ಧರ್ಮಸ್ಥಳಕ್ಕೆ ಹೋಗಿ ವೀರೇಂದ್ರ ಹೆಗ್ಗಡೆಯವರ ಬಳಿ ಕ್ಷಮೆ ಕೇಳುತ್ತೇನೆ – ಸುಜಾತಾ ಭಟ್

ಧರ್ಮಸ್ಥಳಕ್ಕೆ ಹೋಗಿ ವೀರೇಂದ್ರ ಹೆಗ್ಗಡೆಯವರ ಬಳಿ ಕ್ಷಮೆ ಕೇಳುತ್ತೇನೆ – ಸುಜಾತಾ ಭಟ್

ಧರ್ಮಸ್ಥಳ ಅನನ್ಯ ಪ್ರಕರಣ – ಸುಜಾತ ಭಟ್ ಬಂಡವಾಳ ಬಯಲಿಗೆಳೆದು ಪ್ರಕರಣಕ್ಕೆ ತಿರುವು ತಂದ ಮೊದಲ ಮಾಧ್ಯಮ ಪೋಸ್ಟ್ ಮ್ಯಾನ್ ನ್ಯೂಸ್ ಕನ್ನಡ ..

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದ ಶವಗಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನನ್ಯಾ ಭಟ್ ಕಟ್ಟುಕತೆ ಪ್ರಕರಣದ ತನಿಖೆಯನ್ನು ಎಸ್‌ಐಟಿ (SIT) ಮುಂದುವರಿಸಿದೆ. ಈ ಪ್ರಕರಣದ ಹಿಂದೆ ಬಹುಭಾಷಾ ನಟನ ಸಹೋದರನ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಎಸ್‌ಐಟಿ ನೋಟಿಸ್ ನೀಡಲು ಸಿದ್ಧತೆ ನಡೆಸುತ್ತಿದೆ.

ಇದರ ಮಧ್ಯೆ, ಪ್ರಕರಣದ ಪ್ರಮುಖ ವ್ಯಕ್ತಿ ಸುಜಾತಾ ಭಟ್ ತಮ್ಮ ತಪ್ಪನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. “ನನ್ನ 60 ವರ್ಷದ ಜೀವನದಲ್ಲಿ ಇದು ಕಪ್ಪು ಚುಕ್ಕಿ. ನಾನು ತಪ್ಪು ಮಾಡಿದ್ದೇನೆ. ಧರ್ಮಸ್ಥಳಕ್ಕೆ ಹೋಗಿ ವೀರೇಂದ್ರ ಹೆಗ್ಗಡೆಯವರ ಬಳಿ ಕ್ಷಮೆ ಕೇಳುತ್ತೇನೆ. ಕಲ್ಲು ಹೊಡೆಯಲು ಸಿದ್ಧನಿದ್ದೇನೆ ಎಂಬ ತಪ್ಪಿಗೆ ಪ್ಪು ಕಾಣಿಕೆ ಹಾಕುತ್ತೇನೆ,” ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.

ಸುಜಾತಾ ಭಟ್ ತಮ್ಮ ಹೇಳಿಕೆಯಲ್ಲಿ, ನಟನ ಸಹೋದರನ ಮನೆಯಲ್ಲಿ ವಾಸಂತಿ ಇರಬಹುದು ಎಂಬ ಶಂಕೆಯನ್ನು ತನಿಖೆಯ ಸಮಯದಲ್ಲೇ ವ್ಯಕ್ತಪಡಿಸಿದ್ದಾಗಿ ತಿಳಿಸಿದ್ದಾರೆ. ನಟನ ಸಹೋದರ ಕಾಲಿವುಡ್ ಕ್ಷೇತ್ರದ ನಟನಾಗಿದ್ದು, ವಾಸಂತಿಯ ಗಂಡನ ಗೆಳೆಯನಾಗಿರುವ ಮಾಹಿತಿ ಹೊರಬಿದ್ದಿದೆ. ಚೆನ್ನೈನಲ್ಲಿರುವ ಆತನ ವಿಳಾಸ ಪತ್ತೆಹಚ್ಚುವ ಕಾರ್ಯದಲ್ಲಿ ಎಸ್‌ಐಟಿ ನಿರತರಾಗಿದೆ.

