
ಲವ್ ಮ್ಯಾರೇಜ್ ಆಗಿ ಎರಡೇ ವರ್ಷಕ್ಕೆ ಗೃಹಿಣಿ ನಿಗೂಢ ಸಾವು – ನಂಬಿದಾಕೆಗೆ ಚಟ್ಟ ಕಟ್ಟಿದ್ನಾ ಪತಿ?
Housewife mysteriously dies after just two years of love marriage
ಇಬ್ಬರು ಪರಸ್ಪರ ಪ್ರೀತಿಸಿ ಎರಡು ವರ್ಷ ಹಿಂದೆ ಅಷ್ಟೇ ಮದುವೆಯಾಗಿದ್ದರು. ಪ್ರೀತಿಯ ಮದುವೆಗೊಂದು ಒಂದೂವರೆ ವರ್ಷದ ಮಗು ಸಹ ಇದೆ. ಸ್ವರ್ಗಕ್ಕೆ ಕಿಚ್ಚು ಹಚ್ಚುವಂಥಾ ಸಂಸಾರ ಇದ್ದಾಗ ಮಹಿಳೆ ನಿಗೂಢವಾಗಿ ಸಾವನ್ನಪ್ಪಿದ್ದಾಳೆ.
ದಾವಣಗೆರೆ ಜಿಲ್ಲೆಯ ಚನ್ನಗರಿ ತಾಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜುನೇರಾ ಕೌಸರ್ (19) ಮೃತಪಟ್ಟ ದುರ್ಧೈವಿಯಾಗಿದ್ದಾರೆ.
ಜಿಶಾನ್ (23) ಮತ್ತು ಜುನೇರಾ ಕೌಸರ್ (19) ಇಬ್ಬರು ಪ್ರೀತಿಸಿ ಮದುವೆಯಾಗಿ ಎರಡು ವರ್ಷವಾಗಿತ್ತು. ದಂಪತಿಗೆ ಒಂದೂವರೆ ವರ್ಷದ ಮಗು ಸಹ ಇದೆ. ಪ್ರೀತಿ ಮದುವೆಯ ನಂತರ ಮೊದಲಿಗೆ ಸೌಹಾರ್ದ ಸಂಸಾರ ಮುಂದುವರಿದರೂ, ಕಳೆದ ಕೆಲ ತಿಂಗಳುಗಳಿಂದ ಪತಿ-ಪತ್ನಿ ನಡುವೆ ಮನಸ್ತಾಪ ಹೆಚ್ಚಾಗಿ ಪದೇ ಪದೇ ಜಗಳ ನಡೆಯುತ್ತಿದ್ದುದಾಗಿ ಮೂಲಗಳು ತಿಳಿಸಿವೆ.
ಪತಿಯ ಕಿರುಕುಳ ತಾಳಲಾರದೆ ಜುನೇರಾ ಕಳೆದ ವಾರ ತವರು ಮನೆ ಸೇರಿಕೊಂಡಿದ್ದಳು. ನಂತರ ಹೆತ್ತವರು ಮತ್ತು ಸಂಬಂಧಿಕರ ಮಧ್ಯಸ್ಥಿಕೆಯಿಂದ ರಾಜೀ ಪಂಚಾಯ್ತಿ ನಡೆದು ಮಗಳು ಗಂಡನ ಮನೆಗೆ ಮರಳಿದ್ದರು. ಆದರೆ ಕೇವಲ ಮೂರೇ ದಿನಗಳಲ್ಲೇ ಜುನೇರಾ ಅನುಮಾನಾಸ್ಪದ ಸಾವು ಕಂಡಿದ್ದಾಳೆ.
ಮನೆಯ ಬೆಡ್‌ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಜುನೇರಾಳನ್ನು ತುರ್ತಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅ.26ರಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.
ಮೃತಳ ದೇಹದಲ್ಲಿ ಹಲ್ಲೆ ಗುರುತುಗಳು ಸ್ಪಷ್ಟವಾಗಿ ಕಂಡುಬಂದ ಹಿನ್ನೆಲೆಯಲ್ಲಿ, ಹೆತ್ತವರು ಪತಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದು “ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಬೆಳೆಸಿ, ಮಗಳನ್ನು ಮಾನಸಿಕ-ದೈಹಿಕ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ” ಎಂದು ದೂರಿದ್ದಾರೆ. ಪತ್ನಿ ಮೃತಪಟ್ಟಿರುವುದು ಖಚಿತವಾದ ನಂತರ ಪತಿ ಜಿಶಾನ್ ಸ್ವಯಂ ಚನ್ನಗಿರಿ ಠಾಣೆಗೆ ಹಾಜರಾಗಿ ಶರಣಾಗತಿಯಾಗಿದ್ದಾನೆ.
ಚನ್ನಗಿರಿ ಪೊಲೀಸರು ಅನುಮಾನಾಸ್ಪದ ಸಾವು ಎಂಬ ಅಡಿಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.
Housewife mysteriously dies after just two years of love marriage




