್ ನಿಧನ Talkeen Ahmed, owner of East West Bus institution and…
ಪತ್ರಕರ್ತನ ಮನೆಗೆ ಕನ್ನ ; ₹6.57 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು Thieves broke into journalist Shi.…
ಚೋರಡಿ ಲಾಡ್ಜ್‌ನಲ್ಲಿ ಪೊಲೀಸರಿಗೆ ಚಾಕು ತೋರಿಸಿ ಐವರು ಪರಾರಿ; ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು ಶಿವಮೊಗ್ಗ: ಅನುಮಾನಾಸ್ಪದವಾಗಿ ಲಾಡ್ಜ್‌ನಲ್ಲಿ ತಂಗಿದ್ದ…