ಧರ್ಮಸ್ಥಳ ಅನನ್ಯ ಪ್ರಕರಣ – ಸುಜಾತ ಭಟ್ ಬಂಡವಾಳ ಬಯಲಿಗೆಳೆದು ಪ್ರಕರಣಕ್ಕೆ ತಿರುವು ತಂದ ಮೊದಲ ಮಾಧ್ಯಮ ಪೋಸ್ಟ್ ಮ್ಯಾನ್ ನ್ಯೂಸ್ ಕನ್ನಡ ..

ಧರ್ಮಸ್ಥಳ ಪ್ರಕರಣವು ರಾಜ್ಯದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದಾಗ, ಈ ಪ್ರಕರಣದ ನಿಜ ಚಿತ್ರಣವನ್ನು ಹೊರತೆಗೆದು ಟ್ವಿಸ್ಟ್ ತಂದವರು ಪತ್ರಕರ್ತ ರಫಿ ರಿಪ್ಪನ್ ಪೇಟೆ ಮಗಳು ಅನನ್ಯ ಭಟ್ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾಳೆ ಎಂದು ರಾಜ್ಯದ ಜನರ ದಿಕ್ಕು ತಪ್ಪಿಸಿದ್ದ ಸುಜಾತಾ ಭಟ್ ಕುರಿತು ಅಸಲಿ ಮಾಹಿತಿ ಬಹಿರಂಗಪಡಿಸಿದ ಮೊದಲ ಪತ್ರಕರ್ತರೂ ಇವರು.

ಆರಂಭದಲ್ಲಿ “ಸೌಜನ್ಯ” ಪ್ರಕರಣದಿಂದ ಆರಂಭವಾದ ಈ ಕಥೆ, ನಂತರ “ಅನನ್ಯ” ಎಂಬ ಹೆಸರಿನ ಹುಡುಗಿಯ ಕತೆಗೂ ತಲುಪಿತು. ಎ.ಐ. ವಿಡಿಯೋ ಮೂಲಕ ದೇವಸ್ಥಾನದ ವಿರುದ್ಧ ಅಪಪ್ರಚಾರ ನಡೆಯಿತು. ಸಮೀರ್ ಎಂಬ ಯೂಟ್ಯೂಬರ್ ಮಾಡಿದ ವಿಡಿಯೋ ಜನರನ್ನು ಗೊಂದಲಕ್ಕೀಡಾಗುವಂತೆ ಮಾಡಿತ್ತು. ನಂತರ ಭೀಮ ಎಂಬಾತ “ನಾನು ಇಲ್ಲೇ ಕೆಲಸ ಮಾಡಿದ್ದೆ, ಶವಗಳನ್ನು ಹೂತ್ತಿದ್ದೇನೆ” ಎಂದು ಹೇಳಿ ಜನರ ವಿಶ್ವಾಸ ಪಡೆದುಕೊಂಡ. ಅದೇ ವೇಳೆಗೆ ಮತ್ತೊಬ್ಬ ಮಹಿಳೆ “ನಾನು ಸುಜಾತಾ ಭಟ್, ನನ್ನ ಮಗಳು ಅನನ್ಯ ನಾಪತ್ತೆಯಾಗಿದೆ” ಎಂದು ಹೇಳಿ ಕಥೆಗೆ ಹೊಸ ತಿರುವು ನೀಡಿದರು.

ಇಷ್ಟೆಲ್ಲ ಗೊಂದಲ ನಡೆಯುತ್ತಿದ್ದಾಗ, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ತೀವ್ರಗೊಳ್ಳುತ್ತಿತ್ತು. ಸರ್ಕಾರದ ಎಸ್‌ಐಟಿ ತನಿಖೆಯೂ ಆರಂಭವಾಯಿತು. ಆದರೆ ಶವ ಪತ್ತೆಯಾಗದೆ ಪ್ರಕರಣ ಸಸ್ಪೆನ್ಸ್‌ನಲ್ಲೇ ಮುಂದುವರಿಯಿತು.

