Headlines

ಅಭಿಮಾನಿಗಳ ಹೃದಯದಲ್ಲಿ ಪುನೀತ್ ರಾಜ್‍ಕುಮಾರ್ ಎಂದೆಂದಿಗೂ ಶಾಶ್ವತ – ಜಿ ಆರ್ ಗೋಪಾಲಕೃಷ್ಣ

ಅಭಿಮಾನಿಗಳ ಹೃದಯದಲ್ಲಿ ಪುನೀತ್ ರಾಜ್‍ಕುಮಾರ್ ಎಂದೆಂದಿಗೂ ಶಾಶ್ವತ – ಜಿ ಆರ್ ಗೋಪಾಲಕೃಷ್ಣ

ರಿಪ್ಪನ್‌ಪೇಟೆ : “ತಮ್ಮ ಅಭಿನಯ, ಸರಳತೆ ಮತ್ತು ಹೃದಯ ಶ್ರೀಮಂತಿಕೆಯ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇಂದಿಗೂ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿದ್ದಾರೆ” ಎಂದು ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಜಿ.ಆರ್ ಗೋಪಾಲಕೃಷ್ಣ ಹೇಳಿದರು.

ಪಟ್ಟಣದ ವಿನಾಯಕ ಸರ್ಕಲ್‌ನಲ್ಲಿ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ಅಭಿಮಾನಿ ಬಳಗದ ವತಿಯಿಂದ ಮಂಗಳವಾರ ನಡೆದ 3ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅಪ್ಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಅವರು ಮುಂದುವರೆದು, “ಪುನೀತ್ ರಾಜ್‌ಕುಮಾರ್ ಸದ್ದಿಲ್ಲದೆ ಜನಪರ ಕೆಲಸಗಳನ್ನು ಮಾಡುತ್ತಿದ್ದರು. ಆ ಸೇವಾಭಾವವೇ ಅವರನ್ನು ಇಂದಿಗೂ ಜನಮನಗಳಲ್ಲಿ ಶಾಶ್ವತಗೊಳಿಸಿದೆ. ಅವರ ಪ್ರೀತಿಗೆ ಮೌಲ್ಯ ಕಟ್ಟಲು ಸಾಧ್ಯವಿಲ್ಲ. ಅವರ ಜೀವನ ಸ್ಮರಣೀಯ ಪಾಠ. ಪುನೀತ್‌ ಅವರ ಮಾನವೀಯ ಮೌಲ್ಯಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು” ಎಂದು ಹೇಳಿದರು.

ಕಸ್ತೂರಿ ಕನ್ನಡ ಸಂಘದ ಮಾಜಿ ಅಧ್ಯಕ್ಷ ಅರ್ ಎ ಚಾಬುಸಾಬ್ ಮಾತನಾಡಿ ಬಾಲ್ಯದಲ್ಲಿಯೇ ಸಿನಿಮಾ ಜಗತ್ತಿಗೆ ಕಾಲಿಟ್ಟ ಅಪ್ಪು ಪ್ರೇಕ್ಷಕರಿಗೆ ಮನರಂಜನಾ ಸಿನಿಮಾದ ಔತಣ ನೀಡಿದರು. ನಾಲ್ಕನೇ ವರ್ಷದ ಸ್ಮರಣೆಯ ಸಂದರ್ಭದಲ್ಲಿ, ಅವರ ಸಮಾಜಮುಖಿ ಸಂದೇಶ ನೀಡುವ ಚಲನಚಿತ್ರಗಳು ಕೇವಲ ಮನರಂಜನೆಯನ್ನು ಮಾತ್ರವಲ್ಲದೆ ಪ್ರಮುಖ ಸಾಮಾಜಿಕ ಸಂದೇಶಗಳನ್ನ ನೀಡುವಂತಹ ಸಿನಿಮಾಗಳನ್ನ ಮಾಡಿ ನಮ್ಮೆಲ್ಲರಿಗೆ ಪ್ರೇರಣೆ ನೀಡಿದ್ದಾರೆ.ಅಪ್ಪು ಕೇವಲ ಸಿನೆಮಾಗಳಿಗೆ ಮಾತ್ರ ಸೀಮಿತವಾಗಿರದೆ ಸಿನೆಮಾಗಳಲ್ಲಿ ತೋರಿಸಿದ ರೀತಿಯಲ್ಲೇ ನಿಜ ಜೀವನದಲ್ಲಿ ಅನೇಕ ಸಮಾಜಮುಖಿ ಸೇವೆಗಳನ್ನು ಮಾಡಿ ಜನರಿಗೆ ಸ್ಪೂರ್ತಿ ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪುನೀತ್ ಅಭಿಮಾನಿ ಬಳಗದ ಅಧ್ಯಕ್ಷೆ ಶೀಲಾ ಆರ್.ಡಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಆಚಾರ್ಯ, ಕಸ್ತೂರಿ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್, ಹಸನಬ್ಬ ಸಂಘದ ಪ್ರಮುಖ ಬಂಡಿ ನೇಮಣ್ಣ, ಆಸೀಫ್ ಭಾಷಾ, ನಿರೂಪ್ ಕುಮಾರ್, ಲೇಖನಾ ಚಂದ್ರನಾಯ್ಕ್, ಸಾಜೀದಾ ಹನೀಫ಼್ , ಪಿಯೂಸ್ ರೊಡ್ರಿಗಸ್, ಮಂಜುನಾಥ್ ಮಳವಳ್ಳಿ, ವಾಣಿ ಗೋವಿಂದಪ್ಪಗೌಡ, ಪ್ರಕಾಶ್ ಪಾಲೇಕರ್, ಶಂಶುದ್ದೀನ್ ಆರ್.ಎಸ್, ವಿಜಯ್ ಮಳವಳ್ಳಿ, ನಿರಂಜನ್ ಕನ್ನಡಿಗ, ರಾಘು ಇಂಜಿನಿಯರ್ , ಅರುಣ್ ಮಲ್ಲಾಪುರ , ಮೈದೀನ್ ಆರ್ ಹೆಚ್ ಹಾಗೂ ಇನ್ನಿತರರು ಹಾಜರಿದ್ದರು.

Exit mobile version