ಇಲ್ಲದ ಮಗಳ ನಿಗೂಡ ರಹಸ್ಯ ಕಥೆಗೆ POSTMAN NEWS ಎಂಟ್ರಿ

ಎಸ್ ಐಟಿ ಮೂಲದಿಂದ ಸುಜಾತ ಭಟ್ ಗೂ ರಿಪ್ಪನ್ ಪೇಟೆಗೂ ಲಿಂಕ್ ಇರುವ ಬಗ್ಗೆ ದೊರೆತ ಸಣ್ಣ ಸುಳಿವಿನ ಆಧಾರದ ಮೇಲೆ ಪೋಸ್ಟ್ ಮ್ಯಾನ್ ನ್ಯೂಸ್ ಸಂಪಾದಕ ,ಯುವ ಪತ್ರಕರ್ತ ರಫಿ ರಿಪ್ಪನ್ ಪೇಟೆ ಕೂಡಲೇ ಕಾರ್ಯಪ್ರವೃತ್ತರಾಗಿ ಸುಜಾತಾ ಭಟ್ ಜಾಡು ಹಿಡಿದು ತನಿಖಾ ವರದಿ ಕೈಗೊಂಡು ಸುಜಾತ ಭಟ್ 2000 ನೇ ಇಸವಿಯಲ್ಲಿ ಸುಜಾತ ಬಾಳಿಗ ಆಗಿ ವಾಸವಿದ್ದ ಮನೆ ಹುಡುಕಿ ಅಲ್ಲಿನ ಅಕ್ಕಪಕ್ಕ ಮನೆಯವರು ಹಾಗೂ ಸ್ಥಳೀಯರಿಂದ ಮಾಹಿತಿಯನ್ನು ಸಂಗ್ರಹಿಸಿದರು. ಅಲ್ಲದೆ ಕಮಲವಾಣಿ ಮತ್ತು ಸುಧಾ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಸುಜಾತಾ ಭಟ್ ಸಂಬಂಧಿತ ಲೇಖನಗಳನ್ನು ತೆಗೆಯುವ ಮೂಲಕ ಮಹತ್ವದ ಸುಳಿವುಗಳನ್ನು ಪತ್ತೆ ಹಚ್ಚಿದ್ದರು.

ವ್ಯವಸ್ಥಿತ ಅಪಪ್ರಚಾರದಿಂದ ದೇಶಾದ್ಯಂತ ಸುದ್ದಿಯಾಗಿದ್ದ ಅನನ್ಯ ಭಟ್ ಪ್ರಕರಣದಲ್ಲಿ ಸುಜಾತಾ ಭಟ್ ಅವರಿಗೆ ಮಗಳೇ ಇಲ್ಲ ಎಂಬ ಸತ್ಯ ಬಹಿರಂಗಪಡಿಸಿದರು. ಈ ಸುದ್ದಿ ಹೊರಬಿದ್ದ ಕೂಡಲೇ ಮೈನ್ ಸ್ಟ್ರೀಮ್ ಮಾದ್ಯಮಗಳಲ್ಲೂ ಅವರ ವೀಡಿಯೋಗಳು ಹರಿದಾಡಿ ಎಲ್ಲೆಡೆ ಸಂಚಲನ ಮೂಡಿಸಿತು ನಂತರ ಧರ್ಮಸ್ಥಳ ಪರವಾಗಿ ಜನತೆ ಪ್ರತಿಭಟನೆಯಲ್ಲಿ ತೊಡಗಿದರು. ದೇವಸ್ಥಾನದ ವಿರುದ್ಧ ಮಾತನಾಡುತ್ತಿದ್ದವರ ಬಾಯಿಗೆ ಬೀಗ ಬಿತ್ತು ಎನ್ನಬಹುದು.

ಇಂದು ಯಾವುದೇ ಟಿವಿ ಮಾಧ್ಯಮಗಳು “ಮೊದಲ ಸುದ್ದಿ ನಮ್ಮದು” ಎಂಬ ಟ್ಯಾಗ್ ಹಾಕಿಕೊಳ್ಳಬಹುದಾದರೂ, ಧರ್ಮಸ್ಥಳ ಪ್ರಕರಣದಲ್ಲಿ ತಮ್ಮದೇ ಸ್ಥಳೀಯ ಮಾದ್ಯಮದಲ್ಲಿ ಸುದ್ದಿ ಬಿತ್ತರಗೊಳಿಸಿ ರಾಜ್ಯಮಟ್ಟದ ಚಾನೆಲ್ ಗಳು ತಮ್ಮತ್ತ ತಿರುಗುವಂತೆ ಮಾಡಿ ದೇವಸ್ಥಾನದ ವಿಚಾರದಲ್ಲಿ ಜನರ ಮನಸ್ಸು ತಿರುವು ಪಡೆಯಲು ಕಾರಣವಾದವರು POSTMAN NEWS ತಂಡ ಎಂಬುವುದರಲ್ಲಿ ಸಂಶಯವಿಲ್ಲ.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಸಾಗರ ತಾಲೂಕಿನ ಮಡಸೂರಿನಲ್ಲಿ ವ್ಯಕ್ತಿ ಹತ್ಯೆ: ಅಡಿಕೆ ತೋಟಕ್ಕೆ ಔಷಧಿ ಹೊಡೆಯಲು ತೆರಳಿದ್ದ ವೇಳೆ ಕೃತ್ಯ

ಸಾಗರ ತಾಲೂಕಿನ ಮಡಸೂರಿನಲ್ಲಿ ವ್ಯಕ್ತಿ ಹತ್ಯೆ: ಅಡಿಕೆ ತೋಟಕ್ಕೆ ಔಷಧಿ ಹೊಡೆಯಲು ತೆರಳಿದ್ದ ವೇಳೆ ಕೃತ್ಯ A man identified…

1 day ago

ಚಾನೆಲ್‌ನಲ್ಲಿ ಈಜಲು ತೆರಳಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೀರುಪಾಲು

ಚಾನೆಲ್‌ನಲ್ಲಿ ಈಜಲು ತೆರಳಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೀರುಪಾಲು SSLC student Krishna drowned while swimming in Tunga Channel…

1 day ago

ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆದ ಈದ್ ಮಿಲಾದ್ ಮೆರವಣಿಗೆ

ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆದ ಈದ್ ಮಿಲಾದ್ ಮೆರವಣಿಗೆ Shivamogga witnessed a grand and peaceful Eid Milad procession…

1 day ago

ಹುಂಚ ಆಸ್ಪತ್ರೆಯ ಶವಾಗಾರಕ್ಕೆ ಕೊನೆಗೂ ‘ಮುಹೂರ್ತ’: DHO ಭೇಟಿ, ಬಾಕಿ ಕಾಮಗಾರಿ ಆರಂಭ

ಹುಂಚ ಶವಾಗಾರಕ್ಕೆ ಕೊನೆಗೂ ‘ಮುಹೂರ್ತ’: DHO ಭೇಟಿ, ಬಾಕಿ ಕಾಮಗಾರಿ ಆರಂಭ Postman News report brings action on…

1 day ago

ಸಿದ್ದರಮಟ್ಟಿ ಬಳಿ ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ, ₹31,350 ಮೌಲ್ಯದ ಗಾಂಜಾ ಜಪ್ತಿ

ಸಿದ್ದರಮಟ್ಟಿ ಬಳಿ ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ, ₹31,350 ಮೌಲ್ಯದ ಗಾಂಜಾ ಜಪ್ತಿ Two accused persons were…

1 day ago

ಬೀದಿ ನಾಯಿಗಳ ದಾಳಿಗೆ ಆರು ಕುರಿ ಮರಿಗಳು ಸಾವು

ಬೀದಿ ನಾಯಿಗಳ ದಾಳಿ: ಆರು ಕುರಿಗಳು ಸಾವು Six sheep belonging to a resident of Sagar were…

1 day ago